ಕುಡಿಯುವ ನೀರಿಗಾಗಿ ಮಕ್ಕಳ ಹಾಹಕಾರ

ಪಾವಗಡ
 
          ತಾಲ್ಲೂಕಿನ ನಿಡಗಲ್ ಹೋಬಳಿಯ ಸಿ.ಕೆ ಪುರ ಗ್ರಾ.ಪಂ ಚನ್ನ ಸಾಗರದ ಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲಾ ಮಕ್ಕಳು ಹಾಗೂ ಅಂಗನವಾಡಿ ಚಿಣ್ಣರಿಗೆ ಮತ್ತು ವಯೋವೃದ್ಧರಿಗೆ ದಿನ ಬಳಕೆಗಾಗಿ ಕುಡಿಯುವ ನೀರಿಗೆ ಹಾಹಕಾರ ವುಂಟಾಗಿದೆ ಎಂದು ವಯೋವೃದ್ಧ ಸಣ್ಣ ರಾಮಪ್ಪ ದೂರಿದ್ದಾರೆ.  
          ಶಾಲೆ ಮುಂಗಾದಲ್ಲಿದ್ದ ಜಾನುವಾರು ತೊಟ್ಟಿಗೆ ನೀರು ಬಿಡದ ಗ್ರಾ.ಪಂ ನವರು ಹಟ್ಟಿಯ ಪ್ರಭಾವಿ ಮುಖಂಡರು ಖಾಸಗಿ ಜಮೀನಿನಲ್ಲಿ ಜಾನುವಾರು ತೊಟ್ಟಿ ಮಾಡಿರುವುದರಿಂದ ಶಾಲಾ ಮಕ್ಕಳು, ವಯೋವೃದ್ಧರು, ಅಂಗನವಾಡಿ ಮಕ್ಕಳು ಸೇರಿದಂತೆ ಮಹಿಳಯರಿಗೆ ದಿನ ಬಳಕೆ ನೀರಿಗಾಗಿ ಕಳೆದ 6 ತಿಂಗಳಿಂದ ಶಾಲಾ ಮಕ್ಕಳು ಮಧ್ಯಾನದ ಬಿಸಿಊಟ ಆದಮೇಲೆ ತಟ್ಟೆಗಳು, ಕೈ ತೊಳೆಯಲು ತಮ್ಮ ತಮ್ಮ ಮನೆಗಳಿಗೆ ಮಕ್ಕಳು ಓಡುತ್ತಿರುವುದು ಸಾಮಾನ್ಯವಾಗಿದೆ.
          ಶಾಲೆಯಿಂದ ಸುಮಾರು 3 ಕಿಮೀ ದೂರದ ಜಾನುವಾರು ತೊಟ್ಟಿಗೆ ಹೋಗಲು ದೂರ ಆದ ಕಾರಣ ಶಾಲಾ ಮಕ್ಕಳು ತಮ್ಮ ಮನೆಗಳಿಗೆ ಬರುವುದನ್ನು ಗ್ರಾಮದ ಮಹಿಳೆ ರತ್ಮಮ್ಮ ಯೆಂಬುವವರು ಕಿಡಿಕಾರಿದ್ದು ವ್ಯಕ್ತಿಯೊಬ್ಬ  ಜಮೀನಿನಲ್ಲಿ ಜಾನುವಾರು ತೊಟ್ಟಿ ನಿರ್ಮಿಸಿಕೊಂಡು ಸುಮಾರು 25 ತೆಂಗಿನ ಗಿಡಗಳನ್ನು ಬೆಳೆಯಲ ಗ್ರಾ.ಪಂ. ಅನುವು ಮಾಡಿಕೊಟ್ಟಿದ್ದು ಜನರ ಉಪಯೋಗಕ್ಕೆ ಬಾರದ ಜಾನುವಾರು ತೊಟ್ಟಿಯನ್ನು ಹಟ್ಟಿಯ ಹೊರವಲಯದ 3ಕಿಮೀ ದೂರದಲ್ಲಿನ ತೊಟ್ಟಿಗೆ  ಸಾರ್ವಜನಿಕರು ವಯೋವೃದ್ಧರು.
          ಶಾಲಾ ಮಕ್ಕಳು ತೆರಳಲು ಸಾಧ್ಯವಾಗದೇ ಪಡಿಪಾಟಲು ಪಡುತ್ತಿರುವುದು ಕಂಡು ಬಂದಿದ್ದು ಇನ್ನಾದರು ಗ್ರಾ.ಪಂ ನವರು ಶಾಲಾ ಮಕ್ಕಳಿಗೆ, ವಯೋವೃದ್ಧರಿಗೆ ಅತೀ ಸಮೀಪದ ಶಾಲಾ ಮುಂಭಾಗದ ಜಾನುವಾರು ತೊಟ್ಟಿಗೆ ನೀರನ್ನು ಗ್ರಾ.ಪಂ ನವರು ಬಿಡುವಂತೆ ಮಹಿಳೆಯರು,ವಯೋವೃದ್ಧರು ಮನವಿಮಾಡಿದ್ದಾರೆ. 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link