ತುರುವೇಕೆರೆ:
ತಾಲ್ಲೋಕಿನಲ್ಲಿ ವಿರೋಧ ಪಕ್ಷದ ಕೆಲಸ ಮಾಡಿರುವ ಚಂದ್ರೇಶ್ ರವರನ್ನು ವೈಯಕ್ತಿಕವಾಗಿ ಟೀಕಿಸಲು ಬಿಜೆಪಿ ಮುಖಂಡರಿಗೆ ಯಾವುದೇ ನೈತಿಕತೆ ಇಲ್ಲ ಎಂದು ದೊಡ್ಡಾಘಟ್ಟ ಚಂದ್ರೇಶ್ ಅಭಿಮಾನಿಗಳು ಬಿಜೆಪಿ ಮುಖಂಡರಿಗೆ ಪ್ರಶ್ನೆ ಹಾಕಿದ್ದಾರೆ.
ಶಾಸಕ ಮಸಾಲಾ ಜಯರಾಮ್‍ರವರು ತಾಲೂಕಿನಲ್ಲಿ ಸರ್ಕಾರಿ ಅಧಿಕಾರಿಗಳು ತಮ್ಮ ಮಾತಿಗೆ ಕಿಮ್ಮತ್ತಿಲ್ಲ. ಪೋಲಿಸ್ ಅಧಿಕಾರಿಗಳು ಭ್ರಷ್ಠಾಚಾರದಲ್ಲಿ ತೊಡಗಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದು ಅಧಿಕಾರಿಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಹೇಳಿರುವುದರಲ್ಲಿ ತಪ್ಪೇನಿದೆ.
ಚಂದ್ರೇಶ್ ರವರ ಹೇಳಿಕೆಯನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳದೇ ಅವರನ್ನು ವೈಯಕ್ತಿಕವಾಗಿ ನಿಂದಿಸಲು ಬಿಜೆಪಿ ಮುಖಂಡರು ಮುಂದಾಗಿರುವುದು ವಿಷಾದನೀಯ. ವಿರೋಧ ಪಕ್ಷದಲ್ಲಿರುವವರು ಆಡಳಿತ ಪಕ್ಷದವರ ನ್ಯೂನ್ಯತೆಗಳನ್ನು ಹೊರಗೆಳೆದು ತಿದ್ದುವುದು ತಪ್ಪೇ?. ಆಡಳಿತದಲ್ಲಿ ಸುಧಾರಣೆ ತರುವುದನ್ನು ಬಿಟ್ಟು ವಿನಾಕಾರಣ ವಿರೋಧ ಪಕ್ಷಗಳ ಎಚ್ಚರಿಕೆಯನ್ನು ಕಡೆಗಣಿಸುವುದು ಅಲ್ಲದೇ ಹೇಳಿಕೆಗಳನ್ನು ನೀಡಿದ ವ್ಯಕ್ತಿಗಳ ವಿರುದ್ಧ ಟೀಕೆ ಮಾಡುವುದು ಸರಿಯಲ್ಲ ಎಂದು ಮಾವಿನಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಿರೀಶ್ ಹೇಳಿದರು.
ಆಡಳಿತವನ್ನು ಸರಿದಾರಿಗೆ ತೆಗೆದುಕೊಂಡು ಹೋಗುವುದು ಶಾಸಕರ ಕರ್ತವ್ಯ. ಅಸಹಾಯಕತೆ ಬಿಟ್ಟು ಭ್ರಷ್ಠಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ವಿರುಧ್ಧ ಶಿಸ್ತು ಕ್ರಮ ಕೈಗೊಳ್ಳುವ ಎಲ್ಲಾ ಅಧಿಕಾರ ಶಾಸಕರಿಗಿದೆ. ಅದು ಬಿಟ್ಟು ಸಾರ್ವಜನಿಕವಾಗಿ ಅಸಹಾಯಕತೆಯನ್ನು ವ್ಯಕ್ತಪಡಿಸುವುದು ಸರಿಯಲ್ಲ ಎಂದು ಎಂದು ಸೇವಾ ಟ್ರಸ್ಟ್ ನ ಸಂಚಾಲಕ ಧರೀಶ್ ಪ್ರಶ್ನಿಸಿದ್ದಾರೆ.
ಚಂದ್ರೇಶ್ ತಮ್ಮ ಸ್ವಂತಕ್ಕಾಗಿ ಎನನ್ನೂ ಕೇಳಿಲ್ಲ. ತಾಲೂಕಿನ ಜನತೆಯ ಹಿತದೃಷ್ಠಿಯಿಂದ ಶಾಸಕರನ್ನು ಪ್ರಶ್ನಿಸಿದ್ದಾರೆ. ಅದನ್ನೇ ನೆವ ಮಾಡಿಕೊಂಡು ಅವರ ವೈಯಕ್ತಿಕ ಟೀಕೆ ಮಾಡಿದಲ್ಲಿ ಕಾನೂನು ಸಮರವನ್ನು ಎದುರಿಸಬೇಕಾದೀತು ಎಂದು ಆಡಳಿತವನ್ನು ಉತ್ತಮ ಪಡಿಸಿಕೊಳ್ಳುವ ಬಗ್ಗೆ ಚಿಂತಿಸದೇ ವ್ಯಕ್ತಿಗತ ಟೀಕೆ ಸಲ್ಲ ಎಂದು ಜೆಡಿಎಸ್ ಮುಖಂಡ ಹಾಗೂ ಅಮ್ಮಸಂದ್ರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಸಿದ್ದಗಂಗಯ್ಯ ಹೆಚ್ಚರಿಸಿದ್ದಾರೆ.
ಆಡಳಿತದಲ್ಲಿ ತಪ್ಪೆಗೆಸುವ ಅಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟನೆ ಮಾಡಲಿ. ಅದು ಬಿಟ್ಟು ಜಾಗೃತಗೊಳಿಸಿದ ಚಂದ್ರೇಶ್ ರವರ ಮನೆ ಮುಂದೆ ಧರಣಿ ಮಾಡುತ್ತೇವೆ ಎಂದು ಹೇಳುವುದು ಅವರ ಬೆದರಿಕೆಯ ತಂತ್ರ. ಇದಕ್ಕೆಲ್ಲಾ ಚಂದ್ರೇಶ್ ಅಭಿಮಾನಿಗಳು ಹೆದರುವವರೇ ಅಲ್ಲ ಎಂದು ಕೊಡಗೀಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷ ಹಾವಾಳ ಕೃಷ್ಣೇಗೌಡ, ಶ್ರೀನಿವಾಸ್, ಕಲ್ಪನಾಗುರುರಾಜ್, ನಾಗಲಾಪುರ ಸೋಮಣ್ಣ, ರಾಮೇಗೌಡ, ರಂಗಪ್ಪ, ದುಂಡ ದೇವರಾಜು, ಶಂಕರ್, ಆನಂದ್, ಕಾಳಂಜೀಹಳ್ಳಿ ಶಿವಣ್ಣ, ಕಿಶೋರ್, ದೊಡ್ಡಾಘಟ್ಟ ನಾಗರಾಜು ಸೇರಿದಂತೆ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.







