ಹುಳಿಯಾರು:
ಯುವಕರು ಪಕ್ಷದ ಹಿಂಭಾಲಕರಾಗ ಬಾರದು-
ರಾಜಕೀಯಕ್ಕೆ ಯುವ ಜನತೆ ಪ್ರವೇಶಿಸಬೇಕು. ಆದರೆ ಏನೂ ಅರಿಯದೆ ರಾಜಕೀಯ ಪ್ರವೇಶ ಮಾಡಬಾರದು. ಏಕೆಂದರೆ ಯುವಜನತೆಗೆ ಇನ್ನೂ ರಾಜಕೀಯದ ಸಾಮಾನ್ಯ ಅರಿವು ಇರುವುದಿಲ್ಲ. ಯಾವ ಪಕ್ಷ ಸುಭದ್ರ ಸರ್ಕಾರ ಕೊಡುತ್ತದೆ. ಯಾವ ನಾಯಕ ಜನಪರ ನಿಲುವು ಪಡೆದಿದ್ದಾನೆ ಎಂಬುದನ್ನೇ ತಿಳಿಯದೆ ಪಕ್ಷದ, ರಾಜಕೀಯ ನಾಯಕರ ಹಿಂಭಾಲಕರಾಗಬಾರದು ಎಂಬುದು ನನ್ನ ವಾದ.
ಯುವ ಜನತೆ ರಾಜಕೀಯ ಪ್ರವೇಶ ಮಾಡುವುದಾದರೆ ಮೊದಲು ಆಸಕ್ತಿಯಿಂದ ರಾಜಕೀಯ ಘಟನಾವಳಿಗಳನ್ನು ವೀಕ್ಷಿಸಬೇಕು. ಸಂವಿಧಾನದ ಆಶಯಗಳ ಬಗ್ಗೆ ತಿಳಿದುಕೊಳ್ಳಬೇಕು. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿತು ಸಮಸ್ಯೆಗೆ ರಾಜಕೀಯದಲ್ಲಿ ಸಿಗುವ ಪರಿಹಾರದ ಬಗ್ಗೆ ತಿಳಿದುಕೊಳ್ಳಬೇಕು. ಆಗ ರಾಜಕೀಯ ಪ್ರವೇಶ ಮಾಡಬೇಕು. ಅಲ್ಲಿಯವರೆವಿಗೂ ತಪ್ಪದೆ ಮತದಾನ ಮಾಡಬೇಕು.
ಯಾರು ಒಳ್ಳೆರೋ, ಯಾರು ಕೆಟ್ಟೋರೋ
ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಬೇಕಾದರೆ ಕಡ್ಡಾಯವಾಗಿ ಓಟ್ ಹಾಕಬೇಕು ಅಂತಾರೆ. ಇರುವ ಅಭ್ಯರ್ಥಿಗಳಲ್ಲಿ ಒಳ್ಳೆಯ ಅಭ್ಯರ್ಥಿಗೆ ಮತ ಹಾಕಿ ಅಂತಾರೆ. ಆದರೆ ನಾವು ಇನ್ನೂ ಹೊಸ ಮತದಾರರಾಗಿದ್ದು ಅಭ್ಯರ್ಥಿಗಳಲ್ಲಿ ಒಳ್ಳೆಯವರಾರು, ಕೆಟ್ಟವರಾರು ಎಂಬುದೇ ತಿಳಿಯುವುದಿಲ್ಲ. ಎಲ್ಲರೂ ತಮ್ಮನ್ನು ತಮ್ಮ ಪಕ್ಷವನ್ನು ಹೊಗಳುಕೊಳ್ಳುವವರು, ವಿರೋಧ ಪಕ್ಷ ಮತ್ತು ಅಭ್ಯರ್ಥಿಯನ್ನು ತೆಗಳುವವರೇ ಆಗಿದ್ದಾರೆ.
ಆದರೂ ಮತದಾನ ಮಾಡೋದು ನಮಗೆ ಒಂದು ತರ ಖುಷಿ ಕೊಡುತ್ತದೆ. ಅದರಲ್ಲೂ ನಾವು ಹಾಕಿದ ಅಭ್ಯರ್ಥಿ ಗೆದ್ದರಂತೂ ಖುಷಿ ಹಿಮ್ಮಡಿಯಾಗುತ್ತದೆ. ಹಾಗಾಗಿ ನಮ್ಮ ಖುಷಿಗಾಗಿ ನಾನು ಮತ ಹಾಕುತ್ತಿದ್ದೇನೆ ವಿನಹ. ಇವರು ಒಳ್ಳೆಯವರು ಇವರಿಂದ ನಮ್ಮೂರು ಅಭಿವೃದ್ಧಿ ಕಾಣುತ್ತದೆ ಎನ್ನುವ ಆಶಾಭಾವನೆಯಿಂದ ಮತ ಹಾಕುವುದಿಲ್ಲ







