ದಾವಣಗೆರೆ:
ಹಬ್ಬದ ಸಂದರ್ಭದಲ್ಲಿ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಚಿಲ್ಲರೆಗೆ ತೋಂದರೆ ಆಗಬಾರದು ಎಂಬ ಕಾರಣಕ್ಕೆ ಹೊಸ ನೋಡು ಹಾಗೂ ನಾಣ್ಯಗಳನ್ನು ವಿನಿಮಯ ಮಾಡಿಕೊಡಲಾಗುತ್ತಿದೆ ಎಂದು ಕೆನರಾ ಬ್ಯಾಂಕ್ ಕ್ಷೇತ್ರಿಯ ಕಛೇರಿಯ ಸಹಾಯಕ ಮಹಾಪ್ರಬಂಧಕ ಹೆಚ್.ಎಂ. ಕೃಷ್ಣಯ್ಯ ತಿಳಿಸಿದರು.
ಗುರುವಾರ ನಗರದ ರಾಮ್ ಅಂಡ್ ಕೋ ವೃತ್ತದಲ್ಲಿ ಕೆನರಾ ಬ್ಯಾಂಕ್ ಕರೆನ್ಸಿ ಚೇಸ್ಟ್ ಕ್ಷೇತ್ರಿಯ ಕಚÉೀರಿ ಹಾಗೂ ಲೀಡ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ದಸರಾ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಹೊಸ ನೋಟುಗಳು ಮತ್ತು ನಾಣ್ಯಗಳ ವಿನಿಮಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಬ್ಬಹರಿದಿನಗಳಲ್ಲಿ ಸಾರ್ವಜನಿಕರಿಗೆ ವ್ಯವಹಾರಕ್ಕೆ ಹಾಗೂ ಲಕ್ಷ್ಮೀ ಪೂಜಾ ಕಾರ್ಯಕ್ರಮಗಳಲ್ಲಿ ಹೊಸ ನೋಟುಗಳನ್ನು ಪೂಜಿಸಲು ಅನುಕೂಲವಾಗುವ ನಿಟ್ಟಿನಲ್ಲಿ ನೋಟು, ನಾಣ್ಯಗಳ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಭಾರತೀಯ ರಿಜರ್ವ್ ಬ್ಯಾಂಕ್ ಸಹ ಸಾರ್ವಜನಿಕರಿಗೆ ನೂತನ ನೋಟುಗಳನ್ನು ಪರಿಚಯಿಸುವಂತೆ ಆದೇಶ ಸಹ ಇರುವುದರಿಂದ ವಿನೂತನವಾಗಿ ಬ್ಯಾಂಕ್ ವತಿಯಿಂದಲೇ ನೋಟು ವಿತರಣೆ ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷವೂ ಬ್ಯಾಂಕ್ ಜಿಲ್ಲೆಯ ಹಲವು ಕಡೆ ಇಂತಹ ಮೇಳಗಳನ್ನು ನಡೆಸಿದ್ದು ಉತ್ತಮ ಪ್ರತಿಕ್ರಿಯೆ ಮೂಡಿಬಂದಿತ್ತು. ಈ ಬಾರಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ದೀಪಾವಳಿ ಹಬ್ಬದವರೆಗೂ ಹೊಸ ನೋಟು ಹಾಗೂ ನಾಣ್ಯಗಳ ವಿನಿಮಯ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಇಂದು ವಿನಿಮಯಕ್ಕಾಗಿ ಒಟ್ಟು 50 ಲಕ್ಷ ರು. ಹಣ ತಂದಿದ್ದು, ಅವಶ್ಯಕತೆ ಬಿದ್ದರೆ ಮತ್ತಷ್ಟು ಹಣ ತರಲಿದ್ದೇವೆ. ಯಾರೂ ಎಷ್ಟು ಬೇಕಾದರೂ ವಿನಿಮಯ ಮಾಡಿಕೊಳ್ಳಬಹುದು. ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸರದಿ ಸಾಲಲ್ಲಿ ನಿಂತು ಹಣ ಪಡೆಯುತ್ತಿದ್ದು, ಈ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲೀಡ್ ಬ್ಯಾಂಕ್‍ನ ವಿಭಾಗೀಯ ಪ್ರಬಂಧಕ ಎನ್.ಟಿ.ಎರ್ರಿಸ್ವಾಮಿ ಮಾತನಾಡಿ, ಚಿಲ್ಲರೆ ವ್ಯಾಪಾರಿಗಳಿಗೆ ಹಬ್ಬ ಹರಿದಿನಗಳ ಸಮಯದಲ್ಲಿ ಚಿಲ್ಲರೆ ಹಣದ ಅವಶ್ಯಕತೆ ಹೆಚ್ಚಿರಲಿದೆ. ಆದ್ದರಿಂದ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೂ ಅನುಕೂಲ ಕಲ್ಪಿಸಲು ಈ ವಿನಿಮಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಲ್ಲಿ 100 ರೂ., 50 ರೂ., 10 ರೂ.ಗಳ ನೋಟು ಹಾಗೂ 1 ರೂ., 5 ರೂ. ನಾಣ್ಯಗಳನ್ನು ವಿನಿಮಯ ಮಾಡಿಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕರೆನ್ಸಿ ವಿಭಾಗದ ಮ್ಯಾನೇಜರ್ ಎಲ್.ಕೆ. ನಾಯಕ್, ಮಂಡಿಪೇಟೆ ಮುಖ್ಯವ್ಯವಸ್ಥಾಪಕ ಪ್ರಸಾದ್, ರಾಘವೇಂದ್ರ ನಾಯರಿ, ಗಣಪತಿ ದೇವಸ್ಥಾನ ಸಮಿತಿಯ ರುದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
