ಹುಳಿಯಾರು:
ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಅಳವಡಿಸಿರುವ ಸಿಸ್ಟನ್‍ಗಳಲ್ಲಿ ತುಕ್ಕು ಹಿಡಿದಿರುವ ನಲ್ಲಿಗಳನ್ನು ಬದಲಾಯಿಸುವಂತೆ ಬರದಲೇಪಾಳ್ಯದ ನಿವಾಸಿ ಬಿ.ಮಂಜುನಾಥ್ ಮನವಿ ಮಾಡಿದ್ದಾರೆ.
ಕೆಂಕೆರೆ ಗ್ರಾಪಂನಿಂದ ಬರದಲೇಪಾಳ್ಯ ಸೇರಿದಂತೆ ಅನೇಕ ಕಡೆ ಕಿರು ನೀರು ಸರಬರಾಜು ವ್ಯವಸ್ಥೆ ಮೂಲಕ ನೀರು ಸೂರೈಸಲಾಗುತ್ತಿದೆ. ಕಿರು ನೀರು ಸರಬರಾಜು ಯೋಜನೆಯಡಿ ಅಳವಡಿಸಿರುವ ಸಿಸ್ಟನ್‍ಗಳಲ್ಲಿ ನಲ್ಲಿಗಳು ತುಕ್ಕು ಹಿಡಿದಿದೆ. ಕೆಲವು ಕಡೆ ಕಿತ್ತು ಸಹ ಹೋಗಿವೆ.
ಪರಿಣಾಮ ಸಿಸ್ಟನ್‍ಗೆ ನೀರು ತುಂಬಿದ ತಕ್ಷಣ ನಲ್ಲಿಗಳಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿವೆ. ಕೆಲ ನಿವಾಸಿಗಳು ಬಟ್ಟೆಗಳನ್ನು ಕಟ್ಟಿ ವ್ಯರ್ಥವಾಗಿ ನೀರು ಹರಿಯುವುದನ್ನು ನಿಲ್ಲಿಸಿದ್ದಾರೆ. ಆದರೂ ಸಹ ನೀರಿನ ಒತ್ತಡ ಹೆಚ್ಚಿ ಬಟ್ಟೆಯ ಮೂಲಕವೂ ನೀರು ಹರಿದು ಹೋಗುತ್ತಿದೆ.
ನೀರಿನ ಹಾಹಾಕಾರ ಇರುವ ಈ ದಿನಗಳಲ್ಲಿ ನೀರನ್ನು ವ್ಯರ್ಥವಾಗಿ ಹರಿಯುವುದನ್ನು ತಡೆಯುವುದೂ ಸಹ ನೀರಿನ ಸದ್ಬಳಕೆಯ ಹಂತವಾಗಿದೆ. ಹಾಗಾಗಿ ಬರದಲೇಪಾಳ್ಯ ಸೇರಿದಂತೆ ಗ್ರಾಪಂ ವ್ಯಾಪ್ತಿಯಲ್ಲಿನ ಸಿಸ್ಟನ್‍ಗಳಲ್ಲಿನ ನಲ್ಲಿಗಳನ್ನು ತಕ್ಷಣ ಬದಲಾಯಿಸಿ ನೀರು ವ್ಯರ್ತವಾಗುವುದನ್ನು ತಡೆಯುವಂತೆ ಅವರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ