ಬೋನಿಗೆ ಬಿದ್ದ ಚಿರತೆ.!

ಹೊನ್ನಾಳಿ

    ತಾಲೂಕಿನ ಚೀಲಾಪುರ ಗ್ರಾಮದಲ್ಲಿ ಅರಣ್ಯ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ, ಚೀಲಾಪುರ ಗ್ರಾಮದ ಜಮೀನೊಂದರ ಸಮೀಪ ಅರಣ್ಯ ಅಧಿಕಾರಿಗಳು ಬೋನು ಇಡಲಾಗಿತ್ತು.ಬಾನುವಾರ ಬೆಳಗ್ಗೆ ಬಲೆಗೆ ಬಿದ್ದಿರುವ ಚಿರತೆ ಕಳೆದ ಆರು ತಿಂಗಳಿನಿಂದ ಚೀಲಾಪುರ,ಬೈರನಹಳ್ಳಿ,ಹಂಸಗಟ್ಟ,ಕರಡಿ ಕ್ಯಾಂಪ್‍ಗಳಲ್ಲಿ ಕಾಣಿಸಿಕೊಂಡು ಜನರಲ್ಲಿ ಭಯ ಹುಟ್ಟಿಸಿತು.ಚರತೆ ನೋಡಿದ ಗ್ರಾಮಸ್ಥರು ಭಯಬೀತರಾಗಿ ಅರಣ್ಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿ ಯಾವುದೇ ಅವಘಡ ಸಂಭವಿಸಿದಂತೆ ತಕ್ಷಣ ಕಾರ್ಯಪ್ರವೃತ್ತರಾಗಿ ಚಿರತೆಯನ್ನು ಹಿಡಿಯಿರಿ ಎಂದು ಮನವಿ ಮಾಡಿದ್ದರು.

    ಕಳೆದ ಒಂದು ತಿಂಗಳ ಹಿಂದೆ ಹತ್ತಿಹಾಳಿನಲ್ಲಿ ಚಿರತೆ ಕಾಣಿಸಿಕೊಂಡಿದ್ದರಿಂದ ಅಲ್ಲಿ ಬೋನು ಇಡಲಾಗಿತ್ತು, ತದನಂತರ ಹದಿನೈದು ಚೀಲಾಪುರದಲ್ಲಿ ಕಾಣಿಸಿಕೊಂಡಿದ್ದರಿಂದ ಚೀಲಾಪುರದ ಗ್ರಾಮದ ಸಮೀಪ ಇರುವ ಜಮೀನೊಂದರಲ್ಲಿ ಅರಣ್ಯ ಅಧಿಕಾರಿಗಳು ಬೋನು ಇಟ್ಟಿದ್ದರು ಈಗ ಬಾನುವಾರ ಬೆಳಗ್ಗೆ ಚಿರತೆ ಬೋನಿಗೆ ಬಿದ್ದಿದೆ, ಆದರೆ ಚಿರತೆ ಇಲ್ಲೇ ಕಾಣಿಸಿಕೊಂಡಿದ್ದರೂ ಯಾರಿಗೂ ತೊಂದರೆ ಕೊಟ್ಟಿಲ್ಲ,

 ಚಿರತೆ ನೊಡಲು ಜನಸಾಗರ

    ಅರಣ್ಯ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಚಿರತೆ ಬೀದ್ದಿರುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದರಿಂದ ಚಿರತೆ ನೋಡಲು ಸಾವಿರಾರು ಜನ ಸಾಗರವೇ ಸೇರಿತು. ಧಾರಕಾರವಾಗಿ ಸುರಿಯುತ್ತಿರುವ ಮಳೆಯನ್ನೂ ಲಕ್ಕಿಸದೆ ಚಿರತೆ ನೋಡಲು ನೂಕುನುಗ್ಗಲು ಉಂಟಾಗಿತು.

     ಕಳೆದ ಆರು ತಿಂಗಳಿನಿಂದ ಚಿರತೆಯೊಂದು ಚೀಲಾಪುರ,ಹಂಸಗಟ್ಟ,ಬೈರನಹಳ್ಳಿ, ಕರಡಿ ಕ್ಯಾಂಪ್ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡು ಜನರಲ್ಲಿ ಭಯ ಹುಟ್ಟಿಸಿತು, ಕೂಡಲೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಬೋನು ಇಟ್ಟಿದ್ದೇವು, ಈಗ ಬೋಬಿಗೆ ಚಿರತೆ ಬಿದ್ದಿದೆ ಗ್ರಾಮಸ್ಥರು ಭಯಪಡಬೇಕಾಗಿಲ್ಲ,ಯಾವ ಕಾಡಿಗೆ ಕಳುಹಿಸಬೇಕೆಂಬ ನಿರ್ಧಾರವಾಗಿಲ್ಲ ಬೋನಿಗೆ ಬಿದ್ದಿರುವ ಚಿರತೆಯನ್ನು ಯಾವ ಕಾಡಿಗೆ ಕಳುಹಿಸಬೇಕೆಂಬ ಚರ್ಚೆಯಾಗಿಲ್ಲ ನಮ್ಮ ಮೇಲಾಧಿಕಾರಿಗಳು ಸ್ಥಳಕ್ಕೆ ಬಂದ ನಂತರ ಚಿರತೆಯನ್ನು ಸಾಗಿಸುತ್ತೇವೆ ಎಂದು ಮಾವಿನಕಟ್ಟೆ ಆರ್‍ಎಫ್‍ಒ ಮಾವಿನಹೊಳಿಯಪ್ಪ ಪತ್ರಿಕೆಗೆ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link