ಚಿತ್ರದುರ್ಗ;
ಸಿರಿಗೆರೆಯ ತರಳಬಾಳು ಮಠಕ್ಕೆ ಬುಧವಾರದಂದು ಬೇಟಿ ನೀಡಿದ ಚಿತ್ರದುರ್ಗ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರು, ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಬೇಟಿಯಾಗಿ ಆಶೀರ್ವಾದ ಕೋರಿದರುಸುಮಾರು ಅರ್ಧತಾಸಿಗೂ ಹೆಚ್ಚು ಕಾಲ ಶ್ರೀಗಳ ಜೊತೆ ಮಾತುಕತೆ ನಡೆಸಿದರು. ಕಳೆದ ಐದು ವರ್ಷಗಳ ಕಾಲ ಸಂಸದರಾಗಿ ಜಿಲ್ಲೆಯಲ್ಲಿ ತಾವು ಮಾಡಿರುವ ಅಭಿವೃದ್ದಿ ಕೆಲಸಗಳ ಬಗ್ಗೆ ಶ್ರೀಗಳಿಗೆ ಚಂದ್ರಪ್ಪ ಅವರು ಮಾಹಿತಿ ನೀಡಿದರು
ಜಿಲ್ಲೆಯ ಮತದಾರರು ಹಾಗೂ ಶ್ರೀಮಠದ ಆಶೀರ್ವಾದ ಸಿಕ್ಕರೆ ಮುಂದಿನ ದಿನಗಳಲ್ಲಿ ನಿರೀಕ್ಷೆಯಂತೆಯೇ ಕೆಲಸ ಮಾಡುತ್ತೇನೆ. ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುವುದಾಗಿಯೂ ಭರವಸೆ ನೀಡಿದರುಮಾಜಿ ಸಚಿವ ಹೆಚ್.ಆಂಜನೇಯ ಸೇರಿದಂತೆ ಹಲವು ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ