ಬೆಂಗಳೂರು
ಹಿಂದುಳಿದ ಸಮುದಾಯಗಳು ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಅನೇಕ ವಲಯಗಳಲ್ಲಿ ಸಹಾಯ ಮಾಡಲಿದೆ ಎಂದು ಬಿಜೆಪಿ ಸಂಸದ ಪಿ.ಸಿ.ಮೋಹನ್ ಹೇಳಿದರು.
ಕೆಜಿ ರಸ್ತೆಯ ಶಿಕ್ಷಕರ ಸದನದಲ್ಲಿ ವಿಶ್ವಕರ್ಮ ಸೇವಾ ಸಮಿತಿವತಿಯಿಂದ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ಸಹಯೋಗದೊಂದಿಗೆ ಚಿನ್ನ-ಬೆಳ್ಳಿ ಕುಶಲಕರ್ಮಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಲಾಭವು ಹಿಂದುಳಿದ ವರ್ಗಗಳಿಗೆ ದೊರೆಯುವಂತಾಗಲು ಅಧಿಕಾರಿಗಳು ಶ್ರಮಿಸಬೇಕು ಎಂದರು.
ಪ್ರಪಂಚದ ಎಲ್ಲಾ ಕಡೆ ಮೂರ್ತಿಗಳ ಪೂಜೆ ನಡೆಯುತ್ತಿದೆ.ಇದಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ.ಅದೇ ರೀತಿ, ಪರಂಪರೆಯ ಉದ್ಯೋಗವನ್ನು, ನಾವು ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ನುಡಿದರು.
ವಿಶ್ವದಲ್ಲಿ ಜನಮನ್ನಣೆ ಗಳಿಸುವಂತೆ ಶಿಲ್ಪಕಲೆಗಳನ್ನು ನೀಡಿರುವ ವಿಶ್ವಕರ್ಮ ಸಮುದಾಯದವರು ಜೀವನ ನಡೆಸಲು ಸಾಧ್ಯವಾಗದೇ ಸಂಕಷ್ಟದಲ್ಲಿದ್ದಾರೆ. ಕುಲ ಕಸುಬುಗಳಿಗೆ ಬೆಲೆಯಿಲ್ಲದಾಗಿದೆ ಎಂದ ಅವರು, ಎಂದು ಹೇಳಿದರುವಿಶ್ವ ಕರ್ಮ ಸಮುದಾಯದಿಂದಲೇ, ನಾವು ಇಂದು ಮೂರ್ತಿಗಳಲ್ಲಿ ದೇವರನ್ನು ಕಾಣಲು ಸಾಧ್ಯವಾಯಿತು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಉದಯ್ ಗರುಡಾಚಾರ್ ಮಾತನಾಡಿ, ವಿಶ್ವ ಕರ್ಮ ಸಮುದಾಯದ ಚಿನ್ನಾಭರಣ ಅಂಗಡಿ ಮಾಲೀಕರು, ಹಳೇಯ ಚಿನ್ನ, ಬೆಳ್ಳಿ ಖರೀದಿಸಲು ಮುಂದಾದಾಗ, ಪೆÇಲೀಸರು ಬಹಳ ಕಿರುಕುಳ ನೀಡುತ್ತಾರೆ.ಇದನ್ನು ತಪ್ಪಿಸುವ ಕೆಲಸ ಆಗಬೇಕು ಎಂದು ನುಡಿದರು.
ವಿಶ್ವಕರ್ಮ ಸಮುದಾಯದ ಸಣ್ಣ ವ್ಯಾಪಾರಿಗಳಿಗೆ, ಸಾಲ-ಸೌಲಭ್ಯ ದೊರೆಯುವಂತೆ ಕ್ರಮ ವಹಿಸುವಂತೆ ಡಿಸೆಂಬರ್ ಚಳಿಗಾಲದ ಅಧಿವೇಶನದಲ್ಲಿ ಬೇಡಿಕೆ ಇಡಲಾಗುವುದು.ಅದೇ ರೀತಿ, ಸಮುದಾಯದ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಹೋರಾಟ ನಡೆಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಂದಿ ಗ್ರಾಮದ ಜ್ಞಾನಾನಂದ ಆಶ್ರಮದ ಶಿವಾತ್ಮಾನಂದ ಸರಸ್ಪತಿ ಸ್ವಾಮೀಜಿ, ಮಧುರೈ ಗೋಲ್ಡ್ ಸ್ಮಿತ್ ಅಕಾಡೆಮಿ ಅಧ್ಯಕ್ಷ ತಿರುಪತಿ ರಾಜನ್, ಕನ್ ಸ್ಯೂಮ್ಯೂಕ್ಸ್ ಫೌಂಡೇಶನ್ ನಿರ್ದೇಶಕ ಸತ್ಯ ನಾರಾಯಣ ಇನ್ನಿತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








