ಜಿಲ್ಲೆಯಲ್ಲಿ 13.6 ಲಕ್ಷ ಮತದಾರರು;ವಿನೋತ್ ಪ್ರಿಯಾ

ಚಿತ್ರದುರ್ಗ;

      ವಿಧಾನಸಭಾ ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧಿಸಿದಂತೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತದಾರರ ಅಂತಿಮ ಪಟ್ಟಿಯನ್ನು ಪ್ರಚುರಪಡಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 13,60,688 ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದರು.

       ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಿಮ ಮತದಾರರ ಪಟ್ಟಿ ಪ್ರಕಟ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

     ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕರಡು ಮತದಾರರ ಪಟ್ಟಿಯನ್ವಯ ಒಟ್ಟು 13,43,207 ಮತದಾರರು ಇದ್ದರು. ಫೆಬ್ರವರಿ 7 ರಂದು ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 13,60,688 ಮತದಾರರು ಇದ್ದಾರೆ. ಅಂತಿಮ ಮತದಾರರನ್ವಯ ಜಿಲ್ಲೆಯಲ್ಲಿನ 1648 ಮತಗಟ್ಟೆಗಳ ವ್ಯಾಪ್ತಿಯಲ್ಲಿ 683572 ಪುರುಷ ಮತದಾರರು, 677029 ಮಹಿಳಾ ಮತದಾರರು ಹಾಗೂ 87 ಇತರೆ ವರ್ಗದ ಮತದಾರರಿದ್ದಾರೆ.

     ತಾಲ್ಲೂಕುವಾರು ವಿವರ ಇಂತಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 284 ಮತಗಟ್ಟೆ, 119875 ಪುರಷ, 117060 ಮಹಿಳೆಯರು ಹಾಗೂ 7 ಇತರೆ ಸೇರಿದಂತೆ ಒಟ್ಟು 236942 ಮತದಾರರಿದ್ದಾರೆ. ಚಳ್ಳಕೆರೆ ತಾಲ್ಲೂಕಿನಲ್ಲಿ 259 ಮತಗಟ್ಟೆ, 106479 ಪುರಷ, 106395 ಮಹಿಳೆಯರು ಹಾಗೂ 4 ಇತರೆ ಸೇರಿದಂತೆ ಒಟ್ಟು 212878 ಮತದಾರರಿದ್ದಾರೆ.

    ಚಿತ್ರದುರ್ಗ ತಾಲ್ಲೂಕಿನಲ್ಲಿ 283 ಮತಗಟ್ಟೆ, 126624 ಪುರಷ, 128300 ಮಹಿಳೆಯರು ಹಾಗೂ 35 ಇತರೆ ಸೇರಿದಂತೆ ಒಟ್ಟು 254959 ಮತದಾರರಿದ್ದಾರೆ. ಹಿರಿಯೂರು ತಾಲ್ಲೂಕಿನಲ್ಲಿ 285 ಮತಗಟ್ಟೆ, 117957 ಪುರಷ, 118913 ಮಹಿಳೆಯರು ಹಾಗೂ37 ಇತರೆ ಸೇರಿದಂತೆ ಒಟ್ಟು 236907 ಮತದಾರರಿದ್ದಾರೆ. ಹೊಸದುರ್ಗ ತಾಲ್ಲೂಕಿನಲ್ಲಿ 240 ಮತಗಟ್ಟೆ, 96715 ಪುರಷ, 93434 ಮಹಿಳೆಯರು ಸೇರಿದಂತೆ ಒಟ್ಟು 190149 ಮತದಾರರಿದ್ದಾರೆ ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ 297 ಮತಗಟ್ಟೆ, 115922 ಪುರಷ, 112927 ಮಹಿಳೆಯರು ಹಾಗೂ 4 ಇತರೆ ಸೇರಿದಂತೆ ಒಟ್ಟು 228853 ಮತದಾರರಿದ್ದಾರೆ.

    18 ರಿಂದ 19 ವರ್ಷದೊಳಗಿನ ಯುವ ಮತದಾರರು ಕರಡು ಮತದಾರರ ಪಟ್ಟಿ ಅನ್ವಯ 15,567 ಯುವ ಮತದಾರರು ನೊಂದಣಿಯಾಗಿದ್ದರು. ಅಂತಿಮ ಮತದಾರರ ಪಟ್ಟಿ ಅನ್ವಯ 29,208 ಯುವ ಮತದಾರರಿದ್ದಾರೆ. ಸೇವಾ ಮತದಾರರು 395 ಇದ್ದು, ಅದರಲ್ಲಿ 381 ಪುರುಷ ಹಾಗೂ 14 ಮಹಿಳಾ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು

    ಫೆ.7 ರಂದು ಅಂತಿಮ ಮತದಾರರ ಪಟ್ಟಿಯನ್ನು ಆಯಾ ಮತಗಟ್ಟೆ ಕೇಂದ್ರ, ಗ್ರಾಮ ಪಂಚಾಯಿತಿ ಕಚೇರಿ, ನಗರಸಭೆ, ಪುರಸಭೆ ಅಥವಾ ಪಟ್ಟಣ ಪಂಚಾಯಿತಿ, ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‍ಸಿ) ವೆಬ್‍ಸೈಟ್‍ ನಲ್ಲಿಯೂ ಸಹ ಪರಿಶೀಲಿಸಬಹುದು. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ಪೂರಕ ದಾಖಲೆಗಳೊಂದಿಗೆ ಅರ್ಜಿಗಳನ್ನು ಆನ್‍ಲೈನ್ ಮೂಲಕ ಸಲ್ಲಿಸಬಹುದು. ಜನನ ಪ್ರಮಾಣ ಪತ್ರ, 7ನೇ ಅಥವಾ 10ನೇ ತರಗತಿ ಅಂಕಪಟ್ಟಿ, ಭಾರತೀಯ ಪಾಸ್‍ಫೋರ್ಟ್, ಪಾನ್ ಕಾರ್ಡ್, ಡ್ರೈವಿಂಗ್ ಲೇಸನ್ಸ್, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 08194-1950ಕ್ಕೆ ಸಂಪರ್ಕಿಸಬಹುದು.

    ಮತಗಟ್ಟೆ ಮಟ್ಟದ ಏಜೆಂಟರನ್ನು ರಾಜಕೀಯ ಪಕ್ಷದವರು ನೇಮಕ ಮಾಡಿಕೊಳ್ಳಬೇಕು. ಏಜೆಂಟರು ತಮ್ಮ ವ್ಯಾಪ್ತಿಯ ಮತದಾರರ ಪಟ್ಟಿಗೆ ಅರ್ಹ ಮತದಾರರ ಹೆಸರು ಸೇರಿಸುವ, ಬಿಡುವ ಅಥವಾ ತಿದ್ದುಪಡಿ ಮಾಡಲು ಬಿಎಲ್‍ಒಗಳಿಗೆ ಸಹಾಯ ಮಾಡಬೇಕು.
ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ನೋಂದಾಯಿಸುವುದು ಪ್ರತಿಯೊಬ್ಬ ನಾಗರಿಕರ ಹಕ್ಕು. ಈ ಸದಾವಕಾಶವನ್ನು ಬಳಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

    ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ: ಒಟ್ಟು 20265 ಮತದಾರರು ಇದ್ದಾರೆ. ತಾಲ್ಲೂಕುವಾರು ವಿವರ ಇಂತಿದೆ. ಮೊಳಕಾಲ್ಮುರು-1423, ಚಳ್ಳಕೆರೆ-4224, ಚಿತ್ರದುರ್ಗ-6078, ಹಿರಿಯೂರು-4266, ಹೊಸದುರ್ಗ-2311 ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ 1963 ಮತದಾರರಿದ್ದಾರೆ.

     2019 ರ ನವೆಂಬರ್ 1ನ್ನು ಅರ್ಹತಾ ದಿನಾಂಕದಿಂದ ಮೂರು ವರ್ಷಗಳ ಹಿಂದೆ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬಹುದು. ನಮೂನೆ-18 ರಲ್ಲಿ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ವೆಬ್‍ಸೈಟ್‍ನಲ್ಲಿ ಪಡೆಯಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap