ಈ ವರ್ಷವೇ ಚಂದ್ರಯಾನ-3 ಮತ್ತು ಗಗನಯಾನ ಯೋಜನೆಗಳ ಉಡಾವಣೆ : ಕೆ.ಶಿವನ್

ಬೆಂಗಳೂರು

    ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಕೊನೆ ಕ್ಷಣದಲ್ಲಿ ವಿಫಲಗೊಂಡಿತ್ತು. ಮರಳಿ ಯತ್ನವ ಮಾಡು ಎಂಬಂತೆ ಇಸ್ರೋ ಮತ್ತೆ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಇಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಚಂದ್ರಯಾನ-3 ಯೋಜನೆ ಬಗ್ಗೆ ಮಾಹಿತಿ ನೀಡಿದ್ದಾರೆ.

    ಈ ವರ್ಷವೇ ಚಂದ್ರಯಾನ-3 ಯೋಜನೆ ಉಡಾವಣೆಗೊಳ್ಳಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಘೋಷಣೆ ಮಾಡಿದ್ದಾರೆ. ಚಂದ್ರಯಾನ- 3 ಚಂದ್ರಯಾನ- 2ರಂತೆಯೇ ಇದೆ. ಚಂದ್ರಯಾನ- 2ರಲ್ಲಿನ ಲ್ಯಾಂಡರ್ ಹಾಗೂ ರೋವರ್‍ನ್ನು ಚಂದ್ರಯಾನ-3 ರಲ್ಲಿಯೂ ಬಳಕೆ ಮಾಡುತ್ತೇವೆ. ಈ ವರ್ಷ ಚಂದ್ರಯಾನ-3, ಎಸ್?ಎಸ್??ಎಲ್?ವಿ ಉಡಾವಣೆ ಮಾಡಲಾಗುತ್ತದೆ ಎಂದರು.

   ನಾವು ಚಂದ್ರಯಾನ 2 ಯೋಜನೆಯನ್ನು ಚೆನ್ನಾಗಿ ಸಂಪೂರ್ಣಗೊಳಿಸಿದ್ದೆವು. ಆದರೆ ಲ್ಯಾಂಡಿಂಗ್ ವೇಳೆ ಸಮಸ್ಯೆ ಕಂಡು ಬಂದಿತ್ತು. ನ್ಯಾವಿಗೇಷನ್ ಕಂಟ್ರೋಲ್ ಸಿಸ್ಟಂನಲ್ಲಿ ದೋಷ ಕಾಣಿಸಿತ್ತು. ಸಾಫ್ಟ್ ಲ್ಯಾಂಡಿಂಗ್ ಮಾಡಲು ನಮ್ಮಿಂದ ಸಾಧ್ಯವಾಗಲಿಲ್ಲ. ನಾವು ಸದ್ಯದಲ್ಲೇ ಇಂಟರ್‍ನೆಟ್ ಮೊಬೈಲ್ ಜಿಪಿಎಸ್ ಮಾಡುತ್ತೇವೆ. ಈ ರೋವರ್ ಹಾಗೂ ಲ್ಯಾಂಡರ್ ಮೂಲಕ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದೇ ವೇಳೆ, ಶಿವನ್ 2020ರ ಯೋಜನೆಗಳ ಬಗ್ಗೆ ವಿವರಣೆ ನೀಡಿದರು. 2020ರ ನಮ್ಮ ಟಾರ್ಗೆಟ್‍ಗಳನ್ನು ತಿಳಿಸಿಕೊಡುತ್ತಿದ್ದೇವೆ. ಗಗನಯಾನ 2020ರ ಎಲ್ಲಾ ಸಿದ್ಧತೆ ನಡೆದಿದೆ. 6 ಸಂಶೋಧನಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಜನವರಿ 26ರಂದು ಗಗನಯಾನ ಮಿಷನ್ ಆರಂಭವಾಗಲಿದೆ. ಗಗನಯಾನ ಮಿಷನ್ ಇಸ್ರೋದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಪೂರಕ ತರಬೇತಿ ನೀಡಲಾಗಿದೆ. 4ನೇ ಗಗನಯಾತ್ರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

    2ನೇ ಬಾಹ್ಯಾಕಾಶ ಪೋರ್ಟ್‍ನ ಕಾರ್ಯವೂ ನಡೆಯುತ್ತಿದೆ. ತಮಿಳುನಾಡಿನ ತೂತುಕುಡಿಯಲ್ಲಿ ಇದರ ಕಾರ್ಯ ನಡೆಯುತ್ತಿದೆ. ನಾವು 2ನೇ ಏರ್‍ಕ್ರಾಫ್ಟ್ ಬಿಲ್ಡಿಂಗ್ ತಯಾರು ಮಾಡುತ್ತಿದ್ದೇವೆ. 29 ಸಾವಿರ ಸಾರ್ವಜನಿಕರು ಇದನ್ನು ಈಗಾಗಲೇ ವೀಕ್ಷಿಸಿದ್ದಾರೆ ಎಂದು ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap