ವಿಳಾಸ ಕೇಳುವ ನೆಪದಲ್ಲಿ ಸರಗಳ್ಳತನ

ಬೆಂಗಳೂರು

       ವಿಳಾಸ ಕೇಳುವ ನೆಪದಲ್ಲಿ ಬಂದ ಇಬ್ಬರು ಮಹಿಳೆಯರು ಸೇರಿ ದುಷ್ಕರ್ಮಿಯೊಬ್ಬ ಹಾಡಹಗಲೇ ವೃದ್ಧೆಯೊಬ್ಬರ ಚಿನ್ನದ ಸರವನ್ನು ಕಸಿದು ಪರಾರಿಯಾಗಿರುವ ದುರ್ಘಟನೆ ಮಾದನಾಯ್ಕನಹಳ್ಳಿ ಪೊಳೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

       ಮಾದನಾಯಕನಹಳ್ಳಿಯ ರಾಜೇಶ್ವರಿ ಬಡಾವಣೆಯ ವೃದ್ಧೆ ಕಾಳಮ್ಮ ಅವರು ಮನೆಯ ಹೊರಗಡೆಯಿಂದ ಕೂಗಿ ವಿಳಾಸ ಕೇಳಿದ ಹಿನ್ನೆಲೆಯಲ್ಲಿ ಮನೆಯಿಂದ ಹೊರಗಡೆ ಬಂದಿದ್ದಾರೆ. ಅಲ್ಲಿದ್ದ ಇಬ್ಬರು ಮಹಿಳೆಯರು ಕಾಳಮ್ಮ ಅವರನ್ನು ಮಾತನಾಡಿಸಿ, ವಿಳಾಸ ಕೇಳಿದ್ದಾರೆ. ಮೂವರು ಇರುವ ಜಾಗಕ್ಕೆ ಬಂದ ವ್ಯಕ್ತಿಯೊಬ್ಬ,ನನ್ನ ಪರ್ಸ್ ಇಲ್ಲಿ ಎಲ್ಲಿಯೋ ಬಿದ್ದಿದೆ.ಅದನ್ನು ನೀವು ತೆಗೆದುಕೊಂಡಿದ್ದೀರಾ ಕೊಡಿ ಎಂದು ಕೇಳಿದ್ದಾನೆ.

      ತಕ್ಷಣವೇ ಜಗಳಕ್ಕೆ ಇಳಿದಂತೆ ವರ್ತಿಸಿ ಕಾಳಮ್ಮ ಅವರ ಬಾಯಿ ಮುಚ್ಚಿ, ಅವರ ಕೊರಳಲ್ಲಿ ಇದ್ದ 28 ಗ್ರಾಂ ಚಿನ್ನದ ಸರವನ್ನು ಕ್ಷಣಾರ್ಧದಲ್ಲಿಯೇ ಕಸಿದು ಪರಾರಿಯಾಗಿದ್ದಾರೆ. ಆದರೆ ಅವರ ಹಿಡಿಯಲು, ಜನರನ್ನು ಕೂಗಿ ಕರೆಯಲು ಕಾಳಮ್ಮ ಅವರಿಗೆ ಆಗಿಲ್ಲ.ಚಿನ್ನ ಹಿಡಿದು ಓಡಿದ ಕಳ್ಳರು ದೂರದಲ್ಲಿ ನಿಲ್ಲಿಸಿದ್ದ ಕಾರು ಹತ್ತಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮಾದನಾಯಕನಹಳ್ಳಿ ಪೆÇಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link