ಕೆ ಸಿಇಟಿ ಫಲಿತಾಂಶ ಪ್ರಕಟ..!

ಬೆಂಗಳೂರು:

     ಕರ್ನಾಟಕ ಪರೀಕ್ಷಾ ಮಂಡಳಿ ಕೆಸಿಇಟಿ 2020 ಫಲಿತಾಂಶ ಪ್ರಕಟಿಸಿದೆ. ರಕ್ಷಿತ್ , ವರುಣ್ ಗೌಡ, ಸಾಯಿ ವಿವೇಕ್ ರಾಜ್ಯಕ್ಕೆ ಟಾಪರ್ ಗಳಾಗಿ ಹೊರಹೊಮ್ಮಿದ್ದಾರೆ. ಮಲ್ಲೇಶ್ವರಂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಘೋಷಿಸಿದ್ದಾರೆ. 

    ಕೊರೋನಾ ಕಾರಣಕ್ಕೆ ವಿಳಂಬವಾಗಿದ್ದ ಸಿಇಟಿ ಪರೀಕ್ಷೆ ನಡೆದು ಕೇವಲ ಇಪ್ಪತ್ತು ದಿನಗಳಲ್ಲಿ ಫಲಿತಾಂಶ ಹೊರಬಿದ್ದಿದೆ. ಇಂಜಿನಿಯರಿಂಗ್ ಕೋರ್ಸ್ ಗಾಗಿ 1,94,419 ವಿದ್ಯಾರ್ಥಿಗಳು,ಪರೀಕ್ಷೆ ತೆಗೆದುಕೊಂಡಿದ್ದು ಇದರಲ್ಲಿ 1,75,349 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಅವರಲ್ಲಿ 1,53,470 ವಿದ್ಯಾರ್ಥಿಗಳಿಗೆ ರ್ಯಾಂಕ್ ನೀಡಲಾಗಿದೆ.ಕೃಷಿ ವಿಭಾಗದಲ್ಲಿ 1,27,627, ಪಶುವೈದ್ಯಕೀಯ ವಿಭಾಗದಲ್ಲಿ 1,29,666, ಬಿಫಾರ್ಮಾ, ಡಿಫಾರ್ಮಾ ವಿಭಾಗದಲ್ಲಿ 1,55,552 ವಿದ್ಯಾರ್ಥಿಗಳು ರ್ಯಾಂಕ್ ಗಳಿಸಿದ್ದಾರೆ.
 
    ವಿಶೇಷವೆಂದರೆ ಈ ಬಾರಿ . ಒಟ್ಟು 63 ಕೊರೋನಾ ಸೋಂಕಿತ ವಿದ್ಯಾರ್ಥಿಗಳೂ ಪರೀಕ್ಷೆ ಬರೆದಿದ್ದು ಅವರಿಗೆ ಪ್ರತ್ಯೇಕ ಪರೀಕ್ಷಾ ಕೇಂದ್ರ ವ್ಯವಸ್ಥೆ ಮಾಡಲಾಗಿತ್ತು,ಇಂದು ಮಧ್ಯಾಹ್ನ 1ಗಂಟೆಯಿಂದ https://www.karresults.nic.in ಜಾಅತಾಣದಲ್ಲಿ ಫಲಿತಾಂಶ ಲಭ್ಯವಾಗಲಿದೆ.ಸಿಇಟಿ ಟಾಪರ್ಸ್ ಆಗಿರುವವರ ವಿವರ ಹೀಗಿದೆ-

ಇಂಜಿನಿಯರಿಂಗ್ :  ರಕ್ಷಿತ್ ಎಂ, ಆರ್ ವಿ ಕಾಲೇಜು, ಬೆಂಗಳೂರು,ಶುಭಾನ್ ಆರ್ – ಶ್ರೀ ಚೈತನ್ಯ ಇ ಟೆಕ್ನೋ ಶಾಲೆ, ಬೆಂಗಳೂರು 
3. ಶಶಾಂಕ್ ಬಾಲಾಜಿ, ಬೇಸ್ ಪಿಯು ಕಾಲೇಜು, ಹುಬ್ಬಳ್ಳಿ

ಕೃಷಿ: ವರುಣ್ ಗೌಡ ಎ ಬಿ, ಎಕ್ಸ್ ಪರ್ಟ್ ಕಾಲೇಜು, ಮಂಗಳೂರು, ಸಂಜನಾ ಕೆ, ಬೇಸ್ ಪಿಯು ಕಾಲೇಜು, ಮೈಸೂರು ,3. ಲೋಕೇಶ್ ವಿ ಜೋಗಿ, ಶ್ರೀ ರಾಮಕೃಷ್ಣ ವಿದ್ಯಾಶಾಲಾ ಪಿಯು ಕಾಲೇಜು, ಮೈಸೂರು

ಪಶುವೈದ್ಯಕೀಯ: ಸಾಯಿ ವಿವೇಕ್ ಪಿ, ನಾರಾಯಣ ಇ ಟೆಕ್ನೋ ಶಾಲೆ, ಬೆಂಗಳೂರು ,ಆರ್ಯನ್ ಮಹಲಿಂಗಪ್ಪ ಚನ್ನಾಳ್, ಪ್ರಗತಿ ಪಬ್ಲಿಕ್ ಸೆಕೆಂಡರಿ ಶಾಲೆ, ಕೋಟ,ಸಂಜನಾ ಕೆ, ಬೇಸ್ ಪಿಯು ಕಾಲೇಜು, ಮೈಸೂರು

ಬಿಫಾರ್ಮಾ, ಡಿಫಾರ್ಮಾ: ಸಾಯಿ ವಿವೇಕ್ ಪಿ, ನಾರಾಯಣ ಇ ಟೆಕ್ನೋ ಶಾಲೆ, ಬೆಂಗಳೂರು, ಸಂದೀಪನ್ ನಸ್ಕರ್, ಹೊರನಾಡ ಕನ್ನಡಿಗ ,ಪವನ್ ಎಸ್ ಗೌಡ, ನಾರಾಯಣ ಪಿಯು ಕಾಲೇಜು, ಬೆಂಗಳೂರು

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ