ಕೊರಟಗೆರೆ
ರೈತರ ಜೀವನಕ್ಕೆ ಆಧಾರವಾಗಿದ್ದ ಮೂರು ಮೇಕೆಗಳ ಮೇಲೆ ಚಿರತೆ ಸೋಮವಾರ ರಾತ್ರಿ ದಾಳಿ ನಡೆಸಿದ ಹಿನ್ನಲೆಯಲ್ಲಿ ಗೌರಗಾನಹಳ್ಳಿ ಗ್ರಾಮದ ರೈತರು ಸೇರಿದಂತೆ ಮಹಿಳೆಯರು ಮನೆಯಿಂದ ಹೊರಗಡೆ ಬರಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಕಸಬಾ ಹೋಬಳಿ ಹುಲೀಕುಂಟೆ ಗ್ರಾಪಂ ವ್ಯಾಪ್ತಿಯ ಗೌರಗಾನಹಳ್ಳಿ ಗ್ರಾಮದ ರೈತ ಚಿಕ್ಕಣ್ಣಪ್ಪ ಎಂಬುವರ ಹೊಲದಲ್ಲಿನ ರೊಪ್ಪದಲ್ಲಿ 30ಸಾವಿರಕ್ಕೂ ಹೆಚ್ಚು ಬೆಲೆಬಾಳುವ ಮೂರು ಮೇಕೆಯನ್ನು ಸೋಮವಾರ ಮಧ್ಯರಾತ್ರಿ ಚಿರತೆ ತಿಂದುಹಾಕಿವೆ. ಗೌರಗಾನಹಳ್ಳಿ ಹಲವು ಕಡೆ ಚಿರತೆ ಕಾಣಿಸಿಕೊಂಡು ಗ್ರಾಮದಲ್ಲಿ ಭಯದ ವಾತವರಣ ಇದೆ.
ಎರಡು ತಿಂಗಳ ಹಿಂದೆ ಇವರಿಗೆ ಸೇರಿದ ಒಂದು ಮೇಕೆಯ ಚಿರತೆ ಏಕಾಏಕಿ ದಾಳಿ ಮಾಡಿ ಮೇಕೆಯನ್ನು ಎಳೆದುಕೊಂಡು ತಿಂದುಹಾಕಿತ್ತು. ಸ್ಥಳಕ್ಕೆ ಕೊರಟಗೆರೆ ವಲಯ ಅರಣ್ಯ ಅಧಿಕಾರಿ ಮತ್ತು ಪಶು ಇಲಾಖೆಯ ಅಧಿಕಾರಿಗಳ ತಂಡ ಬೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
