ಕೊರಟಗೆರೆ
ಚಿರತೆ ದಾಳಿಯಿಂದ ಮೇಕೆ ಮೃತಪಟ್ಟ ಘಟನೆ ಕೊರಟಗೆರೆ ಪಟ್ಟಣದ ಗಂಗಾಧರೇಶ್ವರಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಡೆದಿದ್ದು ಜನರು ಮತ್ತು ಜಾನುವರುಗಳ ಸಾಗಾಣಿಕೆ ಗಾರರು ಭಯಬೀತರಾಗಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ಕೊರಟಗೆರೆ ಪಟ್ಟಣದಲ್ಲಿ ಕೂಲಿಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ನಂಜುಂಡಪ್ಪ ಎಂಬುವರಿಗೆ ನಾಲ್ಕು ಮೇಕೆಗಳನ್ನು ಸಾಕಿದು ಕೊರಟಗೆರೆ ಹೊಂದಿಕೊಂಡಂತೆ ಇರುವ ಗಂಗಾಧರೇಶ್ವರ ಬೆಟ್ಟದ ತಪ್ಪಲಿನಲ್ಲಿ ಮೇವು ಮೇಯುತ್ತಿದ್ದ ಮೇಕೆಯನ್ನು ಚಿರತೆ ಹಠಾತ್ ದಾಳಿ ಮಾಡಿ ಮೇಕೆಯನ್ನು ಎಳೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ನಾಯಿಗಳು ಮತ್ತು ಧನಕಾಯುವವರ ಗಲಾಟೆಗೆ ಚಿರತೆ ಮೇಕೆ ಬಿಟ್ಟು ಪರಾರಿಯಾಗಿದೆ.
ಇದರಿಂದ ನಂಜುಂಡಪ್ಪನಿಗೆ 8 ಸಾವಿರ ರೂಗಳ ನಷ್ಟವಾಗಿದೆ, ಈ ಬಗ್ಗೆ ಅನೇಕ ಬಾರಿ ಕೊರಟಗೆರೆ ವಲಯ ಅರಣ್ಯ ಅದಿಕಾರಿಗಳಿಗೆ ತಿಳಿಸಿದರು ಉದಾಸೀನಮಾಡಿದ್ದರಿಂದ ಈ ರೀತಿಯ ಘಟನೆಗಳು ಪದೇ ಪದೇ ನಡೆಯುತ್ತಿದ್ದು ಕ್ಷೇತ್ರದ ಶಾಸಕ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರವರು ಇಲಾಖಾ ಆದಿಕಾರಿಗಳಿಗೆ ಕಟ್ಟುನಿಟ್ಟಗಿ ಆದೇಶಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.