ಹೊನ್ನಾಳಿ:
ತಾಲೂಕಿನ ಎಲ್ಲಾ 6 ಚೆಕ್ಪೋಸ್ಟ್ಗಳಲ್ಲಿ ಎಲ್ಲಾ ವಾಹನಗಳನ್ನು ಪರಿಶೀಲಿಸಿ ಬಿಡಲಾಗುವುದು ಎಂದು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಜೆ. ಶಂಕರ್ ಹೇಳಿದರು.ತಾಲೂಕಿನ ಹೊಳೆಹರಳಹಳ್ಳಿ ಕ್ರಾಸ್ ಬಳಿ ಇರುವ ಚೆಕ್ಪೋಸ್ಟ್ನಲ್ಲಿ ಭಾನುವಾರ ವಾಹನಗಳನ್ನು ಪರಿಶೀಲನೆ ಮಾಡಿದ ನಂತರ ಅವರು ಮಾತನಾಡಿದರು.
ಚೆಕ್ ಪೋಸ್ಟ್ನಲ್ಲಿರುವ ಸಿಬ್ಬಂದಿಗೆ ವ್ಯಾಪಕವಾದ ಪರಿಶೀಲನೆ ಮಾಡಲು ಸೂಚಿಸಲಾಗಿದೆ. ಅದೇ ರೀತಿ ಸಿಬ್ಬಂದಿ ಕೆಸ್ಆರ್ಟಿಸಿ, ಖಾಸಗಿ ಬಸ್ಗಳು, ಮ್ಯಾಕ್ಸಿಕ್ಯಾಬ್, ಕಾರ್ಗಳು, ದ್ವಿಚಕ್ರವಾಹನಗಳನ್ನು ಚೆಕ್ ಮಾಡಿ ಬಿಡುತ್ತಿದ್ದಾರೆ ಎಂದು ತಿಳಿಸಿದರು.ಚೆಕ್ಪೋಸ್ಟ್ ಮುಖ್ಯಸ್ಥ ಕೆ.ಆರ್. ಬಸವರಾಜ್, ಸದಸ್ಯರಾದ ಡಿ. ಚಂದ್ರಪ್ಪ, ಎಂ.ಕೆ. ನರಸಿಂಹಮೂರ್ತಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/D21-HLRP2.gif)