ಬೆಂಗಳೂರು
ಶಾಲಾ-ಕಾಲೇಜು ಬಳಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಲ್‍ಬೋರೋ ಸಿಗರೇಟ್‍ನ್ನು ವಿದ್ಯಾರ್ಥಿಗಳಿಗೆ ಒಂದು ಪ್ಯಾಕ್ ಕೊಂಡರೆ 6 ಸಿಗರೇಟ್ ಉಚಿತವಾಗಿ ನೀಡುತ್ತಿದ್ದ ಅಂಗಡಿಗಳ ಮೇಲೆ ನಗರ ಪೊಲೀಸರು ದಾಳಿ ನಡೆಸಿ ಸಿಗರೇಟ್‍ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ
ಕಳೆದ ಒಂದು ವಾರದ ಹಿಂದೆ ಏಕಕಾಲದಲ್ಲಿ ಸೆಂಟ್ರಲ್, ದಕ್ಷಿಣ ಮತ್ತು ಆಗ್ನೇಯ ವಿಭಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂ. ಮೌಲ್ಯದ ಸಿಗರೇಟುಗಳನ್ನು ವಶಪಡಿಸಿಕೊಂಡು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಿಚಾರಣೆ ವೇಳೆ ಮಾರಾಟಗಾರರಿಗೆ ಹೆಚ್ಚು ಕಮೀಷನ್ ಕೊಟ್ಟು ಮಾಲ್‍ಬೋರೋ ಸಿಗರೇಟ್ ಮಾರಾಟ ಮಾಡಿಸುತ್ತಿರುವುದು ಬಯಲಾಗಿದೆ. ಅಷ್ಟೇ ಅಲ್ಲದೇ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಈ ಸಿಗರೇಟ್ ಸ್ಯಾಂಪಲ್ ಕೊಡುತ್ತಿದ್ದಾರೆ. ಒಂದು ಪ್ಯಾಕ್ ಸಿಗರೇಟಿಗೆ 6 ಸಿಗರೇಟು ಫ್ರೀ ಕೊಡುತ್ತಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಸಿಗರೇಟು ಕಂಪನಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ವಾಣಿಜ್ಯ ತೆರಿಗೆ ಇಲಾಖೆಗೂ ಮಾಹಿತಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ