ಚಿಗಟೇರಿ ಮುರಿಗೆಪ್ಪ ಜನ್ನದಿನ: ಸಿಹಿ ವಿತರಣೆ

ದಾವಣಗೆರೆ:

       ಧರ್ಮಪ್ರವರ್ತಕ ಶ್ರೀಚಿಗಟೇರಿ ಮುರಿಗೆಪ್ಪನವರ 130ನೇ ಜನ್ಮದಿನೋತ್ಸವ ಅಂಗವಾಗಿ ಸೋಮವಾರ ನಗರದ ಜಿಲ್ಲಾ ಚಿಗಟೇರಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಚಿಗಟೇರಿ ಕುಟುಂಬ ವರ್ಗದವರು ಸಿಹಿ ವಿತರಿಸಿದರು. ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಕೆ. ಬಕ್ಕಪ್ಪ ಅವರ ನೇತೃತ್ವದಲ್ಲಿ ಆಸ್ಪತ್ರೆಯ ವಾರ್ಡ್‍ಗಳಿಗೆ ತೆರಳಿ ರೋಗಿಗಳ ಯೋಗಕ್ಷೇಮ ವಿಚಾರಿಸುವ ಜೊತೆಗೆ ಸಿಹಿ ವಿತರಿಸಲಾಯಿತು.

      ಈ ಸಂದರ್ಭದಲ್ಲಿ ಎನ್.ಕೆ. ಶಿವಯೋಗಪ್ಪ, ಟಿ.ಎನ್. ವೀರೇಂದ್ರ, ಬೂಸ್ನೂರು ವಿಶ್ವನಾಥ, ಟಿಂಕರ್ ಮಂಜಣ್ಣ ಸೇರಿದಂತೆ ಚಿಗಟೇರಿ ಕುಟುಂಬ ವರ್ಗ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಪದಾಧಿಕಾರಿಗಳು, ಆಸ್ಪತ್ರೆ ಸಿಬ್ಬಂಧಿಗಳು ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ