ಸ್ವಚ್ಚತೆಯ ಕುರಿತು ಜನರಲ್ಲಿ ಅರಿವು ಅವಶ್ಯ

ಚಿತ್ರದುರ್ಗ;

      ಗಾಂಧೀಯ ಸೇವಾಗ್ರಾಮ ನಮಗೆ ಶಾಲ ದಿನಗಳಲ್ಲೆ ತಿಳಿದಿತ್ತು. ಶಾಲೆಗಳಲ್ಲಿ ನಮಗೆ ಸೇವಾದಳದ ಮೂಲಕ ಅಂದೇ ಸ್ವಚ್ಛತೆಯ ದೀಕ್ಷೆಯಾಯಿತುಎಂದು ಡಾ.ಶಿವಮೂರ್ತಿ ಮುರುಘಾಶರಣರು ನುಡಿದರು.

       ಶರಣ ಸಂಸ್ಕತಿಉತ್ಸವದ ಅಂಗವಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು

          ದೇಶವು ಶೌಚಾಲಯದಂತಿರಬಾರದು, ದೇಶದೇವಾಲಯವಾಗಬೇಕು, ಅದಕ್ಕೆ ಮುಖ್ಯವಾಗಿ ಸ್ವಚ್ಛತೆಯಅರಿವು ಮತ್ತುಜಾಗೃತಿ ಬೇಕು.ಸಾರ್ವತ್ರಿಕವಾಗಿ ಈ ಕಾರ್ಯ ಮಾಡಿದರೆ ಸ್ವಚ್ಛಭಾರತ ಸಾದ್ಯ.ಎಲ್ಲಿಕಸವಿರುತ್ತದೆಯೋಅಲ್ಲಿ ಕಾಯಿಲೆ ಬರುತ್ತದೆ.ಆದ್ದರಿಂದ ಸ್ವಚ್ಛತೆ ಮುಖ್ಯ,ಅದು ನಿರಂತರ ಪ್ರಕ್ರಿಯೆಯಾಗಿರಬೇಕು, ಜಾಗೃತಿ ನಿರಂತರವಿರಬೇಕು. ಶುದ್ದ ಬದುಕಿಗೆ ಬಹಿರಂಗದ ಶುದ್ದಿಯಿಂದಅಂತಃರಂಗದ ಶುದ್ದಿ ಸಾಧ್ಯವಾಗುತ್ತದೆಎಂದು ನುಡಿದರು.

       ಸ್ವಚ್ಚತೆಯ ಬಗ್ಗೆ ಬರೀ ಭಾಷಣ ಬೇಕಿಲ್ಲ. ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಇದು ಕೇವಲ ಸರ್ಕಾರ ಮಾಡುವ ಕೆಲಸವಲ್ಲ, ಪ್ರತಿಯೊಬ್ಬರ ಹೊಣೆಗಾರಿಕೆ ಎಂದು ಶರಣರು ನುಡಿದರು

      ಚಿತ್ರದುರ್ಗದ ಶ್ರೀ.ಕೃಷ್ಣ ಯಾದವಗುರುಪೀಠದ ಶ್ರೀ.ಬಸವ ಯಾದವಾನಂದಸ್ವಾಮಿಗಳು ಮಾತನಾಡಿ, ಶ್ರೀಗಳು ಸ್ವಚ್ಛಾತ ಪ್ರಿಯರು. ಗುರುಕುಲದಅಭ್ಯಾಸದ ಸಮಯದಲ್ಲೆ ನಮಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿದವರು.ಮೋದಿಜಿಯವರು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಮೊದಲೆ ಶ್ರೀಗಳು ಈ ಕಾರ್ಯವನ್ನು ಮಾಡಿದವರುಎಂದು ನುಡಿದರು.

       ಹೆಬ್ಬಾಳು ಶ್ರೀ ರುದ್ರೇಶ್ವರ ವಿರಕ್ತಮಠದ ಶ್ರೀ.ಮ.ನಿ.ಪ್ರ.ಮಹಾಂತರುದ್ರೇಶ್ವರ ಸ್ವಾಮಿಗಳು ಮಾತನಾಡಿ, ದುಷ್ಟಶಕ್ತಿಗಳೆಂದರೆ ನಮ್ಮಲ್ಲಿರುವ ಮೂಢನಂಬಿಕೆಗಳು. ಅದನ್ನುದೂರ ಮಾಡಲು ಬಯಸಿದವರು ಶ್ರೀಗಳು.ಮುಂಜಾನೆಯ ಬಹಿರಂಗದ ಕಳೆ ತೆಗೆದರೆ, ಸಂಜೆಯಅಂತಃರಂಗದ ಕಳೆ ತೆಗೆಯುತ್ತಿದ್ದಾರೆ ಶ್ರೀಗಳು.ಅವರ ಆಶಯಗಳು ನಾವುಗಳೆಲ್ಲರು ಸ್ಪಂದಿಸೋಣಎಂದು ನುಡಿದರು.
ಇದೇ ಸಂಧರ್ಭದಲ್ಲಿಜಿಲ್ಲಾ ಶಸ್ತ್ರಚಿಕಿತ್ಸಕರಾದಡಾ.ಎನ್.ಜಯಪ್ರಕಾಶ್ ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಬೋದಿಸಿದರು.

          ಈ ಸಂಧರ್ಭದಲ್ಲಿ ಹರಗುರುಚರಮೂರ್ತಿಗಳು, ಜಿಲ್ಲಾ ವಕೀಲರ ಸಂಘದಅಧ್ಯಕ್ಷಎನ್.ಬಿ.ವಿಶ್ವನಾಥ್, ತಾಲ್ಲೋಕು ವೈದ್ಯಾಧಿಕಾರಿ ಡಾ.ಪಾಲಾಕ್ಷ , ಶರಣ ಸಂಸ್ಕತಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಪಟೇಲ್ ಶಿವಕುಮಾರ್, ಕಾರ್ಯದರ್ಶಿ ಡಿ.ಎಸ್.ಮಲ್ಲಿಕಾರ್ಜುನ್, ಎಸ್.ಜೆ.ಎಮ್.ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್ ಸ್ವಾಗತಿಸಿ, ಪ್ರದೀಪ್‍ಕುಮಾರ್ ನಿರೂಪಿಸಿ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap