ಕಸಾಪುರ ಗ್ರಾಮದಲ್ಲಿ ಮರೀಚಿಕೆಯಾದ ಸ್ವಚ್ಚತೆ ..!

ಮಿಡಿಗೇಶಿ

        ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಕಸಾಪುರ ಗ್ರಾಮದಲ್ಲಿ ಕಳೆದ ಎರಡು ಮೂರು ವರ್ಷಗಳಿಂದಲೂ ಗ್ರಾಮದಲ್ಲಿನ ಯಾವುದೇ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ. ಆದ್ದರಿಂದ ಸದರಿ ಚರಂಡಿಗಳು ಪಾಚಿಕಟ್ಟಿ, ಹುಲ್ಲು ಬೆಳೆದು ಸೊಳ್ಳೆಗಳ ಸಂತಾನೋತ್ಪತ್ತಿಗೆ ಹೇಳಿ ಮಾಡಿಸಿದಂತಿವೆ.

         ಇದರಿಂದ ಇಲ್ಲಿ ಅತಿ ಹೆಚ್ಚಿನದಾಗಿ ಬಡಕುಟುಂಬದವರು, ಕೂಲಿನಾಲಿ ಮಾಡಿಕೊಂಡು ಜೀವನ ನಡೆಸುತ್ತಿರುವಂತಹ ಎಸ್.ಸಿ, ಎಸ್.ಟಿ ಹಾಗೂ ಸಾಮಾನ್ಯ ವರ್ಗದವರೇ ವಸಿಸುತ್ತಿರುತ್ತಾರೆ.

          ಚರಂಡಿಗಳು ಸ್ವಚ್ಚತೆ ಮಾಡದೆ ಇರುವುದರಿಂದ ಎಲ್ಲ ಸಾಮಾನ್ಯ ಜನತೆಗೆ, ನೆಗಡಿ, ಕೆಮ್ಮು, ಜ್ವರ, ಮಲೇರಿಯಾ ಜ್ವರ ಡೆಂಗ್ಯೂ ಜ್ವರ, ಟೈಪಾಯ್ಡ್ ಜ್ವರ, ತಲೆನೋವು, ಚಿಕನ್ ಗುನ್ಯಾ, ಹಂದಿ ಜ್ವರ, ಇತ್ತೀಚಿನ ದಿನಗಳಲ್ಲಿ ಬೇರೆ ಬೇರೇ ಜಿಲ್ಲೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮಂಗನ ಕಾಯಿಲೆ ಇತ್ಯಾದಿ ಕಾಯಿಲೆಗಳು ಜನತೆಗೆ ಕಾಣಿಸಿಕೊಳ್ಳುವ ಮುನ್ನ ಸಂಬಂಧಿಸಿದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳವರು ಹಾಗೂ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕಿನ ನೂತನ ಶಾಸಕರು ಸೇರಿದಂತೆ ಎಲ್ಲಾ ಚುನಾಯಿತ ಜನ ಪ್ರತಿನಿಧಿಗಳವರು ದಯವಿಟ್ಟು ಕಸಾಪುರ ಗ್ರಾಮದಲ್ಲಿನ ಚರಂಡಿಗಳ ದುರಸ್ಥಿ, ಸ್ವಚ್ಚತೆ ಹಾಗೂ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಸ್ವಚ್ಛತೆ ಹಾಗೂ ಸಿಸ್ಟನ್‍ಗಳನ್ನು, ಸ್ವಚ್ಛಗೊಳಿಸುವುದರೊಂದಿಗೆ ಗ್ರಾಮದಲ್ಲಿನ ಬೀದಿ ದೀಪಗಳಿಗೆ ಬಲ್ಪ್ ಗಳನ್ನು ಅಳವಡಿಸಿ ಜನತೆಗೆ ರಾತ್ರಿ ಸಮಯದಲ್ಲಿ ಬೆಳಕಿನ ವ್ಯವಸ್ಥೆಯನ್ನು ಮಾಡಿಸಿಕೊಡಬೇಕೆಂದು ಪತ್ರಿಕೆಯ ಮೂಲಕ ಒಂದುನೂರಕ್ಕೂ ಅತ್ಯಧಿಕ ಜನರ ಸಹಿಯೊಂದಿಗೆ ಆಗ್ರಹಿಸಿರುತ್ತಾರೆ.

        ಒಂದೆರಡು ದಿನಗಳಲ್ಲಿ ಈ ಮೇಲ್ಕಂಡ ದುರಸ್ಥಿ ಕಾರ್ಯಗಳು ನಡೆಯದೆ ಇದ್ದ ಪಕ್ಷದಲ್ಲಿ ಗ್ರಾಮ ಪಂಚಾಯಿತಿ ಕಛೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡುವುದಾಗಿ ಈ ಮೂಲಕ ಎಚ್ಚರಿಸಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap