ಚುನಾವಣಾ ಅಕ್ರಮ :66.81 ಕೋಟಿ ರೂ. ವಶ

ಬೆಂಗಳೂರು

       ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯನಿರತವಾಗಿರುವ ಫ್ಲೈಯಿಂಗ್, ಸ್ಟಾಟಿಕ್‍ ಹಾಗೂ ಇತರ ಕಾವಲು ಪಡೆಗಳು ಇಲ್ಲಿಯವರೆಗೆ ಒಟ್ಟು 66.81 ಕೋಟಿ ನಗದನ್ನು ವಶಪಡಿಸಿಕೊಂಡಿದೆ.

        ಫ್ಲೈಯಿಂಗ್, ಸ್ಟಾಟಿಕ್‍ ಸೇರಿ ಇತರ ಪಡೆಗಳು 14.90 ಕೋಟಿ ರೂ. ಹಾಗೂ 61.25 ಕೋಟಿ ರೂ. ಮೌಲ್ಯದ 17,554 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದೆ.

        6.42 ಕೋಟಿ ರೂ. ಮೌಲ್ಯದ 135.5 ಕೆಜಿ ಮಾದಕ ದ್ರವ್ಯಗಳು, 2.17 ಕೋಟಿ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 1,653 ಎಫ್‍ಐಆರ್ ದಾಖಲಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಇಲ್ಲಿಯವರೆಗೆ 12.40 ಕೋಟಿ ರೂ. ಹಾಗೂ 1.47 ಕೋಟಿ ರೂ.ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿದೆ.

         ಅಬಕಾರಿ ಇಲಾಖೆ ಇಲ್ಲಿಯವರೆಗೆ 35.17 ಕೋಟಿ ರೂ. ಮೌಲ್ಯದ 8.62 ಲಕ್ಷ ಲೀಟರ್ ಮದ್ಯ, 4.40 ಲಕ್ಷ ರೂ ಮೌಲ್ಯದ 13 ಕೆಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡು 1776 ಗಂಭೀರ ಪ್ರಕರಣಗಳನ್ನು ದಾಖಲಿಸಿಕೊಂಡಿದೆ.
 
         ಚುನಾವಣಾ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಒಟ್ಟು 95421 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 8 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 10 ಶಸ್ತ್ರಾಸ್ತ್ರಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಸಿಆರ್ ಪಿಸಿ ಕಾಯ್ದೆಯಡಿ 44454 ಪ್ರಕರಣಗಳನ್ನು ದಾಖಲಿಸಲಾಗಿದೆ. 38833 ಜಾಮೀನು ರಹಿತ ವಾರಂಟ್ ಗಳನ್ನು ಜಾರಿಗೊಳಿಸಲಾಗಿದೆ ಎಂದು ಚುನಾವಣಾ ಆಯೋಗದ ವರದಿ ತಿಳಿಸಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap