ತಂಡಗ ಗ್ರಾಮದಲ್ಲಿ ಚಿರತೆ ದಾಳಿ..!

ತುರುವೇಕೆರೆ:

      ತಾಲೂಕಿನ ದಬ್ಬೇಘಟ್ಟ ಹೋಬಳಿ ತಂಡಗ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಚಿರತೆಯೊಂದು ದಾಳಿ ಮಾಡಿ ಎರಡು ಹಸುಗಳನ್ನು ಬಲಿ ತೆಗೆದುಕೊಂಡಿದ್ದು ಸುತ್ತಮುತ್ತಲ ಗ್ರಾಮಸ್ಥರು ಭಯಭೀತರಾಗಿದ್ದಾರೆ.

     ತಂಡಗ ಗ್ರಾಮದ ರೈತ ಬೈರೇಗೌಡ ತೋಟದಲ್ಲಿ ವಾಸವಾಗಿದ್ದು ಶುಕ್ರವಾರ ರಾತ್ರಿ ಮನೆಯ ಮುಂದೆ ಕಟ್ಟಿದ್ದ ಹಸುಗಳ ಮೇಲೆ ಚಿರತೆ ದಾಳಿ ಮಾಡಿ ಸಾಯಿಸಿದೆ. ಇತ್ತೀಚೆಗೆ ಚಿರತೆ ಹಾವಳಿ ಹೆಚ್ಛಾಗಿದ್ದು ಜನರು ಬಯ ಬೀತರಾಗಿದ್ಧಾರೆ. ಸುದ್ದಿ ತಿಳಿದು ಅರಣ್ಯ ಇಲಾಖೆ ಹಾಗು ಪಶು ಇಲಾಖೆಯವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ರೈತನಿಗೆ ಸಾಂತ್ವಾನ ಹೇಳಿದ್ದಾರೆ.

      ಶನಿವಾರ ರಾತ್ರಿ 11 ಗಂಟೆ ಸಮಯದಲ್ಲಿ ವಕೀಲ ಹೆಚ್.ಎನ್.ಸುನಿಲ್ ಅವರು ತುರುವೇಕೆರೆಯಿಂದ ಕಾರಿನಲ್ಲಿ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದ ಸಮಯದಲ್ಲಿ ತುರುವೇಕೆರೆ-ದಂಡಿನಶಿವರ ರಸ್ತೆಯ ದೊಡ್ಡೇನಹಳ್ಳಿ ಕೋಳಿ ಫಾರಂ ಬಳಿ ಚಿರತೆಯೊಂದು ಕಾರಿಗೆ ಅಡ್ಡಬಂದಿದ್ದ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಅಂದಹಾಗೆ ತಾಲ್ಲೂಕಿನಲ್ಲಿ ಸುಮಾರು ಚಿರತೆಗಳಿವೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು ರಾತ್ರಿ ವೇಳೆ ರೈತರು ತಮ್ಮ ಜಮೀನಿಗೆ ಹೋಗಲು ಭಯಪಡುತ್ತಿದ್ದಾರೆ.

      ಆದ್ದರಿಂದ ಅರಣ್ಯ ಇಲಾಖೆಯವರು ಶೀಘ್ರ ಕ್ರಮ ಕೈಗೊಂಡು ಚಿರತೆಗಳನ್ನು ಹಿಡಿಯುವ ಮೂಲಕ ಸಾರ್ವಜನಿಕರಲ್ಲಿನ ಆತಂಕ ದೂರಮಾಡಬೇಕಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link