ಚುಟುಕು ಸಾಹಿತ್ಯ ಜನಪ್ರಿಯವಾಗಲಿ: ಮುರಳಿಧರ ಹಾಲಪ್ಪ

ತುಮಕೂರು

         ಚುಟುಕು ಸಾಹಿತ್ಯ ಓದುಗರಿಗೆ ಸುಲಭವಾಗಿ ರುಚಿಸುತ್ತದೆ, ಚಿಕ್ಕದಾಗಿ ಪರಿಣಾಮಕಾರಿಯಾಗಿ ಹೇಳುವ ಚುಟುಕುಗಳು ಬೇಗ ಜನಪ್ರಿಯವಾಗುತ್ತವೆ, ಇಂತಹ ಸಾಹಿತ್ಯ ಹೆಚ್ಚು ಮೂಡಿಬರಲಿ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳಿಧರ ಹಾಲಪ್ಪ ಹೇಳಿದರು.
ನಗರದ ಕನ್ನಡಭವನದಲ್ಲಿ ನಡೆದ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಂಭ್ರಮಕ್ಕೆ ಚಾಲನೆ ಹಾಗೂ ಚುಟುಕು ಕವಿಗೋಷ್ಠಿಯ ಸಮಾರಂಭದಲ್ಲಿ ಮಾತನಾಡಿದರು.

        ಸರಳವಾಗಿ ಬದುಕಿನ ಅರ್ಥವನ್ನು ಹಾಸ್ಯವಾಗಿ ಹೇಳುವುದಕ್ಕೆ ಹಾಗೆ ಗಂಭೀರವಾದ ವಿಚಾರಗಳನ್ನು ಹೇಳಲು ಚುಟುಕು ಸಾಹಿತ್ಯ ಪ್ರಸಿದ್ಧಿಯನ್ನು ಪಡೆದಿದೆ. ಚುಟುಕು ಸಾಹಿತ್ಯ ಬಗ್ಗೆ ಅರಿತುಕೊಳ್ಳಲು ಮಕ್ಕಳಿಗೆ ಅವಶ್ಯಕವಿರುವ 2 ಕೈಪಿಡಿಗಳನ್ನು ಹಾಲಪ್ಪ ಪ್ರತಿಷ್ಠಾನದಿಂದ ನೀಡಲು ಯೋಜಿಸಿದ್ದು, ಇದಕ್ಕೆ ಚುಟುಕು ಸಾಹಿತ್ಯ ಪರಿಷತ್ ಸಹಕಾರ ನೀಡಬೇಕೆಂದು ಕೋರಿದರು.

        ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು ಚುಟುಕು ಸಾಹಿತ್ಯ ಪರಿಷತ್ತ್ ಕೇಂದ್ರ ಸಮಿತಿ ಅಧ್ಯಕ್ಷ ತೋಂಟದಾರ್ಯ ಅವರು, ಚುಟುಕು ಸಾಹಿತ್ಯವು ಅತ್ಯಂತ ಪ್ರಭಾವಿ ಮಾಧ್ಯಮವಾಗಿದ್ದು, ಸಮಾಜದಲ್ಲಿನ ಸಮಸ್ಯೆಗಳು ಅಂಕು ಡೊಂಕುಗಳನ್ನು ತಿದ್ದಲು ಚುಟುಕು ಸಾಹಿತ್ಯ ಅನುಕೂಲವಾಗಿದ್ದು, ಅದನ್ನು ಉಳಿಸಿ ಬೆಳೆಸುವಂತಹ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.

       ಮೈಸೂರು ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಪ್ರಧಾನ ಸಂಚಾಲಕ ಡಾ.ಎಂ.ಜಿ.ಆರ್.ಅರಸ್ ಮಾತನಾಡಿ, ಮನಸ್ಸಿನ ಸಂಕಲ್ಪ ದೃಢವಾಗಿದ್ದರೆ ಸಾಹಿತ್ಯ ಎಂಬುದು ಹೊರಬರಲು ಸಾಧ್ಯ. ಹಾಗೇ ಮನಸ್ಸಿನಲ್ಲಿರುವ ಭಾವನೆಗಳಿಗೆ ಜೀವ ತುಂಬುವ ಶಕ್ತಿ ಚುಟುಕು ಸಾಹಿತ್ಯಕ್ಕಿದೆ ಎಂದು ಹೇಳಿದರು.

        ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ಆಧುನಿಕ ಕಾಲದಲ್ಲಿ ಎಲ್ಲ ವ್ಯವಸ್ಥೆಯೂ ಸಹ ಚುಟುಕು ವ್ಯವಹಾರವಾಗಿದೆ, ಚುಟುಕು ಸಾಹಿತ್ಯ ಅತ್ಯಂತ ಮಹತ್ವದಾಗಿದೆ ಎಂದು ಹೇಳಿದರು.ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರಾಮಣ್ಣ ಮಾತನಾಡಿ, ಚುಟುಕು ಸಾಹಿತಿಗಳ ಪ್ರತಿಭೆಯನ್ನು ಹೊರತರಲು ಒಂದು ಉತ್ತಮ ವೇದಿಕೆಯಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

      ಕೌಸ್ತುಕ ಕನ್ನಡ ಮಾಸಪತ್ರಿಕೆಯ ಸಂಪಾದಕಿ ರತ್ನ ಹಾಲಪ್ಪಗೌಡ ಅವರು ‘ಮಮದಾಪೂರ’ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಎಸ್.ಆರ್.ದೇವಪ್ರಕಾಶ್, ಹಿರಿಯ ಸಾಹಿತಿ ಮಲನ ಮೂರ್ತಿ ಇದ್ದರು. ಜಿ ಕೆ ಕುಲಕರ್ಣಿ, ಪದ್ಮಾ ಕೃಷ್ಣಮೂರ್ತಿ, ಗುಬ್ಬಚ್ಚಿ ಸತೀಶ್, ಪಮ್ಮಿ, ಸೌಭಾಗ್ಯ ಲಕ್ಷ್ಮಿ, ಸುಮಾಬೆಳಗೆರೆ, ನಾಗರತ್ನಚಂದ್ರಪ್ಪ, ಡಿ.ನಾರಾಯಣ ಸೀಗೆಹಳ್ಳಿ, ಮಿಮಿಕ್ರಿ ಈಶ್ವರಯ್ಯ, ನಾಗಾರ್ಜುನ ಸಾಗ್ಗೆರೆ, ರವಿಕುಮಾರ್, ತಾರಾನಾಥ ಬೋಳಾರ್, ಬಿ ಕೆ ಮಂಜುಳಾ ಸೇರಿದಂತೆ ಇತರರು ಚುಟುಕು ಕವನಗಳನ್ನು ವಾಚಿಸಿದರು, ಪತ್ರಕರ್ತ ಮಣ್ಣೆ ರಾಜು ಕಾರ್ಯಕ್ರಮ ನಿರೂಪಿಸಿದರು.ಉದ್ಘಾಟನಾ ಸಮಾರಂಭದಲ್ಲಿ ಕೆ ಪಿ ಲಕ್ಷ್ಮಿಕಾಂತರಾಜೇ ಅರಸ್ ಸ್ವಾಗತಿಸಿ, ಪಿ ಉಮಾದೇವಿ ವಂದಿಸಿದರು. ಮಿಮಿಕ್ರಿ ಈಶ್ವರಯ್ಯ ಕಾರ್ಯಕ್ರಮ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap