ಚಿತ್ರದುರ್ಗ:
ಮಕ್ಕಳ ದಿನಾಚರಣೆ ಪ್ರಯುಕ್ತ ನ.14 ರಂದು ಪತ್ರಕರ್ತರ ಭವನದಲ್ಲಿ ಬಾಲ್ಯ ನೆನಪು ಕಾರ್ಯಕ್ರಮ ಆಯೋಜಿಸುವ ಕುರಿತು ಎಂಟು ವೇದಿಕೆಗಳ ವತಿಯಿಂದ ಶೃಂಗೇರಿ ಮಠದ ಹತ್ತಿರವಿರುವ ಪಿ.ವಿ.ಎಸ್.ಕಾಲೇಜಿನಲ್ಲಿ ಭಾನುವಾರ ಪೂರ್ವಭಾವಿ ಸಭೆ ನಡೆಸಲಾಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ, ಜ್ಞಾನಜ್ಯೋತಿ ದರ್ಶನ್ ಎಜುಕೇಷನ್ ಟ್ರಸ್ಟ್, ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ, ರಾಜಲಕ್ಷ್ಮಿ ಅಸೋಸಿಯೇಟ್ಸ್ ರಿ., ಬಾಪೂಜಿ ಕಂಪ್ಯೂಟರ್ ಸೈನ್ಸ್ ಸಂಸ್ಥೆ, ಬಾಪೂಭ ಸಾಹಿತ್ಯ ಸಾಂಸ್ಕತಿಕ ವೇದಿಕೆ ಅಡಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬಾಲ್ಯ ನೆನಪು ಕಾರ್ಯಕ್ರಮವನ್ನು ಮಕ್ಕಳ ದಿನಾಚರಣೆಯಂದು ಅರ್ಥಪೂರ್ಣವಾಗಿ ಆಚರಿಸುವ ಕುರಿತು ಅಗತ್ಯವಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಚರ್ಚಿಸಲಾಯಿತು.
ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಶಂಕರಪ್ಪ, ಗೌರವಾಧ್ಯಕ್ಷೆ ಲಲಿತಾಕೃಷ್ಣಮೂರ್ತಿ, ಉಪಾಧ್ಯಕ್ಷೆ ರೂಪಜನಾರ್ಧನ್, ಬಾಪೂಭ ಅಧ್ಯಕ್ಷ ಜಯದೇವಮೂರ್ತಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಉಮೇಶ್, ಕರವೇ ಜಿಲ್ಲಾಧ್ಯಕ್ಷ ಕೆ.ಆರ್.ಮಂಜುನಾಥ್, ರಾಜಲಕ್ಷ್ಮಿ ಅಸೋಸಿಯೇಟ್ಸ್‍ನ ರಾಜ್‍ಕುಮಾರ್, ಹೆಚ್.ಆನಂದ್, ಸೌಮ್ಯ ಮಂಜುನಾಥ್, ವಿಜಯಕುಮಾರ್ ಇನ್ನು ಮುಂತಾದವರು ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








