ನಾಗರಿಕ ಬಂದೂಕು ತರಬೇತಿ ಶಿಬಿರ ಅಂತ್ಯ: ತಿಪಟೂರಿನ ಶಮಂತ್‌ಗೆ ಪ್ರಥಮ ಸ್ಥಾನ

ತುಮಕೂರು

     ತುಮಕೂರು ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿರುವ ತರಬೇತಿ ಶಾಲೆಯಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಏರ್ಪಟ್ಟಿದ್ದ 55 ನೇ ‘‘ನಾಗರಿಕ ಬಂದೂಕು ತರಬೇತಿ ಶಿಬಿರ’’ದಲ್ಲಿ ಪ್ರಥಮ ಪ್ರಶಸ್ತಿಯನ್ನು ತಿಪಟೂರಿನ ಶಮಂತ್ ಕುಮಾರ್ ಪಡೆದಿದ್ದಾರೆ.

       ಅ.13 ರಂದು ನಡೆದ ತರಬೇತಿ ಶಿಬಿರದ ಮುಕ್ತಾಯ ಸಮಾರಂ‘ದಲ್ಲಿ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ದಿವ್ಯಾ ವಿ.ಗೋಪಿನಾಥ್ ಅವರು ಶಮಂತ್‌ಕುಮಾರ್‌ರವರಿಗೆ ಬಹುಮಾನ ಹಾಗೂ ಪ್ರಶಸ್ತಿಪತ್ರ ವಿತರಿಸಿದರು.

        ಈ ಸಂದಭರ್ದಲ್ಲಿ ಮಾತನಾಡಿದ ಎಸ್ಪಿ ದಿವ್ಯಾ ವಿ.ಗೋಪಿನಾಥ್ ಅವರು, ನಾಗರಿಕರು ಬಂದೂಕನ್ನು ಯಾವ ಯಾವ ಸಮಯದಲ್ಲಿ ಹೇಗೆ ಉಪಯೋಗಿಸಬೇಕು, ಬಂದೂಕು ಬಳಕೆ ಕಲಿತವರು ಇಲಾಖೆಯ ಜೊತೆ ಹೇಗಿರಬೇಕು ಹಾಗೂ ಸಮಾಜಕ್ಕೆ ನಿಮ್ಮ ಕೂಡುಗೆ ಏನು ಎಂಬ ಬಗ್ಗೆ ವಿವರಿಸಿದರು.

        ಈ ಬಂದೂಕು ತರಬೇತಿ ಶಿಬಿರದಲ್ಲಿ ಜಿಲ್ಲೆಯಾದ್ಯಂತದಿಂದ 90 ಜನ ನಾಗರಿಕರು ಭಾಗವಹಿಸಿದ್ದರು. ಒಟ್ಟು 13 ದಿನಗಳ ಅವಧಿಯ ಶಿಬಿದರಲ್ಲಿ ಇವರುಗಳಿಗೆ ಆಯುಧಗಳನ್ನು ಹೇಗೆ ಉಪಯೋಗಿಸಬೇಕು, ಗುರಿ ಅಭ್ಯಾಸ, ಆಯುಧಗಳ ಸುರಕ್ಷತೆ ಮತ್ತು ಸ್ವಚ್ಚತೆಗಳ ಬಗ್ಗೆ ಅರಿವು ಮೂಡಿಸಲಾಯಿತು. ಈ ಸಂದ‘ರ್ದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಡಿವೈಎಸ್ಪಿ ಮಂಜುನಾಥ್, ರಿಸರ್ವ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಶಾಂತ್ ಹಾಗೂ ಶಸ್ತ್ರಗಾರರಾದ ನಾಗರಾಜ್ ಮತ್ತು ಕುಮಾರ್ ರವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link