ಹುಳಿಯಾರು
ಹುಳಿಯಾರು ಹೋಬಳಿಯಲ್ಲಿನ ಜಿಲ್ಲೆಯ ಗಡಿ ರಸ್ತೆಯ ಚೆಕ್‍ಪೋಸ್ಟ್‍ಗೆ ಉಪತಹಸೀಲ್ದಾರ್ ಎಸ್.ಸೋಮೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ಹೋಬಳಿಯಲ್ಲಿನ ಜಿಲ್ಲೆಯ ಗಡಿ ಭಾಗವಾದ ಬೆಳ್ಳಾರ, ಪುರದಮಠ, ಯಳನಾಡು ಗ್ರಾಮದಲ್ಲಿ ಚೆಕ್‍ಪೋಸ್ಟ್ ತೆರೆಯಲಾಗಿದೆ ಚೆಕ್‍ಪೋಸ್ಟ್‍ಗೆ . ಭೇಟಿ ನೀಡಿದ ಅವರು, ಅಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು, ವಾಹನಗಳ ಓಡಾಡುವಿಕೆ, ಲಾಕ್ ಡೌನ್‍ಗೆ ಈ ಭಾಗದಲ್ಲಿ ಸಾರ್ವಜನಿಕರ ಸಹಕಾರ ಕುರಿತು ಮಾಹಿತಿ ಪಡೆದರು.
ವಾಹನ ಸವಾರರು ಹಾಗೂ ಸಾರ್ವಜನಿಕರನ್ನು ತಪಾಸಣೆ ಮಾಡುವ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯೂ, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆಯೂ, ಅನುಮಾನ ಬರುವ ವ್ಯಕ್ತಿಯ ಆರೋಗ್ಯ ತಪಾಸಣೆಗಾಗಿ ಆರೋಗ್ಯ ಸಿಬ್ಬಂದಿಯ ಗಮನಕ್ಕೆ ತರುವಂತೆಯೂ ಸಲಹೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ