ಚೇಳೂರು
ಚೇಳೂರಿಗೆ ಹಲವು ಮೂಲಭೂತ ಸೌಕರ್ಯಗಳ ಬೇಡಿಕೆಯನ್ನು ಇಟ್ಟುಕೊಂಡು ಶುಕ್ರವಾರ ಹಲವು ಸಂಘಟನೆಗಳು ಚೇಳೂರು ಬಂದ್‍ಗೆ ಕರೆಯನ್ನು ನೀಡಿದ ಹೀನಲೆಯಲ್ಲಿ ಚೇಳೂರಿನ ಶಾಲಾ ಕಾಲೇಜು,ಬ್ಯಾಂಕ್, ಎಲ್ಲಾ ಅಂಗಡಿಗಳ ವರ್ತಕರು ಸ್ವಯಂ ಬಾಗಿಲು ಮುಚ್ಚಿ ಬಂದ್‍ಗೆ ಬೆಂಬಲವನ್ನು ನೀಡಿದರು
ಬೇಡಿಕೆಗಳಲ್ಲಿ ಚೇಳೂರನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆ ಏರಿಸುವುದು.ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸುವುದು. ಎತ್ತಿನಹೊಳೆಯ ನಾಲೆಯಿಂದ ಚೇಳೂರು ಕೆರೆಗೆ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳವುದು.ಹಾಸ್ಟಲ್‍ಗಳಿಗೆ ನೀವೇಶನ ನೀಡುವುದು.ಹೆಚ್ಚಿನ ಕೆಎಸ್‍ಆರ್‍ಟಿಸಿ ಬಸ್ ಸೌಲಾಭ್ಯವನ್ನು ನೀಡಿಸುವುದು ಹೀಗೆ ಅನೇಕ ಸೌಕರ್ಯಗಳ ಬೇಡಿಕೆಯನ್ನು ಇಟ್ಟು ಚೇಳೂರು ಬಂದ್ ಮಾಡಲಾಯಿತು. ಈ ಬಂದ್‍ನ್ನಲ್ಲಿ ಹಲವು ಸಂಘಟನೆಯ ಪದಾಧಿಕಾರಿಗಳು,ಸಾರ್ವಜನಿಕರು ಭಾಗವಹಿಸಿದ್ದರು.
ಸ್ಥಳಕ್ಕೆ ಗುಬ್ಬಿಯ ತಹಸೀಲ್ದಾರ್ ಜಿ.ವಿ.ಮೋಹನ್‍ಕುಮಾರ್ ಬೇಟಿ ನೀಡಿ ಬೇಡಿಕೆಗಳ ಅಹವಾಲುನ್ನು ಸ್ವಿಕರಿಸಿ ಇದರ ಬಗ್ಗೆ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಜೊತೆಗೆ ಸಂಬಂಧ ಪಟ್ಟ ಇಲಾಖೆಯವರ ಜೊತೆ ಮಾತನಾಡುತ್ತಾವೆ ಎಂದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ