ಸ್ವಚ್ಛತೆ ಅಭಿಯಾನ

ಹಿರಿಯೂರು:

      ವಿಜಯಬ್ಯಾಂಕ್ ಹಿಂಭಾಗದಲ್ಲಿರುವ ಯೂರೋಕಿಡ್ಸ್ ಶಾಲೆಯ ಪುಟಾಣಿ ಮಕ್ಕಳಿಂದ ತ್ರಿಚಕ್ರ ಸೈಕಲ್‍ನಲ್ಲಿ ಸ್ವಚ್ಛತೆ ಅಭಿಯಾನ ಕಾರ್ಯಕ್ರಮ ನಡೆಸಿದರು.

       ನಗರದ ತೇರುಮಲ್ಲೇಶ್ವರಸ್ವಾಮಿ ದೇವಾಲಯದ ಮುಂಭಾಗದಿಂದ ಪ್ರಾರಂಭಗೊಂಡ ಅಭಿಯಾನದಲ್ಲಿ, ಸ್ವಚ್ಛತೆ ಕಾಪಾಡಿ, ನೀರು ಉಳಿಸಿ, ಮರಗಿಡ ಬೆಳೆಸಿ, ಪರಿಸರ ಸಂರಕ್ಷಿಸಿ, ಎಂಬ ಅನೇಕ ನಾಮಫಲಕಗಳ ಪ್ರದರ್ಶನ ಮಾಡಿದರು. ಬೇಕರಿ ಹೋಟೆಲ್ ಮತ್ತಿತರೆ ಕಡೆ ಕಸದ ಪುಟ್ಟಿಗಳನ್ನು ವಿತರಿಸಿದರು ನಂತರ ಪ್ರಮುಖ ಬೀದಿಗಳ ಮೂಲಕ ನಗರಸಭೆ ಕಛೇರಿವರೆಗೆ ಸಾಗಿ ಪೌರಾಯುಕ್ತರಾದ ರಮೇಶ್ ಸುಣಗಾರ್‍ರವರಿಗೆ ಮನವಿ ಅರ್ಪಿಸಿದರು.

       ಈ ಕಾರ್ಯಕ್ರಮವನ್ನು ಸಮಾಜ ಸೇವಕರಾದ ಶ್ರೀಮತಿ ಶಶಿಕಲಾರವಿಶಂಕರ್ ಹಾಗೂ ಪಿ.ಎಸ್.ಐ ಮಂಜುನಾಥ್ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಶಶಿಕಲಾರವಿಶಂಕರ್‍ರವರು ಹಿರಿಯೂರಿನಲ್ಲಿ ಯೂರೋಕಿಡ್ಸ್ ಶಾಲೆಯ ಪುಟಾಣಿ ಮಕ್ಕಳಿಂದ ಸ್ವಚ್ಛತೆ ಅಭಿಯಾನ ನಡೆಸುತ್ತಿರುವುದು ತುಂಬಾ ಸಂತೊಷ ತಂದಿದೆ ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

      ಪಿ.ಎಸ್.ಐ ಮಂಜುನಾಥ್‍ರವರು ಮಾತನಾಡಿ, ಅಂಗಡಿ ಬೇಕರಿ ಹೋಟೆಲ್ ಮತ್ತಿತರೆ ಕಡೆ ಕಡ್ಡಾಯವಾಗಿ ಕಸದ ಪುಟ್ಟಿಗಳನ್ನು ಇಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷರಾದ ಹೆಚ್.ಯು.ಘನಶಂಕರ್, ಖಜಾಂಚಿ ಕುಮಾರೇಶ್ ಹಾಗೂ ಪುಟಾಣಿ ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು.

 

Recent Articles

spot_img

Related Stories

Share via
Copy link