ಚಿತ್ರದುರ್ಗ;
ಚಂದ್ರವಳ್ಳಿ ಎಸ್.ಜೆ.ಎಂ. ಕಾಲೇಜಿನ ಎನ್.ಎಸ್.ಎಸ್. ಘಟಕಗಳ ವತಿಯಿಂದ ಬೆಳಗಟ್ಟ ಗ್ರಾಮದಲ್ಲಿ ಎನ್ ಎಸ್ ಎಸ್ ಶಿಬಿರದ ವಿದ್ಯಾರ್ಥಿಗಳು ಗ್ರಾಮದಲ್ಲಿ ಸ್ವಚ್ಚತಾ ಅಂದೋಲನ ಹಾಗೂ ಸಸಿ ನಡೆವಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರುಬೆಳಗಟ್ಟ ಗ್ರಾಮ ಹಾಗೂ ಶಾಲಾ ಅವರಣ ದೇವಸ್ಥಾನದ ಬಳಿಯಲ್ಲಿ ಶಿಭಿರಾರ್ಥಿಗಳು ಸ್ವಚ್ಚತೆ ಹಾಗೂ ಸಸಿ ನಡೆಲಾಯಿತು
ಉಚಿತ ದಂತ ಚಿಕಿತ್ಸೆ
ಚಂದ್ರವಳ್ಳಿ ಎಸ್.ಜೆ.ಎಂ. ಕಾಲೇಜಿನ ಎನ್.ಎಸ್.ಎಸ್. ಘಟಕಗಳ ವತಿಯಿಂದ ಬೆಳಗಟ್ಟ ಗ್ರಾಮದಲ್ಲಿ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಎಸ್. ಜೆ.ಎಂ ದಂತ ಮಹಾವಿದ್ಯಾಲಯ ವತಿಯಿಂದ ಉಚಿತ ದಂತ ಚಿಕಿತ್ಸೆ ಶಿಬಿರ ನಡೆಯಿತು
ಬೆಳಗಟ್ಟ , ಗೋನೂರು ಹಾಗೂ ಸುತ್ತ ಮುತ್ತ ಹಳ್ಳಿಯ ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಸೇರಿದಂತೆ 500 ಕ್ಕೂ ಹೆಚ್ಚು ಜನನರು ಚಿಕಿತ್ಸೆಯಲ್ಲಿ ಪಾಲ್ಗೊಂಡು ಶಿಬಿರದ ಉಪಯೋಗ ಪಡೆದುಕೊಂಡರು
ನಂತರ ಶಿಬಿರದ ಕಾರ್ಯಕ್ರಮದಲ್ಲಿ ಎಸ್. ಜೆ.ಎಂ ದಂತ ಮಹಾವಿದ್ಯಾಲಯದ ಡಾ.ಸಚಿನ್ ನಾಯ್ಕು ಮಾತನಾಡಿ ಗ್ರಾಮಾಂತರ ಪ್ರದೇಶದಲ್ಲಿ ಜನತೆ ಅರೋಗ್ಯದ ಬಗ್ಗೆ ನಿರ್ಲಕ್ಷ ವಹಿಸಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಚಿಕ್ಕ ಕಾಯಿಲೆ ಇರುವಾಗಲೇ ಚಿಕಿತ್ಸೆ ಪಡೆಯಬೇಕಾಗಿದೆ ಮುಂಜಾಗ್ರತೆ ವಹಿಸದಿದ್ದರೇ ಅಪಾಯ ಖಚಿತ ಹಲ್ಲುಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ ವಹಿಸಿದ್ದು ಹಲ್ಲುಗಳನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಪಾನ್‍ಪಾರಾಗ್ ಗುಟ್ಕಾ ಹಾಗೂ ಮಾದಕ ವಸ್ತುಗಳಿಂದ ದೂರವಿರಬೇಕು ನಿಮ್ಮ ಜೀವನವನ್ನು ಸಂಪೂರ್ಣ ಹಾಳು ಮಾಡುವುದರೊಂದಿಗೆ ನಿಮ್ಮ ಕುಟುಂಬವನ್ನು ಹಾಳು ಮಾಡುತ್ತದೆ ಅರೋಗ್ಯ ಚೆನ್ನಾಗಿಟ್ಟುಕೊಂಡರೇ ಜೀವನವೇ ಸುಂದರವಾಗಿರತ್ತದೆ ಎಂದು ತಿಳಿಸಿದರು ವೇದಿಕೆಯಲ್ಲಿ ಎನ್ ಎಸ್ ಎಸ್ ಘಟಕಗಳ ಅಧಿಕಾರಿಗಳಾದ ಹೆಚ್.ಸತೀಷ್‍ನಾಯ್ಕ. ಬಿ.ರೇವಣ್ಣ ಉಪಸ್ಥತರಿದ್ದರು