ಬೆಂಗಳೂರು
ಗೇಮ್ ಆಡಲು ಹೋದ ಬಾಲಕನನ್ನು ಕಳ್ಳ ಎಂದು ಭಾವಿಸಿ ಹಲ್ಲೆ ನಡೆಸಿರುವ ಮಂತ್ರಿ ಮಾಲ್ನ ಮೂವರು ಸಿಬ್ಬಂದಿಯನ್ನು ಮಲ್ಲೇಶ್ವರಂ ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ಕೈಗೊಂಡಿದ್ದಾರೆ.
ಕಳೆದ ಶುಕ್ರವಾರ ಸಂಜೆ ಮಂತ್ರಿ ಮಾಲ್ಗೆ ಗೇಮ್ ಆಡಲು ಹೋಗಿದ್ದ ವಿಜಯ್ ಕುಮಾರ್(15)ಎನ್ನುವ ಅಪ್ರಾಪ್ತ ಬಾಲಕ ಮಾಲ್ನ 2 ನೇ ಮಹಡಿಯಲ್ಲಿ ಮೊಬೈಲ್ ಚಾರ್ಜ್ಗೆ ಹಾಕಿ ಮಾತನಾಡುತ್ತಿದ್ದಾಗ ಚಾರ್ಜಿಂಗ್ ಪಾಯಿಂಟ್ನಲ್ಲಿ ಬೇರೆಯವರು ತಮ್ಮ ಮೊಬೈಲ್ ಫೋನ್ಗಳನ್ನು ಚಾರ್ಜ್ಗೆ ಹಾಕಿದ್ದರು.
ಈ ವೇಳೆ ಅಲ್ಲಿಗೆ ಬಂದಿದ್ದ ಮಂತ್ರಿ ಮಾಲ್ನ 3-4 ಸಿಬ್ಬಂದಿ ಬಾಲಕನ ಬಳಿ ಬಂದು ಮೊಬೈಲ್ ಕಳ್ಳತನ ಮಾಡುತ್ತಿಯಾ ಎಂದು ಹಲ್ಲೆ ಮಾಡಿದ್ದಾರೆ. ಅಲ್ಲದೇ ಬಾಲಕನನ್ನು ಪಾರ್ಕಿಂಗ್ ಸ್ಥಳಕ್ಕೆ ಕರೆದೊಯ್ದು ಮತ್ತೆ ಹಲ್ಲೆ ಮಾಡಿದ್ದಾರೆ ಎಂದು ಬಾಲಕನ ಪೋಷಕರು ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಮೂವರನ್ನು ವಶಕ್ಕೆ ಪಡೆದ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








