ತಿಪಟೂರು :
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ, ಹೆಚ್.ಮುದ್ದೇನಹಳ್ಳಿ ಗ್ರಾಮದ ರೈತ ಸುರೇಶ್‍ನಾಯ್ಕ (40) ರಾತ್ರಿ ಮನೆಯ ಹೊರಗಡೆ ಮಲಗಿದ್ದಾಗ ಚಿರತೆಯು ದಾಳಿಮಾಡಿ ಮುಖ, ಕುತ್ತಿಗೆ, ಬೆನ್ನಿಗೆ ಗಾಯಮಾಡಿದೆ.
ದಾಳಿಗೊಳಗಾದ ವ್ಯಕ್ತಿಯು ಹೇಳುವಂತೆ ರಾತ್ರಿ ನಾನು ಮಲಗಿದ್ದಾಗ ನನ್ನುನ್ನು ಹಿಡದು ಎಳೆದಂತಾಗಿ ನಾನು ನೋಡಿದಾಗ ಚಿರತೆಯು ನನ್ನ ತಲೆಯನ್ನು ಹಿಡಿದಿತ್ತು ಆಗ ನಾನು ಧೃತಿಗೆಡದೆ ಧೈರ್ಯವಾಗಿ ಅದನ್ನು ಎತ್ತಿ ಎಸೆದು ನನ್ನ ಪ್ರಾಣವನ್ನು ಉಳಿಸಿಕೊಂಡೆ ಎಂದು ಆಸ್ತಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುರೇಶ್‍ನಾಯ್ಕ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








