ರೈತರನ್ನು ಕಾಡಿದ್ದ ಚಿರತೆ ಕೊನೆಗೂ ಸೆರೆ

ತಿಪಟೂರು

      ನೊಣವಿನಕೆರೆ ಹೋಬಳಿಯ ಸುತ್ತಮುತ್ತಲಿನ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ಹಿಡಿಯುವಲ್ಲಿ ಶುಕ್ರವಾರ ಬೆಳಗ್ಗೆ ಯಶಸ್ವಿಯಾಗಿದ್ದಾರೆ.

    ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಹಸು, ಕರು, ಹಾಗೂ ಕುರಿಗಳನ್ನು ತಿಂದು, ರೈತರಲ್ಲಿ ಭಯದ ವಾತವಾರಣ ನಿರ್ಮಾಣವಾಗಿತ್ತು, ಅರಣ್ಯ ಇಲಾಖೆಯವರು ಎಷ್ಟೆ ಪ್ರಯತ್ನ ಪಟ್ಟರೂ ಸೆರೆ ಸಿಕ್ಕಿರಲಿಲ್ಲ. ಬುಧವಾರ ನಾಗರಗಟ್ಟದ ರೈತರ ಹಸುವನ್ನು ತಿಂದಿತ್ತು, ಇದನ್ನು ಗಮನಿಸಿದ ಅರಣ್ಯ ಇಲಾಖೆ ಕನ್ನುಘಟ್ಟ ಆಚಾರ್ಯಪಾಳ್ಯ ನಡುವೆ ಬೋನನ್ನು ಇಟ್ಟಿದ್ದರು. ಶುಕ್ರವಾರ ಬೆಳಗ್ಗೆ ಬೋನಿಗೆ ಬಂದು ಸೆರೆಸಿಕ್ಕಿದೆ. ಸೆರೆ ಸಿಕ್ಕ ಚಿರತೆಯನ್ನು ನಾಗರಹೊಳೆ ಕಾಡಿಗೆ ಬೀಡಲು ಹೊಗಲಾಗುವುದು ಎಂದು ಆರ್.ಏಫ್.ಓ ರಾಕೇಶ್ ತಿಳಿಸಿದರು.ರೈತರು ತಮ್ಮ ಜಮೀನುಗಳಿಗೆ ಹೋಗಲು ಭಯಭೀತರಾಗಿದ್ದರು. ಚಿರತೆ ಸೆರೆ ಸಿಕ್ಕಿದ ವಿಷಯ ತಿಳಿದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link