ತಿಪಟೂರು
ತಾಲ್ಲೂಕಿನ ಹೊನ್ನವಳ್ಳಿಯ ಬಡಿಗಿಕೆರೆಯಲ್ಲಿ ಮೇಕೆಗಳನ್ನು ಮೇಯಿಸಲು ಹೋಗಿದ್ದಾಗ ಗಿಡದ ಮರೆಯಲ್ಲಿ ಅವಿತು ಕುಳಿತಿದ್ದ ಚಿರತೆ ದಾಳಿ ಮಾಡಿದ್ದು ಮೇಕೆ ಬಲಿಯಾಗಿರುವ ಘಟನೆ ನಡೆದಿದೆ.
ಹೊನ್ನವಳ್ಳಿ ವಾಸಿಯಾದ ನಿಂಗಪ್ಪ ಎಂದಿನಂತೆ ಕೆರೆಯಲ್ಲಿ ಮೇಕೆ ಮೇಯಿಸಲು ಹೋದಾಗ ಚಿರತೆ ದಾಳಿ ಮಾಡಿ ಮೇಕೆಯನ್ನು ಹಿಡಿಯಿತು. ಈ ಸಂದರ್ಭದಲ್ಲಿ ಮಾಲಿಕ ನಿಂಗಪ್ಪ ಧೈರ್ಯದಿಂದ ಚಿರತೆಯನ್ನು ಎದುರಿಸಿ ಮೇಕೆಯನ್ನು ಬಿಡಿಸಿಕೊಳ್ಳಲು ಯಶಸ್ವಿಯಾದರು.
ಅದರ ಪ್ರಾಣವನ್ನು ರಕ್ಷಿಸಲಾಗದೆ ಹೋಗಿದ್ದಕ್ಕೆ ನೊಂದುಕೊಂಡು, ನನಗೆ ಮೇಕೆಯಿಂದ ಸುಮಾರು 10ರಿಂದ 15 ಸಾವಿರ ರೂ. ನಷ್ಟವಾಗಿದ್ದು ಬಡವನಾದ ನನಗೆ ಪರಿಹಾರಕೊಡುವವರ್ಯಾರೆಂದು ತನ್ನ ಅಳಲನ್ನು ತೋಡಿಕೊಂಡನು.ಹೊನ್ನವಳ್ಳಿ ಭಾಗದಲ್ಲಿ ಚಿರತೆ ಪದೆಪದೆ ದಾಳಿಮಾಡುತ್ತಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮವಹಿಸಬೇಕೆಂದು ಸ್ಳಳೀಯರು ಆಗ್ರಹಿಸಿದ್ದಾರೆ.