ಮಗುವನ್ನು ಅಪಹಸಿದ ಮಹಿಳೆ ಪೊಲೀಸರ ವಶಕ್ಕೆ ..!

ಕುಣಿಗಲ್

      ಅಪರಿಚಿತ ಮಹಿಳೆಯೊಬ್ಬಳು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣ ಹೊರಟಿದ್ದ ಮಹಿಳೆಯೊಬ್ಬಳನ್ನು ಪರಿಚಯ ಮಾಡಿಕೊಂಡು ಆಕೆಯ ಎರಡು ವರ್ಷದ ಮಗನನ್ನು ತಿಂಡಿಕೊಡಿಸುವುದಾಗಿ ನಂಬಿಸಿ ರೈಲಿನಲ್ಲಿ ತೆರಳಲು ಕರೆದೊಯ್ದಿದ್ದ ಮಹಿಳೆಗೆ ಮಗುವಿನ ಪೋಷಕರು ಆಟೋಚಾಲಕರು ಪತ್ತೆಹಚ್ಚಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

      ಬೆಳ್ಳಿಗ್ಗೆ ಬಸ್‍ನಿಲ್ದಾಣಕ್ಕೆ ಆಗಮಿಸಿದ್ದ ಹಳೇಬೀಡು ಮೂಲದ ಗೀತಾ ಎಂಬಾಕೆಯೇ ಇಂತಹ ಘಟನೆಯಲ್ಲಿ ಸಿಕ್ಕಿ ಜನರಿಂದ ಗೂಸಾ ತಿಂದ ಮಹಿಳೆ. ಕೆಲ ತಿಂಗಳಿಂದೆ ರಾಯದುರ್ಗ ದಿಂದ ಸರಳ ಎಂಬ ಗರ್ಭಿಣಿ ಮಹಿಳೆ ಹಾಗೂ ಆಕೆಯ ಗಂಡ ಹೊನ್ನೂರುಸ್ವಾಮಿ ಎಂಬುವರು ಗಾರೆ ಕೆಲಸಕ್ಕೆಂದು ಪಟ್ಟಣಕ್ಕೆ ಬಂದು ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಗರ್ಭಿಣಿಯಾಗಿದ್ದ ಸರಳ ಎಂಬಾಕೆಗೆ ಹನ್ನೊಂದು ದಿನದ ಹಿಂದೆ ಹೆಣ್ಣು ಮಗು ಒಂದಕ್ಕೆ ಜನ್ಮ ನೀಡಿದ್ದಳು.

      ಇದರಿಂದ ಊರಿಗೆ ಹೊರಡಲು ತಯಾರಾದ ಈ ದಂಪತಿಗಳು ಶನಿವಾರ ಬೆಳ್ಳಿಗೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಪತಿ ಹೊನ್ನೂರುಸ್ವಾಮಿ ವಸ್ತುಗಳನ್ನು ತರಲು ಹೋದಾಗ ಒಬ್ಬಳೇ ಇದ್ದ ಸರಳ ಬಳಿಗೆ ಬಂದ ಗೀತಾ ಮಾತನಾಡಿ ನಂಬಿಸಿ ಎರಡು ವರ್ಷದ ಗಂಡು ಮಗುವಿಗೆ ತಿಂಡಿಕೊಡಿಸಿ ಕೊಂಡು ಬರುವುದಾಗಿ ನಂಬಿಸಿ ಆಟೋದಲ್ಲಿ ಕೂರಿಸಿಕೊಂಡು ಪರಾರಿ ಯಾಗಲು ರೈಲ್ವೇ ನಿಲ್ದಾಣಕ್ಕೆ ಕರೆದೊಯ್ದಿದ್ದಾಳೆ.

         ಪತಿರಾಯ ಬಂದು ಮಗು ಎಲ್ಲಿ ಎಂದು ವಿಚಾರಿಸಿದಾಗ ನಡೆದ ಘಟನೆಯನ್ನು ಸರಳ ತಿಳಿಸಿದ್ದಾಳೆ. ಮಗು ಮತ್ತು ಕರೆದೊಯ್ದ ಮಹಿಳೆ ಗೀತಾಳನ್ನು ಅಂಗಡಿ ಸಾಲಿನಲ್ಲಿ ಹುಡುಕಿದರೂ ಕಾಣದೇ ಹೋದಾಗ ಗಾಬರಿಗೊಂಡು ಆಟೋ ಚಾಲಕರನ್ನ ಕೇಳಿದ್ದಾರೆ ಇದನ್ನ ಗಮನಿಸಿದ ಆಟೋ ಚಾಲಕನೊಬ್ಬ ಈಗ ತಾನೆ ನಾನೇ ಆಟೋದಲ್ಲಿ ರೈಲ್ವೆ ನಿಲ್ದಾಣಕ್ಕೆ ಬಿಟ್ಟು ಬಂದೆ ಆಕೆಯ ಮಗಲ್ಲವೇ ಎಂಬುದನ್ನ ಖಾತರಿ ಮಾಡಿಕೊಂಡ ಆತ ತಕ್ಷಣ ರೈಲ್ವೆ ನಿಲ್ದಾಣಕ್ಕೆ ಪೋಷಕರನ್ನ ಕರೆದೊಯ್ದು ನೋಡಿದಾಗ ರೈಲು ಬರದೇ ತಡವಾಗಿದ್ದರಿಂದ ಅಲ್ಲೇ ಇದ್ದ ಮಗು ಅಪಹರಿಸಿದ್ದ ಗೀತಾ ಳನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ವಶಕ್ಕೆ ಪಡೆದ ಪೊಲೀಸರು ಗೀತಾ ಎಂಬಾಕೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆಯಾಕುತ್ತಿದ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪಿ.ಎಸ್.ಐ. ವಿಕಾಸ್‍ಗೌಡ ಅವರು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link