ಹಿರಿಯೂರು :
ಜಾಗತೀಕರಣ, ಖಾಸಗೀಕರಣ, ಆಧುನೀಕರಣದಿಂದ ರಂಗಕಲೆಗೆ ಪೆಟ್ಟು ಬಿದ್ದಿದೆಯೆಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಕೆ.ಜಿ. ಹನುಮಂತರಾಯಪ್ಪ ವಿಷಾದ ವ್ಯಕ್ತ ಪಡಿಸಿದರು.
ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳವಿಭಾಗಿ ಶ್ರೀ ರಂಗನಾಥಸ್ವಾಮಿ ಸಾಂಸ್ಕತಿಕ ಕಲಾಸಂಘ ಸಕ್ಕರ, ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಹಾಗೂ ರಂಗಭೂಮಿ ಕಲಾವಿದರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಲನಚಿತ್ರ, ದೂರದರ್ಶನ, ಮೊಬೈಲ್ ಹಾವಳಿಯಿಂದ ಜನರು ರಂಗಭೂಮಿಯಿಂದ ದೂರ ಸರಿದಿದ್ದು ಅವರ ಅಭಿರುಚಿ ಆಸಕ್ತಿ, ಹವ್ಯಾಸ, ಬದಲಾವಣೆ ಆಗಿದೆ, ನಾಟಕಗಳನ್ನು ನೋಡುವ ಜನರ ಸಂಖ್ಯೆ ಕಡಿಮೆಯಾಗಿದೆ, ನಾಟಕಗಳು ಪ್ರೀತಿ, ಪ್ರೇಮ, ವಾತ್ಸಲ್ಯ, ಭಾಂದವ್ಯ ಬೆಳಸಿ, ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸಿ ಮನಸ್ಸಿಗೆ ನೆಮ್ಮದಿ ಸಂತೋಷವನ್ನು ನೀಡುತ್ತವೆ ಎಂದು ಹೇಳಿದರು.
ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕತರಾದ ಎಸ್.ಜಿ.ರಂಗಸ್ವಾಮಿಸಕ್ಕರ ಮಾತನಾಡಿ, ಕನ್ನಡ ರಂಗಭೂಮಿಗೆ ಗುಬ್ಬಿ ವೀರಣ್ಣ, ಬಿ ಜಯಮ್ಮ, ಶಾಂತ ಕವಿಗಳು, ಸುಬ್ಬಯ್ಯ ನಾಯ್ಡು, ಡಾ|| ರಾಜಕುಮಾರ್, ಎಮ್.ವಿ.ರಾಜಮ್ಮ, ಬಿ.ಜಯಶ್ರೀ , ಗಿರೀಶ್‍ಕಾರ್ನಾಡ್, ಹೆಚ್ ಎ ಎಲ್ ಸಿಂಹ, ಚಂದೋಡಿಲೀಲಾ, ಚಂದ್ರಶೇಖರಕಂಬಾರ, ಶಂಕರ್‍ನಾಗ್, ಅರುಂಧತಿನಾಗ್, ಇವರ ಕೊಡುಗೆ ಅಪಾರವಾಗಿದೆ.
ರಂಗಭೂಮಿ ಕಲಾವಿದರ ಬದುಕು ಪ್ರಸ್ತುತ ಕಾಲಘಟ್ಟದಲ್ಲಿ ತುಂಬಾ ಚಿಂತಾಜನಕವಾಗಿದ್ದು ತಮ್ಮಲ್ಲಿ ನೋವು ಸಂಕಟ ವೇದನೆ ಇದ್ದರೂ, ಪ್ರೇಕ್ಷಕರಿಗೆ ಸಂತೋಷವನ್ನು ಉಣಬಡಿಸುತ್ತಾರೆ, ಕಲಾವಿದರ ಬದುಕು ಹಸನುಗೊಳ್ಳಬೇಕಾದರೆ ಸರ್ಕಾರ ನೀಡುವ ಮಾಶಾಸನವನ್ನು ಆಂಧ್ರ್ರ, ತಮಿಳುನಾಡು ಮಾದರಿಯಲ್ಲಿ ದುಪ್ಪಟ್ಟು ಹೆಚ್ಚಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ವಾಣಿಸಕ್ಕರೆ ಸರ್ಕಾರಿ ಪ್ರಥಮ ಧರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಡಿ, ಧರಣೇಂದ್ರಯ್ಯ ಮಾತನಾಡಿ, ಕಲಾವಿದರು ವಿಶ್ವದ ಆಸ್ತಿಯಾಗಿದ್ದು ಅವರನ್ನು ಪ್ರೋತ್ಸಾಹಿಸಿ ಪೋಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ವಿಧ್ಯಾರ್ಥಿಗಳಿಗೆ ಸಾಹಿತ್ಯ, ಸಂಗೀತ, ರಂಗಕಲೆ, ಚಿತ್ರಕಲೆ, ಅವಶ್ಯಕವಾಗಿದ್ದು ಸರ್ಕಾರವು ಫ್ರಾಥಮಿಕ, ಪ್ರೌಢ, ಪಿಯು ಕಾಲೇಜು, ಮುರಾರ್ಜಿ ವಸತಿ ಶಾಲೆಗಳಲ್ಲಿ ಖಾಲಿ ಇರುವ ಸಂಗೀತ, ನಾಟಕ, ಚಿತ್ರಕಲೆ, ಶಿಕ್ಷಕರನ್ನ ಭರ್ತಿಮಾಡಿ ವಿಧ್ಯಾರ್ಥಿಗಳ, ಸಾಂಸ್ಕತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಿರಿಯೂರಿನ ರಂಗನಟಿಯರಾದ ಎಮ್.ಭಾಗ್ಯಶ್ರೀ, ಪಿ.ಭುವನೇಶ್ವರಿ, ರಂಗಭೂಮಿ ಕಲಾವಿದರಾದ ಹರಿಯಬ್ಬೆ ಜಿ.ಡಿ.ತಿಮ್ಮಯ್ಯ, ಯರಬಳ್ಳಿಯ ಕೆ.ಓಬಳಯ್ಯ, ಹರ್ತಿಕೋಟೆಯ ಎನ್.ಮಲ್ಲನಾಯಕ, ಕಂದಿಕೆರೆ ಡಿ.ತಿಪ್ಪೇಸ್ವಾಮಿ, ಟಿ.ಎನ್.ಕೋಟೆಯ ಆರ್.ಅಬ್ನಳಪ್ಪ ಇವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ದೈಹಿಕಶಿಕ್ಷಣ ನಿರ್ಧೇಶಕರಾದ ಹೆಚ್.ತಿಪ್ಪೇಸ್ವಾಮಿ, ಡಾ. ಟಿ.ಗಿರೀಶನಾಯಕ, ಸಾಂಸ್ಕತಿಕ ಸಮಿತಿ ಸಂಚಾಲಕರಾದ ಆರ್.ಪುಷ್ಪಲತಾ, ಶಿವಲೀಲಾ, ಅಕಿಲಾ, ಹಾಗೂ ಇತರರು ಉಪಸ್ಥಿತರಿದ್ದರು.