ಮಿಡಿಗೇಶಿ
ಅ.2 ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರುತ್ತಿದೆ ಎಂಬುದರ ಬಗ್ಗೆ ಇತ್ತೀಚಿನ ಕೆಲದಿನಗಳ ಹಿಂದೆಯಷ್ಠೇ ಪತ್ರಿಕೆಯಲ್ಲಿ ಸುದ್ದಿ ಪ್ರಚಾರವಾಗಿತ್ತು ಅದರಂತೆಯೇ ಮಿಡಿಗೇಶಿ ಈರಣ್ಣ ಬೆಟ್ಟ, ಮಿಡಿಗೇಶಿ ಏಷ್ಯಾದ ಎರಡನೇ ಏಕಶಿಲಾ ಬೆಟ್ಟದಲ್ಲಿ ಪ್ರತದಿನ ಐದಾರು ಕರಡಿಗಳು ಜೊತ ಜೊತೆಯಲ್ಲಿ ಜಂಟಿಯಾಗ ರಾತ್ರಿ ಸಮಯದಲ್ಲಿ ಆಹಾರಕ್ಕಾಗಿ ಓಡಾಡುತ್ತಿದ್ದು ಬೆಳಿಗ್ಗೆ 7-00 ಗಂಟೆಯ ವೇಳೆಗೆ ಬೆಟ್ಟ ಗುಡ್ಡಗಳನ್ನು ಸೇರಿಕೊಳ್ಳುತ್ತಿರುತ್ತವೆ
ಅದರಂತೆಯೇ ಈ ಭಾಗದಲ್ಲಿ ಚಿರತೆಗಳ ಕಾಟವೂ ಮಿತಿ ಮೀರಿದೆ ಅ.02 ರ ಗಾಂಧೀಜಯಂತಿ ದಿನದಂದು ಮಿಡಿಗೇಶಿಯಿಂದ ಐ.ಡಿ.ಹಳ್ಳಿಗೆ ಹಾದುಹೋಗುವ ಪಿ.ಡಬ್ಯೂ ಡಿ. ರಸ್ತೆ ಮಾರಿ ದಿನ್ನೆಯ ಬಳಿ ಬೆಳಿಗ್ಗೆ 7-00 ಗಂಟೆಯ ಸಮಯದಲ್ಲಿ ಎರಡು ವರ್ಷದ ಹೆಣ್ಣು ಚಿರತೆ ಮರಿಗೆ ಅಪರಿಚಿತವಾಹನ ಡಿಕ್ಕಿ ಹೊಡೆದಿದ್ದು ಸಾವು ಬದುಕಿನ ಹೋರಾಟದಲ್ಲಿತ್ತು ಚಿರತೆಯನ್ನುನೋಡಲು ನೂರಾರು ಜನರ ಗುಂಪು ನೋಡಿ ಬರುತ್ತಿದ್ದರು. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಚಿರತೆ ಮರಿಯನ್ನು ಆಸ್ಪತ್ರೆಗೆ ಕೊಂಡೋಯ್ದರು ಹೆಚ್ಚಿನ ಚಿಕಿತ್ಸೆ ಬನ್ನೇರುಘಟ್ಟಲ್ಲಿ ಕೊಡಿಸಲಾಗುವುದೆಂದರು. ಸ್ಥಳಕ್ಕೆ ಫರೆಸ್ಟ್ ಆಫೀಸರ್ ಮುತ್ತುರಾಜು ಮತ್ತೋರ್ವ ಫಾರೆಸ್ಟರ್ ಸೋಮಶೇಖರ್, ಅರಣ್ಯ ರಕ್ಷಕ ಕರಿಯಣ್ಣ, ಚಂದ್ರಶೇಖರ್ ಹಾಗೂ ಅರಣ್ಯ ಸಿಬ್ಬಂಧಿ ಸ್ಥಳಕ್ಕಾಗಮಿಸಿದ್ದರು ಮಿಡಿಗೇಶಿ ರಕ್ಷಣಾ ಸಿಬ್ಬಂಧಿರವರು ಸ್ಥಳಕ್ಕೆ ಭೇಟಿ ನೀಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ