ಬೆಂಗಳೂರು
ಪೌರತ್ವ ತಿದ್ದುಪಡಿ ಕಾಯಿದೆ ಯಾರಿಗೂ ಅವಶ್ಯಕತೆಯೇ ಇರಲಿಲ್ಲ ಎಂದು ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಸ್ಪಷ್ಟಪಡಿಸಿದ್ದಾರೆ.ಪುರಭವನ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಆರ್ಥಿಕ ವ್ಯವಸ್ಥೆ ಸರಿಪಡಿಸುವ ಬಗ್ಗೆ ಕೇಂದ್ರಮೊದಲು ಗಮನ ಹರಿಸಲಿ.ನಮಗೆ ಅನ್ನ ಸಿಗುತ್ತಿಲ್ಲ.ಈಗ ಬೇರೆ ಕಡೆಯಿಂದ ಜನರನ್ನು ಕರೆದುಕೊಂಡು ಬಂದು ಪೌರತ್ವ ಕೊಡುತ್ತೇವೆ ಎನ್ನುತ್ತಿದ್ದಾರೆ.ಮೊದಲು ನಮಗೆ ಅನ್ನ ಕೊಡಿ ಎಂದರು.
ಪಾಕಿಸ್ತಾನ, ಬಾಂಗ್ಲಾದೇಶದ ಹಿಂದೂಗಳಿಗೆ ಪೌರತ್ವ ಕೊಡುವುದಕ್ಕೆ ತಮ್ಮ ವಿರೋಧ ಇಲ್ಲ.ನನಗೆ ಎಷ್ಟು ಜನ ಮಕ್ಕಳ ಇದ್ದಾರೆ ಎನ್ನುವುದಾಗಲಿ ಅವರೆಲ್ಲ ಯಾವ ತರಗತಿಯಲ್ಲಿ ಓದುತ್ತಿದ್ದಾರೆ ಎಂದು ಗೊತ್ತಿಲ್ಲ.ಈಗ ನೀ ಎಲ್ಲಿ ಹುಟ್ಟಿದ್ದೆ ನಿಮ್ಮ ಅಪ್ಪ ಯಾರು? ನಿಮ್ಮ ಅಮ್ಮ ಯಾರು?ಎಂದು ದಾಖಲೆ ಕೇಳಿದರೆ ದಾಖಲೆ ಕೊಡಲು ಸಾಧ್ಯವೇ? ಮಹಿಷಿ ನಮ್ಮ ಮನೆ ದೇವರು.ಹಸು ಹೊರಗಡೆ ಬಂದಿದ್ದು.
ದ್ರಾವಿಡರು ಈ ದೇಶದ ಮೂಲ ನಿವಾಸಿಗಳು.ಕರುಣಾನಿಧಿ ಅವರ ತಂದೆ ಮೂಲ ದ್ರಾವಿಡರು.ನಿಜವಾಗಿಯೂ ಈ ದೇಶದ ವಲಸಿಗರು ಆರ್ಯರು.ದ್ರಾವಿಡರು ಕನ್ನಡ, ತಮಿಳಿ, ತೆಲುಗು ಮಲಾಯಳಿ ಭಾಷಿಕರು ನಿಜವಾದ ದ್ರಾವಿಡರು.ಹಾಗಾದರೆ ಇವರೆಲ್ಲ ವಲಸಿಗರು ಹೊರಗಡೆ ಹೋಗುತ್ತಾರೆಯೇ? ಎಂದು ಎಂದಿನಂತೆ ಒಗಟೊಗಟಾಗಿ ಮಾರ್ಮಿಕವಾಗಿ ತಮ್ಮ ಶೈಲಿಯಲ್ಲಿ ಮಾತನಾಡಿದರು.
ಪ್ರಧಾನಿ ಮೋದಿ ಕೈಯಲ್ಲಿ ಏನೆಲ್ಲಾ ಮಾಡಿಸಬೇಕು ಅದನ್ನ ಅಮಿತ್ ಷಾ ಮಾಡಿಸುತ್ತಿದ್ದಾರೆ. ಕರ್ನಾಟಕದಲ್ಲಿ ಯಾರೂ ಉದ್ವೇಗಕ್ಕೊಳಗಾಗುವುದು ಬೇಡ.ಇಲ್ಲಿ ಹಿಂದೂ- ಮುಸ್ಲಿಂ ಧರ್ಮಗಳ ನಡುವೆ ಕಿತ್ತಾಟ ಆಗುವುದಿಲ್ಲ.ದೇಶವನ್ನು ಬಿಗಿಯಾಗಿ ಕಟ್ಟುವ ಕೆಲಸ ನಾವೆಲ್ಲ ಮಾಡೋಣ ಎಂದು ಕರೆ ನೀಡಿದರು.