ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಅಪಹರಿಸಿ ಸುಲಿಗೆ

ಬೆಂಗಳೂರು

       ಚಿನ್ನದ ಬಿಸ್ಕೆಟ್‍ಗಳನ್ನು ಮಾರಾಟ ಮಾಡುತ್ತೆವೆಂದು ನಂಬಿಸಿ ಚಿನ್ನದ ವ್ಯಾಪಾರಿ ಧರಣಿಧರನ್ ಅವರನ್ನು ಕರೆಸಿಕೊಂಡು ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಅಪಹರಿಸಿ ಬೆದರಿಸಿ ಸುಲಿಗೆ ಮಾಡಿದ್ದ 7 ಮಂದಿಯಿದ್ದ ಖತರ್ನಾಕ್ ಗ್ಯಾಂಗ್‍ನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

        ಗ್ಯಾಂಗ್ ಕಟ್ಟಿಕೊಂಡು ಚಿನ್ನಾಭರಣ ವ್ಯಾಪಾರಿಗಳನ್ನು ಪೊಲೀಸರ ವೇಷದಲ್ಲಿ ಸುಲಿಗೆ ಮಾಡುತ್ತಿದ್ದ ರಾಮಮೂರ್ತಿನಗರದ ಆರ್.ಟಿ ಮಣಿ (45)ಅಮೃತಹಳ್ಳಿಯ ಸಂಪಂಗಿರಾಮ್(38),ಟ್ಯಾನರಿ ವೃತ್ತದ ಶ್ರೀನಿವಾಸ್(48),ಕೊತ್ತನೂರಿನ ರಾಮಾಂಜಿನೇಯ ರೆಡ್ಡಿ(28), ಯಮಲೂರಿನ ಸುರೇಶ್ ಅಲಿಯಾಸ್ ಸುರೇಶ್‍ರೆಡ್ಡಿ(42),ಚೆನ್ನೈನ ಆರ್ ಸೋಮು (52),ಚಿಕ್ಕಬಳ್ಳಾಪುರದ ಜಿ ವೇಣುಗೋಪಾಲ್(40) ಬಂಧಿತ ಆರೋಪಿಗಳಾಗಿದ್ದಾರೆ.

         ಬಂಧಿತರಿಂದ 9 ಎಂಎಂನ ಪಿಸ್ತೂಲು, 10 ಜೀವಂತ ಗುಂಡುಗಳು ಹಾಗೂ 25 ನಕಲಿ ಚಿನ್ನದ ಬಿಸ್ಕೆಟ್‍ಗಳು,ನಕಲಿ ಪೊಲೀಸ್ ಅಧಿಕಾರಿಯ ಸಮವಸ್ತ್ರ,ನಕಲಿ ಸರ್ಕಾರಿ ವಾಹನ ಸಂಖ್ಯೆಗಳು ಪೊಲೀಸ್ ನಾಮಫಲಕ ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರು,ಬೊಲೆರೊ ಕಾರು ಹಾಗು ಅಸೆಂಟ್ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ .

ಚಿನ್ನದ ಬಿಸ್ಕೆಟ್ ಮಾರಾಟ

         ಆರೋಪಿಗಳು ತಮ್ಮ ಬಳಿ ಚಿನ್ನದ ಬಿಸ್ಕೆಟ್‍ಗಳಿದ್ದು ಅವುಗಳನ್ನು ಮಾರಾಟ ಮಾಡುತ್ತೇವೆ ಎಂದು ತಮಿಳುನಾಡು ಮೂಲದ ಚಿನ್ನದ ವ್ಯಾಪಾರಿ ಧರಣಿಧರನ್‍ಗೆ ಕರೆ ಮಾಡಿ ದೇವನಹಳ್ಳಿಗೆ ಕಳೆದ ಸೆ. 19 ರಂದು ಕರೆಸಿಕೊಂಡಿದ್ದು ಅವರನ್ನು ಅಪಹರಿಸಿ ಪೊಲೀಸ್ ವೇಷದಲ್ಲಿ ಚಿಕ್ಕಸಣ್ಣೆಯ ರೈಲ್ವೆಹಳಿಗಳ ಸಮೀಪ ಕರೆದೊಯ್ದು ಅಪಹರಿಸಿ ಅವರ ಬಳಿ ಇದ್ದ ಪಿಸ್ತೂಲ್, ಜೀವಂತ ಗುಂಡುಗಳು ಮತ್ತು ಹಣವನ್ನು ದೋಚಿ ಪರಾರಿಯಾಗಿದ್ದರು.

          ಅಪಹರಣ ಮಾಡಿದ ಬಳಿಕ ಧರಣಿಧರ್ ಮೇಲೆ ಆರೋಪಿಗಳು ಹಲ್ಲೆ ಮಾಡಿ ಪೊಲೀಸ್ ಬೋರ್ಡ್ ಇರುವ ಬುಲೆರೋ ವಾಹನದಲ್ಲಿ ವಿಜಯಪುರ ರಸ್ತೆಯಲ್ಲಿ ಧರಣಿದರನ್ ಅವರನ್ನು ಬಿಟ್ಟು ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ 9 ಮಂದಿ ಭಾಗಿಯಾಗಿದ್ದು, ಉಳಿದ ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸಿರುವುದಾಗಿ ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.

         ಆರೋಪಿಗಳು ಪೊಲೀಸ್ ವಾಹನ ಮಾದರಿಯ ಬೊಲೇರೊ ಜೀಪ್ ಗೆ ಪೊಲೀಸ್ ಬೋರ್ಡ್ ಹಾಕಿಕೊಂಡು ಧರಣಿಧರನ್‍ರನ್ನು ಅಪಹರಣ ಮಾಡಿದ್ದರು ಈ ಕುರಿತು ಧರಣಿಧರನ್ ದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಇನ್ಸ್ ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ವಿಶೇಷತಂಡ ರಚಿಸಲಾಗಿತ್ತು.

         ತಂಡವು ಕಾರ್ಯಾಚರಣೆ ನಡೆಸಿ ಖಚಿತ ಮಾಹಿತಿ ಆಧರಿಸಿ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಹಿಂದೆ ಸಹ ಇದೇ ಮಾದರಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಕೃತ್ಯದ ಬಗ್ಗೆ ಅನುಮಾನಗೊಂಡು ಹಳೆಯ ಗ್ಯಾಂಗ್ ಬಗ್ಗೆ ತನಿಖೆ ನಡೆಸಿದ ವೇಳೆ ಏಳು ಮಂದಿ ಆರೋಪಿಗಳು ತಮ್ಮ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಅಸಲಿ ನಾಣ್ಯ ಬಳಕೆ

         ಹಣಕ್ಕಾಗಿ ಚಿನ್ನದ ವ್ಯಾಪಾರಿಗಳನ್ನು ಅಪಹರಿಸಿ ಹಣ ದರೋಡೆ ಮಾಡುವುದೇ ಇವರ ಕೆಲಸವಾಗಿತ್ತು. ಅದೇ ರೀತಿ ಧರಣಿಧರನ್ ಅವರಿಗೂ ಫೋನ್ ಮಾಡಿದ ಆರೋಪಿಗಳು ಮೊದಲು ಅಸಲಿ ಚಿನ್ನದ ನಾಣ್ಯವನ್ನು ತೋರಿಸಿ ಧರಣಿಧರ್ ಅವರನ್ನು ನಂಬಿಸಿದರು. ಬಳಿಕ ಹೆಚ್ಚಿನ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಹೇಳಿ ಪೊಲೀಸ್ ವೇಷದಲ್ಲಿ ಅಪಹರಣ ಮಾಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap