ಬೆಂಗಳೂರು
ಕ್ರಿಕೆಟ್ ಬಾಲ್ ತರಲು ಕೆರೆಗೆ ಇಳಿದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.ಅಂಬೇಡ್ಕರ್ ನಗರದ ಪ್ರಿಯಾಂಶು (೧೩) ಮೃತ ದುರ್ದೈವಿಯಾಗಿದ್ದಾನೆ,ಸರ್ಜಾಪುರದ ಕೊಡತಿ ಕೆರೆ ಬಳಿ ಗೆಳೆಯರೊಂದಿಗೆ ಕ್ರಿಕೆಟ್ ಆಟವಾಡುತ್ತಿದ್ದಾಗ ಕೆರೆಯಲ್ಲಿ ಬಿದ್ದ ಬಾಲ್ ತರಲು ಹೋದಾಗ ಈ ದುರ್ಘಟನೆ ನಡೆದಿದೆ.
ಶಾಲೆ ಮುಗಿಸಿ ಮನೆಗೆ ಬಂದ ಸಂಜೆ ಮನೆಗೆ ಬಂದ ಪ್ರಿಯಾಂಶು ತನ್ನ ಗೆಳೆಯರೊಂದಿಗೆ ಕ್ರಿಕೆಟ್ ಆಡಲು ಹೋಗಿದ್ದಾನೆ. ಈ ವೇಳೆ ಬಾಲ್ ಕೆರೆಯಲ್ಲಿ ಬಿದ್ದಿದೆ. ಇದನ್ನು ತರಲೆಂದು ಬಾಲಕ ಕೆರೆಗೆ ಇಳಿದಿದ್ದಾನೆ. ಪರಿಣಾಮ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.ಕೆರೆಯಲ್ಲಿ ಮುಳುಗಿದ ಬಾಲಕನಿಗಾಗಿ ಎನ್.ಡಿ.ಆರ್.ಎಫ್ ತಂಡ ರಕ್ಷಣಾ ಕಾರ್ಯ ನಡೆಸಿ ರಾತ್ರಿ ವೇಳೆಗೆ ಬಾಲಕನ ಶವವನ್ನು ಹೊರತೆಗೆದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವರ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








