ನಗರದ ಕೊಳಚೆ ನೀರಿನಿಂದ ಕೊಳಕಾಗುತ್ತಿದೆ ಭೂಮಿ ಮತ್ತು ಜಲ

ತಿಪಟೂರು :
    ನಗರದ ಒಳಚರಂಡಿಯ ನೀರನ್ನು ಬೇರಬೇರೆ ಪ್ರದೇಶಗಳಿಗೆ ಹರಿಸುವುದು ಸಾಮಾನ್ಯ, ಆದರೆ ಅದೇ ಕೊಳಚೆ ನೀರಿನಿಂದ ಗ್ರಾಮಗಳಲ್ಲಿ ಕೊಳಚೆ ನೀರು ಆವರಿಸಿ ಭೂಮಿ ಕೆಟ್ಟು ಹೋಗುವುದಲ್ಲದೇ, ಈ ಕೊಳಚೆ ನೀರಿನಿಂದ ಹಲವಾರು ರೋಗಗಳಿಗೆ ತ್ತುತ್ತಾಗುತ್ತಿದ್ದಾರೆ.
    ಒಳಚರಂಡಿ ನೀರನ್ನು ಸೂಕ್ತ ರೀತಿಯಲ್ಲಿ ಶುದ್ಧೀಕರಿಸದೇ ಇರುವುದರಿಂದ ಜನರಿಗೆ ಉಪಯೋಗವಾಬೇಕಾದ ನೀರು ಇಂದು ಶಾಪಗಿಗ ಪರಿಣಮಿಸಿದ ಪರಿಣಾಮ ರೈತರು ಬೆಳೆದಿರುವ ಹಲವಾರು ಬೆಳೆಗಳನ್ನು ಕಳೆದುಕೊಳ್ಳುವಂತಹ ಭೀತಿಯಲ್ಲಿದ್ದಾರೆ.ತಾಲ್ಲೂಕಿನ ಕಲ್ಲೇಗೌಡನಪಾಳ್ಯದ ಬಳಿ ನಿರ್ಮಿಸಿರುವ ನಗರಸಭೆಯ ತ್ಯಾಜ್ಯ ಶುದ್ಧೀಕರಣ ಘಟಕ (ಎಸ್.ಬಿ.ಆರ್. ಮಾದರಿ)ವನ್ನು ಸೆಬ್‍ಕಾಸೆಟ್ಟೆಲ್ ಪ್ರೈವೆಟ್ ಲಿಮಿಟೆಡ್ ಕಂಪನಿಯು ಇದನ್ನು ನಿರ್ವಹಣೆ ಮಾಡುತ್ತಿದ್ದು, ದಿನನಿತ್ಯವೂ 6 ಸಾವಿರ ದಶಲಕ್ಷ ಲೀಟರ್ ನೀರು ಒಳಚರಂಡಿ ವ್ಯವಸ್ಥೆಯಿಂದ ಉತ್ಪಾದನೆಯಾಗುತ್ತಿದ್ದು ಅಷ್ಟೇ ಪ್ರಮಾಣದ ನೀರನ್ನು ಸಹ ಶುದ್ಧೀಕರಿಸಿ ಕಳೆದ 2-3 ವರ್ಷಗಳಿಂದಲೂ ಹೂವಿನಕಟ್ಟೆ ಎಂಬ ಕಟ್ಟೆಗೆ ಬಿಡಲಾಗುತ್ತಿದೆ.
 
    ಅಲ್ಲಿಗೆ ಬರುವಂತಹ ನೀರನ್ನು ರೈತರು ತಮ್ಮ ನೂರಾರು ಎಕರೆ ಪ್ರದೇಶದ ಭೂಮಿಯಲ್ಲಿ ಬೆಳೆಯುತ್ತಿರುವ ತೆಂಗು-ಅಡಿಕೆ, ಬಾಳೆ ಸೇರಿದಂತೆ ಮತ್ತಿತರರ ಬೆಳೆಗಳಿಗೆ ಪಂಪ್‍ಸೆಟ್‍ಗಳ ಮುಖಾಂತರ ನೀರನ್ನು ಬಳಸಿಕೊಳ್ಳುತ್ತಿದ್ದಾರೆ. ಪ್ರಾರಂಭದ ದಿನಗಳಲ್ಲಿ ಶುದ್ಧೀಕರಿಸಿದ ನೀರಿಗಾಗಿ ಹಲವು ವಾಕ್ಸಮರಗಳು ನಡೆದರೂ, ನಂತರದ ದಿನಗಳಲ್ಲಿ ಹೆಚ್ಚಿದ ನೀರಿನ ಪ್ರಮಾಣದಿಂದ ಸಮರ್ಪಕವಾಗಿ ಎಲ್ಲ ರೈತರಿಗೂ ಶುದ್ಧೀಕರಿಸಿದ ನೀರು ದೊರೆತ ಹಿನ್ನೆಲೆಯಲ್ಲಿ ಶಾಂತರಾಗಿದ್ದರು. ಈ ನೀರಿನಿಂದ ಸುತ್ತಮುತ್ತಲಿನ ರೈತರ ತಮ್ಮ ಜಮೀನಿನಲ್ಲಿ ಫಲವತ್ತಾದಂತಹ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಕಳೆದ 20-25 ದಿನಗಳಿಂದಲೂ ಇಲ್ಲಿನ ಶುದ್ಧೀಕರಣ ಘಟಕದಲ್ಲಿ ಕಲುಶಿತ ನೀರು ಸಮರ್ಪಕವಾಗಿ ಶುದ್ಧಿಕರಣವಾಗದೇ ವಾಸನೆ, ನೊರೆಯಿಂದ ಕೂಡಿದ ಬಣ್ಣ ಬಣ್ಣದ ನೀರು ಆಚೆ ಬರುತ್ತಿದೆ. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶವೆಲ್ಲವೂ ಕಲುಷಿತಮಯವಾಗಿ, ಕೆಟ್ಟ ವಾಸನೆಯಿಂದ ಕೂಡಿದ್ದು, ಸಾರ್ವಜನಿಕರು ಓಡಾಟ ಮಾಡುವುದೇ ಕಷ್ಟ ಸಾಧ್ಯವಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 
     ತ್ಯಾಜ್ಯ ಶುದ್ಧೀಕರಣ ಘಟಕದಲ್ಲಿ ಒಟ್ಟು 6 ಸಾವಿರ ದಶಲಕ್ಷ ನೀರನ್ನು ಶುದ್ಧೀಕರಿಸುವ ಎರಡು ಟ್ಯಾಂಕ್‍ಗಳಿದ್ದು ಅಲ್ಲಿ 3 ಗಂಟೆಗಳ ಕಾಲ ವಿವಿಧ ಬಗೆಯ ಶುದ್ಧೀಕರಣ, ತಿಳಿಗೊಳಿಸುವಿಕೆ, ಕ್ಲೋರಿನೇಶನ್ ಮಾಡಿ ಹೊರಬಿಡಲಾಗುತ್ತಿದೆ. ಆದರೆ ಕೆಲ ದಿನಗಳಿಂದ ಸರಿಯಾಗಿ ಶುದ್ಧೀಕರಣವಾಗದೇ ನೀರು ಆಚೆ ಬರುತ್ತಿದ್ದು, ನೊರೆ ಮಾದರಿಯಲ್ಲಿ ಶೇಖರಣೆಗೊಂಡು ಕಲುಶಿತವಾದಂ ವಾಸನೆಯನ್ನುಂಟು ಮಾಡಿದ್ದು, ವಿಭಿನ್ನ ಬಣ್ಣಗಳಾಗಿ ಶೇಖರಣೆಗೊಳ್ಳುತ್ತಿದೆ.
ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನ :
     ಹತ್ತಿರದಲ್ಲಿಯೇ ಇರುವಂತಹ ಕಲ್ಲೇಗೌಡನ ಪಾಳ್ಯದ ಜನರಿಗೆ ರಾಸಾಯನಿಕ ಮಿಶ್ರಿತ ಕಲುಶಿತ ನೀರು ಕಣ್ಣಿಗೆ ಕಾಣುವಂತೆ ಹೊರಬರುತ್ತಿದೆ. ಇದರ ಜೊತೆಗೆ ರಾಸಾಯನಿಕದಿಂದ ಕೂಡಿದ ಬಿಳಿಯ ಬಣ್ಣದ ನೊರೆಯು ಶೇಖರಣೆಗೊಂಡಿದ್ದು, ಗಾಳಿ ಬೀಸಿದರೆ ಗಾಳಿಯಲ್ಲೂ ಸೇರಿ ತೇಲುತ್ತಾ ಶುದ್ಧವಾದಂತಹ ಗಾಳಿಯು ಸಿಗದೆ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದೆ. ಈ ನೊರೆಯು ಮನುಷ್ಯ ಅಥವಾ ಪ್ರಾಣಿ, ಪಕ್ಷಿಗಳ ಮೈ ಮೇಲೆ ಬಿದ್ದರೆ ಹಲವಾರು ರೀತಿಯ ಚರ್ಮದ ಕಾಯಿಲೆ ಸೇರಿದಂತೆ ರೋಗಗಳು ಹರಡುವ ಕೀಟಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಕ್ಕೆ ಪರಿವರ್ತನೆಯಾಗುವ ಹಂತದಲ್ಲಿದ್ದು, ಮುಂದಿನ ಸ್ಥಿತಿ ಊಹಿಸಲು ಆ ಸಾಧ್ಯವಾಗಿದೆ.
ಕೆಟ್ಟು ನಿಲ್ಲುವ ಮೋಟರ್ ಪಂಪ್‍ಸೆಟ್‍ಗಳು :
     ಹೂವಿನಕಟ್ಟೆಯಿಂದ ತಮ್ಮ ಜಮೀನುಗಳಿಗೆ ನೀರನ್ನು ಪಂಟ್‍ಸೆಟ್ ಮುಖಾಂತರ ಸರಬರಾಜು ಮಾಡುತ್ತಿದ್ದು ಎರಡು ದಿನಗಳಿಗೊಮ್ಮೆ ರಾಸಾಯನಿಕ ಮಿಶ್ರಿತ ಕಲುಶಿತ ನೀರನ್ನು ಸರಬರಾಜು ಮಾಡುತ್ತಿರುವುದರಿಂದ ಮೋಟರ್ ಪಂಪ್‍ಸೆಟ್‍ಗಳು ಕೆಟ್ಟು ನಿಲ್ಲುತ್ತಿವೆ. ರೈತರು ತಮ್ಮ ಪಂಪ್ ಸೆಟ್‍ಗಳನ್ನು ರಿಪೇರಿ ಮಾಡಿಸುವಲ್ಲಿ ಹೆಚ್ಚು ಸಮಯ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ.
ಒಣಗುತ್ತಿರುವ ಕಲ್ಪವೃಕ್ಷ :
     ಕಲ್ಪತರು ನಾಡೆಂದೆ ಪ್ರಸಿದ್ಧವಾಗಿರುವ ತಿಪಟೂರಿನ ಈ ಭಾಗದಲ್ಲಿ ರಾಸಾಯನಿಕ ಮಿಶ್ರಿತ ಕಲುಶಿತ ನೀರನ್ನು ಸರಬರಾಜು ಮಾಡುತ್ತಿರುವುದರಿಂದ ತೆಂಗಿನ ಮರಗಳು ಒಂದೊಂದಾಗಿ ಒಣಗುತ್ತಿದ್ದು, ರೈತರು ಹೆದರಿ ಈ ನೀರನ್ನು ಸರಬರಾಜು ಮಾಡಿಕೊಳ್ಳುವುದನ್ನೇ ಸ್ಥಗಿತಗೊಳಿಸಿದ್ದಾರೆ. ಕಲುಶಿತ ನೀರು ಭೂಮಿಯ ಫಲವತ್ತತೆಯನ್ನು ನಾಶ ಮಾಡುವುದರ ಜೊತೆಗೆ ಬೆಳೆಗಳಿಗೂ ಹಲವು ಬಗೆಯ ರೋಗಗಳು ಬರುವಂತಹ ಮುನ್ಸೂಚನೆಯು ಮೂಡುತ್ತಿದೆ. 
     ಇಷ್ಟೆಲ್ಲಾ ಘಟನೆಗಳು ನಡೆಯುತ್ತಿದ್ದರೂ ತಮ್ಮ ಸಮಸ್ಯೆಗಳನ್ನು ರೈತರು ಹೇಳಿಕೊಂಡರೆ ನೀರನ್ನು ಎಲ್ಲಿ ನಿಲ್ಲಿಸಿಯೇ ಬಿಡುತ್ತಾರೋ ಎಂಬ ಭೀತಿಯಿಂದ ಯಾವುದೇ ಮಾಹಿತಿಯನ್ನು ಹೊರ ಹಾಕದೇ ವಿಧಿ ಇಲ್ಲದೇ ಕಲುಷಿತ ನೀರನ್ನೇ ಸರಬರಾಜು ಮಾಡಿಕೊಳ್ಳುತ್ತಿರುವುದು ಆಸಹಾಯಕತೆಯನ್ನು ಸೂಚಿಸುತ್ತಿದೆ.
     ಸಮಸ್ಯೆಯು ತೀವ್ರ ರೂಪ ಪಡೆದು ರೋಗಗಳು ಹರಡುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಂಡು ಸರಿಪಡಿಸಿದರೆ ರೈತರು ಹಾಗೂ ಸಾರ್ವಜನಿಕರ ಬೆಳೆ ಮತ್ತು ಆರೋಗ್ಯ ಸುಧಾರಣೆಯಾಗಿ ಅನುಕೂಲವಾಗುತ್ತದೆ.
ನೊಂದ ಗ್ರಾಮಸ್ಥರು
    ಹಳೇಪಾಳ್ಯದ ನೀರು ಒಳಚರಂಡಿಗೆ ಬರಲು ಪ್ರಾರಂಭಿಸಿದ ದಿನದಿಂದ ಈ ಸಮಸ್ಯೆ ಉದ್ಬವವಾಗಿದ್ದು, ರಾಸಾಯನಿಕ ಮಿಶ್ರಣವನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ. ಎಷ್ಟೇ ಪ್ರಯತ್ನಿಸಿದರೂ ಶುದ್ಧೀಕರಣ ಸಾಧ್ಯವಾಗುತ್ತಿಲ್ಲ. ಈ ನೀರನ್ನು ಶುದ್ಧೀಕರಿಸಲು ಹಲವು ಪ್ರಯೋಗಗಳನ್ನು ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. 
ರಾಕೇಶ್, ಘಟಕದ ಮೇಲ್ವಿಚಾರಕ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap