ಮಧುಗಿರಿ-
ಪಾವಗಡ ಹೆದ್ದಾರಿಯ ಚಿನ್ನೇನಹಳ್ಳಿಯ ಬಸ್ ನಿಲ್ದಾಣದಲ್ಲಿ ಮೇ 22ರಂದು ಚಿನ್ನೇನಹಳ್ಳಿ ಗ್ರಾಪಂಗೆ ಸೇರಿದ ಕೃಷ್ಣಾಪುರ ಗ್ರಾಮದ ಗಂಗಮ್ಮ (58) ಹೊಸಕೆರೆಯ ಎಸ್‍ಬಿಐ ಬ್ಯಾಂಕಿಗೆ ಹೋಗಲೆಂದು ಬಸ್ ಕಾಯುತ್ತಾ ನಿಂತಿದ್ದಾರೆ. ಆಗ ಮಿಡಿಗೇಶಿ ಕಡೆಯಿಂದ ಮಧುಗಿರಿ ಕಡೆಗೆ ಹೋಗುತ್ತಿದ್ದ ಆಟೋದಲ್ಲಿ ಇಬ್ಬರು ಮಹಿಳೆಯರು ಇದ್ದು, ಗಂಗಮ್ಮರನ್ನು ಆಟೋದಲ್ಲಿ ಹೊಸಕೆರೆ ಕಡೆಗೆ ಬರುತ್ತೀಯಾ ಎಂದು ಕರೆದಿದ್ದಾರೆ.
ಆಗ ಗಂಗಮ್ಮ ಆಟೋದಲ್ಲಿ ಕುಳಿತಿದ್ದಾರೆ. ಹೋಗುವಾಗ ದಿಢೀರನೆ ನೀಲಿಹಳ್ಳಿ ಗ್ರಾಮದ ಬಳಿ ಇರುವ ಶ್ರೀ ಓಬಳರಂಗನಾಥ ಸ್ವಾಮಿ ದೇವಸ್ಥಾನದ (ಬೆಟ್ಟದ ಮೇಲಿನ ದೇವಸ್ಥಾನ) ಕಡೆ ಆಟೋ ತಿರುಗಿಸಿದ್ದಾರೆ. ಗಂಗಮ್ಮ ನಾನು ಹೊಸಕೆರೆಗೆ ಹೋಗಬೇಕೆಂದು ಕೂಗಿಕೊಂಡಾಗ, ನಮಗೆ ದೇವಸ್ಥಾನದ ಬಳಿ ಕೆಲಸವಿರುವುದಾಗಿ ತಿಳಿಸಿದ್ದು, ಮಹಿಳೆಯೋರ್ವಳು ಗಂಗಮ್ಮರ ಕೊರಳಿನಲ್ಲಿದ್ದ ಕರಿಮಣಿಸರ ದಲ್ಲಿದ್ದ ನಾಲ್ಕು ಗ್ರಾಮ್ ತೂಕದ ಬಂಗಾರದ ತಾಳಿಯನ್ನು ಕಿತ್ತುಕೊಂಡು, ಆಟೋದಿಂದ ಗಂಗಮ್ಮರನ್ನು ಕೆಳಗೆ ತಳ್ಳಿ ಆಟೋ ಸಮೇತ ಪರಾರಿಯಾಗಿರುತ್ತಾರೆ. ಗಂಗಮ್ಮ ಮಿಡಿಗೇಶಿ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೋಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಯಾವುದೇ ಸುಳಿವು ಸಿಕ್ಕಿಲ್ಲ. ಪಿ.ಎಸ್.ಐ ಗಂಗಾಧರ್ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ