ತುರುವೇಕೆರೆ
ಚಿರತೆ ದಾಳಿ ಮಾಡಿ ಸೀಮೆ ಹಸುವೊಂದನ್ನು ಕೊಂದಿರುವ ಘಟನೆ ತಾಲ್ಲೂಕಿನ ಮಸರಕೊಟ್ಟಿಗೆಯ ತೋಟದ ಮನೆಯಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ.
ಮಸರುಕೊಟ್ಟಿಗೆ ತೋಟದ ಮನೆಯಲ್ಲಿ ವಾಸವಾಗಿರುವ ಅರುಣಕುಮಾರ್ ಎಂಬುವರ ಹಸುವನ್ನು ಭಾನುವಾರ ಬೆಳಿಗ್ಗೆ ಕೊಟ್ಟಿಗೆಯಿಂದ ಆಚೆ ಕಟ್ಟಿದ್ದಾರೆ. ನಂತರ ಚಿರತೆ ದಾಳಿ ಮಾಡಿ ಸೀಮೆ ಹಸುವನ್ನು ಎಳೆದುಕೊಂಡು ಹೋಗಿ ಕತ್ತಿನ ಭಾಗ, ಹಿಂಭಾಗದ ಭಾಗವನ್ನು ಕಚ್ಚಿ ತಿಂದು ಸಾಯಿಸಿದೆ. ಕೆಲ ದಿನಗಳ ಹಿಂದೆ ಎರಡು ನಾಯಿಗಳನ್ನು ತಿಂದು ಸಾಯಿಸಲಾಗಿತ್ತು. ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಅರಣ್ಯ ಇಲಾಖೆಯವರು ಕೂಡಲೇ ಚಿರತೆಯನ್ನು ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ