ಸಾಮಾಜಿಕ ಅಂತರದೊಂದಿಗೆ ಧಾನ್ಯ ಖರೀದಿಗೆ ಅವಕಾಶ : ಸಿ ಎಂ

ಬೆಂಗಳೂರು

     ಕರೊನಾ ಲಾಕ್‌ಡೌನ್‌ನಿಂದ ರೈತರಿಗಾಗಿರುವ ಅನಾನುಕೂಲ ಪರಿಹಾರಕ್ಕಾಗಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಕೃಷಿ ಸಹಕಾರ ತೋಟಗಾರಿಕೆ ರೇಷ್ಮೆ ಸಂಬಂಧ ಸಚಿವರು ಹಾಗೂ ಅಧಿಕಾರಿಗಳ ಜೊತೆ ಮಹತ್ತರ ಚರ್ಚೆ ನಡೆಸಿದರು.

     ಸಭೆ ಬಳಿಕ ಮಾತನಾಡಿದ ಯಡಿಯೂರಪ್ಪ ಸಾಮಾಜಿಕ ಅಂತರದೊಂದಿಗೆ ಆಹಾರ ಧಾನ್ಯ ಖರೀದಿ ಮಾಡಲು ಅವಕಾಶವಿದೆ. ಸಚಿವರಾದ ಬಿ.ಸಿ.ಪಾಟೀಲ್, ಆರ್.ಅಶೋಕ್, ಬಾಲಚಂದ್ರ ಜಾರಕಿಹೊಳಿ, ನಾರಾಯಣಗೌಡ ಹಾಗೂ ಎಸ್.ಟಿ.ಸೋಮಶೇಖರ್ ಹಾಗೂ ಇಲಾಖಾಧಿಕಾರಿಗಳ ಜೊತೆ ಕೃಷಿ ಸಹಕಾರ ತೋಟಗಾರಿಕೆ ರೇಷ್ಮೆ ಸಂಬಂಧ ಸಮಗ್ರ ಚರ್ಚೆ ನಡೆಸಲಾಗಿದೆ ಎಂದರು.

     ನಾಡಿನ ರೈತರು ಸಹ ಮಾರುಕಟ್ಟೆಗೆ ಪರಿಕರಗಳನ್ನು ಸಾಗಿಸಲು ವಿಶೇಷ ಸೂಚನೆ ನೀಡಲಾಗಿದೆ.ಚೆಕ್‌ಪೋಸ್ಟಿನಲ್ಲಿ ಯಾವುದೇ ಕಾರಣಕ್ಕೂ ರೈತರವಸ್ತುಗಳನ್ನು ವಾಹನಗಳನ್ನು ತಡೆಯುವಂತಿಲ್ಲ.ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಕರ್ನಾಟಕದಿಂದ ಕಲ್ಲಂಗಡಿ, ಟೊಮಾಟೋ ಹೆಚ್ಚು ಬೆಳೆಯಲಾಗಿದೆ.

     ಈ ಬೆಳೆಗಳಿಗೆ ಕರೊನಾದಿಂದ ಬೆಲೆ ಕುಸಿದಿದೆ. ಟೊಮಾಟೋ ಹಾಳಾಗದಂತೆ ಕೆಚೆಪ್ ತಯಾರಿಕೆಗೆ ಸೂಚನೆ ಬೆಳಿಗ್ಗೆಯಿಂದ ರಾತ್ರಿವರೆಗೂ ಹಾಪ್ ಕಾಮ್ಸ್ ತೆರೆಯಲು ಸೂಚಿಸಲಾಗಿದೆ.ಕೋಳಿ ಮೊಟ್ಟೆ ತಿನ್ನುವುದರಿಂದ ಆರೋಗ್ಯ ಹಾಳಾಗದು.ಇಂತಹ ವದಂತಿಗಳಿಗೆ ಕಿವಿಕೊಡಬಾರದು.ಹಾಪ್ ಕಾಮ್ಸ್‌ನಲ್ಲಿ ಕೋಳಿ ಮೊಟ್ಟೆ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ‌

     ಹೊರರಾಜ್ಯಗಳಿಗೆ ರೈಲಿನ ಮೂಲಕ ರಾಜ್ಯದ ತರಕಾರಿ ಹಣ್ಣುಹಂಪಲು ಮಾರಲು ಅವಕಾಶ ಕಲ್ಪಿಸಲಾಗುತ್ತಿದೆ .ಮಾರುಕಟ್ಟೆಯಲ್ಲಿ ದಾಸ್ತಾನು ಕೊರತೆಯಿಲ್ಲ.ಜನರು ತಾಜಾ ತರಕಾರಿ ಖರೀದಿಸಬಹುದು.ಯಾವುದೇ ಕಾರಣಕ್ಕೂ ಸ್ಕೇರ್ ಸಿಟಿಯಾಗದು‌‌.ಕೆಎಂಎಫ್‌ನಲ್ಲಿ ಉಳಿದ ಹಾಲನ್ನು ಸರ್ಕಾರವೇ ಖರೀದಿಸಿ ಏಪ್ರಿಲ್ 14ರವರೆಗೆ ಬಡವರಿಗೆ ಉಚಿತವಾಗಿ ಹಾಲು ವಿತರಿಸಲಾಗುವುದು.

     ನಿನ್ನೆಯವರೆಗಿನ ಪರಿಸ್ಥಿತಿಯೇ ಬೇರೆ.ಇಂದಿನ ಸ್ಥಿತಿಯೇ ಬೇರೆ.ಕರ್ನಾಟಕದ ಪ್ರತಿಯೊಂದು ಮನೆಯಲ್ಲಿಯೂ ನಿಂಬೆಹಣ್ಣು ಉಪಯೋಗಿಸುತ್ತಾರೆ.ನಿಂಬೆಹಣ್ಣು ಬೆಳೆಗಾರರು ಯಾವುದೇ ಕಾರಣಕ್ಕೂಆತಂಕಕ್ಕೊಳಗಾವುದು ಬೇಡ ಎಂದು ಧೈರ್ಯ ತುಂಬಿದರು.

    ಅನಾನಸ್ ಸೇರಿದಂತೆ ರೈತ ಬೆಳೆದ ಎಲ್ಲಾ ಬೆಳೆಗಳ ಮಾರಾಟಕ್ಕೆ ಮಾರುಕಟ್ಟೆಗೆ ಅವಕಾಶ ಕಲ್ಪಿಸಲಾಗಿದೆ. ಕಲಬುರ್ಗಿ ಯಲ್ಲಿ ಮೃತಪಟ್ಟ ರೈತರಿಗೆ ಸರ್ಕಾರದಿಂದ ಐದು ಲಕ್ಷ ರೂ.ತಕ್ಷಣ ಪರಿಹಾರ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap