ಉಪ ಚುನಾವಣೆ ಘೋಷಣೆ ಕುರಿತು ಚುನಾವಣಾ ಆಯೋಗ ಸ್ಪಷ್ಟನೆ

ಬೆಂಗಳೂರು

     ರಾಜ್ಯದ ಬಳ್ಳಾರಿ, ಶಿವಮೊಗ್ಗ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆ ಘೋಷಣೆ ಮಾಡಿರುವ ಕುರಿತು ಎದ್ದಿರುವ ಗೊಂದಲಗಳಿಗೆ ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಆಯೋಗ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 151ಎ ಅನ್ವಯವೇ ಚುನಾವಣೆ ನಡೆಸಲು ತಿರ್ಮಾನ ತೆಗೆದುಕೊಂಡಿದೆ. ಯಾವುದನ್ನೂ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಮೂಲಕ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ವರದಿ ಕುರಿತು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದ್ದು,ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದೆ.

     ಸಂಸತ್ ಹಾಗೂ ರಾಜ್ಯ ವಿಧಾನಸಭೆ ಸ್ಥಾನಗಳಿಗೆ ಸಂವಿಧಾನದ ಪರಿಚ್ಚೇದ 151ಎ ಪ್ರಕಾರವೇ, ಪ್ರತಿನಿಧಿಗಳ ರಾಜೀನಾಮೆ ಇಲ್ಲವೇ ಸಾವಿನಿಂದ ತೆರವಾದ ಸ್ಥಾನಕ್ಕೆ ಆರು ತಿಂಗಳ ಒಳಗೆ ಚುನಾವಣೆ ನಡೆಸಲೇಬೇಕು ಎಂಬ ನಿಯಮವಿದೆ. ಒಂದು ವರ್ಷದ ಒಳಗಾಗಿ ರಾಜಿನಾಮೆ ನೀಡಿದರೆ ಚುನಾವಣೆ ಅಗತ್ಯವಿಲ್ಲ. ಹಾಗಾಗಿ ಮೇ.18ಹಾಗೂ ಮೇ 21ರಂದು ಸಂಸದರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿದೆ.

       ಇನ್ನು ಆಂಧ್ರಪ್ರದೇಶದ 5ಸಂಸತ್ ಸದಸ್ಯ ಸ್ಥಾನಗಳು ಜೂನ್ 20ರಿಂದ ತೆರವಾಗಿವೆ. ಆಂಧ್ರ ಪ್ರದೇಶದಲ್ಲಿ ಉಪಚುನಾವಣೆ ಸದ್ಯಕ್ಕೆ ಅಗತ್ಯವಿಲ್ಲ. ಯಾಕೆಂದರೆ ಆಂಧ್ರದಿಂದ ಖಾಲಿಯಾದ ಲೋಕಸಭೆ ಸ್ಥಾನಗಳು ಒಂದು ವರ್ಷಕ್ಕಿಂತ ಕಡಿಮೆ ಅವಧಿಯದ್ದಾಗಿರುತ್ತದೆ ಎಂದು ಸ್ಪಷ್ಟಪಡಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link