ಡಿ.18 ರಿಂದ 20 ರವರೆಗೆ ಚಂದ್ರಮೌಳೀಶ್ವರರ ಪುಣ್ಯಾರಾಧನೆ

ಹರಪನಹಳ್ಳಿ

          ಪಟ್ಟಣದ ತೆಗ್ಗಿನಮಠದ ಚಂದ್ರಶೇಖರ ಧರ್ಮ ಸಭಾ ವೇದಿಕೆಯಲ್ಲಿ ಶಿವಾಚಾರ್ಯ ರತ್ನ ಲಿಂಗೈಕ್ಯ ಚಂದ್ರಮೌಳೀಶ್ವರ ಸ್ವಾಮಿಗಳ ಚತುರ್ಥ ವಾರ್ಷಿಕ ಪುಣ್ಯಾರಾಧನೆ ನಿಮಿತ್ಯ ಡಿ.18 ರಿಂದ 20 ರವರೆಗೆ ಉಚಿತ ಕಣ್ಣಿನತಪಾಸಣಾ ಶಿಬಿರ, ವೀರಮಹೇಶ್ವರರಿಗೆ ಶಿವದೀಕ್ಷಾ, ಪರಮಾಚಾರ್ಯ ನಿವಾಸ ಉದ್ಘಾಟನೆ ಹಾಗೂ ಪಟ್ಟಾಧಿಕಾರದ ತೃತೀಯ ವಾರ್ಷಿಕೋತ್ಸವ ಸಮಾರಂಭ ಆಯೋಜಿಸಲಾಗಿದೆ.

          ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೆಗ್ಗಿನಮಠದ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ ಅವರು ಈ ಹಿಂದೆ ಲಿ.ಚಂದ್ರಮೌಳೀಶ್ವರ ಸ್ವಾಮೀಜಿಗಳ 75 ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಘೋಷಣೆ ಮಾಡಿದ್ದ 75 ಕಾರ್ಯಕ್ರಮಗಳನ್ನು ರೂಪಿಸಿದ್ದು, ಅದರಲ್ಲಿ ದೂಳೇ ಹೊಳಿಯಲ್ಲಿ ಕಲ್ಯಾಣ ಮಂಟಪ, ನಾಗತಿಬಸ್ಸಾಪುರದಲ್ಲಿ ವೀರಭದ್ರೇಶ್ವರ ದೇವಸ್ಥಾನ ನಿರ್ಮಾಣ ಮಠದಲ್ಲಿ ನಿತ್ಯ ದಾಸೋಹ, ಹೊಸಪೇಟೆಯಲ್ಲಿ ಮಹಿಳಾ ಹಾಸ್ಟೆಲ್ , ಪಟ್ಟಣದ ಮೇಗಳಪೇಟೆಯಲ್ಲಿ ಮಹಿಳಾ ಹಾಸ್ಟೆಲ್ , ಹೊಸಪೇಟೆಯಲ್ಲಿ ಚಂದ್ರಮೌಳೀಶ್ವರ ಶ್ರೀಗಳ ಅಮೃತ ಶಿಲೆ, ಮಠದ ಗೋಪುರಕ್ಕೆ ಕಳಸಾರೋಹಣ, ಮುಂತಾದ ಯೋಜನೆಗಳು ಪ್ರಗತಿಯಲ್ಲಿವೆ ಎಂದರು.

         ಡಿ.18 ರಂದು ಮಂಗಳವಾರ ಬೆಳಿಗ್ಗೆ 9.30ಕ್ಕೆ ಮಠದ ಆವರಣದಲ್ಲಿ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಯ ನುರಿತ ವೈದ್ಯರಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ ನಡೆಯುತ್ತದೆ.

        ಡಿ.20 ರಂದು ಪಂಚಪೀಠದ ರಂಬಾಪುರಿ ಹಾಗೂ ಉಜ್ಜಯಿನಿ ಜಗದ್ಗುರುಗಳ ಸಾನಿದ್ಯದಲ್ಲಿ ರಾಮಘಟ್ಟ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿಗಳ ಸಮ್ಮುಖದಲ್ಲಿ ಧರ್ಮ ಸಭೆ ಆಯೋಜಿಸಲಾಗಿದೆ. ಬೆಳಿಗ್ಗೆ 10.30ಕ್ಕೆ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.
ಮಾನಿಹಳ್ಳಿ ಪುರವರ್ಗ ಮಠದ ಮಳೆಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿ ನಮನ ಸಲ್ಲಿಸುವರು. ಶಾಸಕ ಕರುಣಾಕರರೆಡ್ಡಿ, ದಾವಣಗೆರೆ ವಿವಿ ಕುಲಪತಿ ಶರಣಪ್ಪ ಹಲಸೆ, ತಹಶೀಲ್ದಾರ ಶಿವಶಂಕರನಾಯ್ಕ, ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.

       ಈಗಿನ ತೆಗ್ಗಿನಮಠದ ಷ.ಬ್ರ.ವರಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮೀಜಿಯವರು ಮಠದ ಅಭಿವೃದ್ದಿಗೆ ಶ್ರಮಿಸುತ್ತಿದ್ದು, ಸಮಾಜಮುಖಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ವರಸದ್ಯೋಜಾತ ಶ್ರೀಗಳು, ತೆಗ್ಗಿನಮಠ ಸಂಸ್ಥೆಯ ಅಧೀಕ್ಷಕ ಈರಣ್ಣ, ಮುಖ್ಯ ಶಿಕ್ಷಕ ಸಿ.ಎಂ.ಕೊಟ್ರಯ್ಯ,  ಉಪಸ್ಥಿತರಿದ್ದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap