ಶುಶ್ರೂಷಕಿಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವು 

ತುಮಕೂರು
        ವೈದ್ಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶುವೊಂದು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ನಗರದ ದೇವರಾಯಪಟ್ಟಣದ ನಿವಾಸಿ ರೇಖಾ ಎಂಬ ಗರ್ಭಿಣಿಯು ಸೋಮವಾರ ರಾತ್ರಿ 2 ಗಂಟೆ ವೇಳೆಗೆ ಆಗಮಿಸಿದರೂ ವಿವಿಧ ಕಾರಣಗಳನ್ನು ಹೇಳಿದ ಶುಶ್ರೂಷಕಿಯರು ವೈದ್ಯರು ಇಲ್ಲ ಎಂಬ ನೆಪ ಹೇಳಿ 5 ಗಂಟೆ ಸುಮಾರಿಗೆ ದಾಖಲು ಮಾಡಿಕೊಂಡಿದ್ದಾರೆ. ನಂತರ ಸಾಮಾನ್ಯ ಹೆರಿಗೆ ಆಗುತ್ತದೆ ಎಂದು ತಿಳಿದ ಶುಶ್ರೂಷಕಿಯರು ವೈದ್ಯರಿಗೆ ಮಾಹಿತಿ ನೀಡದೇ ತಾವೇ ಹೆರಿಗೆ ಮಾಡಲು ಮುಂದಾಗಿದ್ದಾರೆ. ಇದರಿಂದ ಹೆರಿಗೆ ಫಲಕಾರಿಯಾಗದೆ ಗರ್ಭದಲ್ಲೇ ಮಗು ಸಾವನ್ನಪ್ಪಿದೆ ಇದಕ್ಕೆ ಶುಶ್ರೂಷಕಿಯರ ಬೇಜವಬ್ಧಾರಿ ಕಾರಣ ಎಂದು ರೇಖಾಳ ಪೋಷಕರು ಆರೋಪಿಸಿದ್ದಾರೆ.
      ಗರ್ಭಿಣಿಯ ಸಹೋದರ ಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ, ಭಾನುವಾರದಂದು ವೈದ್ಯರಿಗೆ ತೋರಿಸಲೆಂದು ಆಸ್ಪತ್ರೆಗೆ ಬಂದಾಗ ಗುರುವಾರದಂದು ಹೆರಿಗೆ ಆಗುತ್ತದೆ ಎಂದು ದಿನಾಂಕ ಹೇಳಿ ಕಳುಹಿಸಿದ್ದರು. ಆದರೆ ಸೋಮವಾರ ರಾತ್ರಿ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಇಲ್ಲಿ ಬೆಳಗಿನ ಜಾವ 5 ಗಂಟೆ ತನಕ ಕಾಯಿಸಿ ನಂತರ ದಾಖಲು ಮಾಡಿಕೊಂಡರು. ಹೆರಿಗೆ ನೋವು ಹೆಚ್ಚಾದ ಕಾರಣ ವೈದ್ಯರಿಗೆ ಮಾಹಿತಿ ನೀಡದೆ ಅವರನ್ನು ಸಂಪರ್ಕಿಸದೆ ಹೆರಿಗೆ ಮಾಡಿ ಮಗುವನ್ನು ಕೊಂದಿದ್ದಾರೆ ಎಂದು ಆರೋಪ ಮಾಡಿದ್ದಾರೆ 
      ಹೊಟ್ಟೆಯಲ್ಲಿನ ಮಗು ಸಾವನ್ನಪ್ಪಲು ಶುಶ್ರೂಷಕರ ಬೇಜವ್ದಾರಿಯೇ ಕಾರಣವಾಗಿದ್ದು, ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಅಲ್ಲದೆ ಅವರ ಮೇಲೆ ಕಾನೂನುರಿತ್ಯಾ ಕ್ರಮಕೈಗೊಂಡು ನಮಗೆ ನ್ಯಾಯ ಒದಗಿಸಬೇಕೆಂದು ಆಕ್ರೋಶ ವ್ಯಕ್ತ ಪಡಿಸಿದರು. 
    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link