ಬಾಕಿ ಪ್ರಕರಣ ಶೀಘ್ರವಾಗಿ ಇತ್ಯರ್ಥ ಮಾಡಿ : ಹಂಚಾಟೆ ಸಂಜೀವಕುಮಾರ್

ಕೊರಟಗೆರೆ

    ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಹಿರಿಯ ಶ್ರೇಣಿಯ ನ್ಯಾಯಾಲಯ ಲಭ್ಯವಿದೆ. ಆದರೆ ಕೊರಟಗೆರೆ ಪಟ್ಟಣದಲ್ಲಿ ಮಾತ್ರ ಇನ್ನೂ ಇಲ್ಲದಾಗಿದೆ ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಹಂಚಾಟೆ ಸಂಜೀವಕುಮಾರ್ ವಕೀಲರೊಂದಿಗೆ ಚರ್ಚಿಸಿದರು.ಕೊರಟಗೆರೆ ಪಟ್ಟಣದ ಸಿವಿಲ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕಟ್ಟಡಗಳ ಕಾಮಗಾರಿ ಮತ್ತು ವಕೀಲರ ಭವನದ ಸ್ಥಳದ ಬಗ್ಗೆ ಶುಕ್ರವಾರ ಪರಿಶೀಲನೆ ನಡೆಸಿದ ನಂತರ ನ್ಯಾಯಾಂಗ ಅಧಿಕಾರಿವರ್ಗ ಮತ್ತು ವಕೀಲರೊಂದಿಗೆ ಸಮಾಲೋಚನೆ ನಡೆಸಿದ ವೇಳೆ ಮಾತನಾಡಿದರು. 

   ವಕೀಲರ ಸಂಘ ನೀಡಿರುವ ಹಿರಿಯ ಶ್ರೇಣಿಯ ನ್ಯಾಯಾಲಯದ ಮಂಜೂರಾತಿಯ ಮನವಿಯನ್ನು ಹೈಕೋರ್ಟಿನ ನ್ಯಾಯಮೂರ್ತಿಗಳ ಗಮನಕ್ಕೆ ತರುತ್ತೇನೆ. ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಹಳೆಯ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸುವ ಮೂಲಕ ಸಮಾಜಕ್ಕೆ ಮಾದರಿ ಆಗಬೇಕಾಗಿದೆ. ಜಾಗದ ಕೊರತೆ ಇರುವಂತಹ ಕೊರಟಗೆರೆ ನ್ಯಾಯಾಲಯ ಅಚ್ಚುಕಟ್ಟಾಗಿ ಉತ್ತಮ ಪರಿಸರದಿಂದ ಕೂಡಿದೆ ಎಂದು ತಿಳಿಸಿದರು.

    ಮಧುಗಿರಿಯ ಸಿವಿಲ್ ಜಡ್ಜ್ ಹಿರಿಯ ವಿಭಾಗದಲ್ಲಿ ಕೊರಟಗೆರೆ ತಾಲ್ಲೂಕಿಗೆ ಸಂಬಂಧಿಸಿದ ಆರ್‍ಎ, ಎಂಎ, ಎಂಸಿ, ಓಎಸ್, ಎಫ್‍ಡಿಪಿ, ಎಲ್‍ಐಸಿ, ಎಂವಿಸಿ ಸೇರಿ ಒಟ್ಟು 500ಕ್ಕೂ ಅಧಿಕ ಪ್ರಕರಣ ಬಾಕಿ ಇರುತ್ತವೆ. ವಕೀಲರು, ಕಕ್ಷಿದಾರರು ಸೇರಿದಂತೆ ಸಾರ್ವಜನಿಕರು ಮಧುಗಿರಿಗೆ ಹೋಗಿ ಬರಲು ತೊಂದರೆ ಆಗುತ್ತಿದೆ. ಆದ್ದರಿಂದ ಹಿರಿಯ ಶ್ರೇಣಿಯ ನ್ಯಾಯಾಲಯದ ಅವಶ್ಯಕತೆ ಇದೆ ಎಂದು ಕೊರಟಗೆರೆ ವಕೀಲರ ಸಂಘ ಜಿಲ್ಲಾ ನ್ಯಾಯಾಧೀಶರಿಗೆ ಮಾಹಿತಿ ನೀಡಿದರು.

    ಕೊರಟಗೆರೆ ನ್ಯಾಯಾಲಯದಲ್ಲಿ ಸಿವಿಲ್ ಜಡ್ಜ್ ಕಿರಿಯ ಶ್ರೇಣಿ ಮತ್ತು ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ನಾಲ್ಕೂವರೆ ಸಾವಿರಗಿಂತ ಅಧಿಕ ಪ್ರಕರಣ ಇತ್ಯರ್ಥವಾಗದೆ ವಕೀಲರು ಮತ್ತು ಕಕ್ಷಿದಾರರಿಗೆ ತೊಂದರೆ ಆಗುತ್ತಿದೆ. ವಕೀಲರ ಭವನದ ನಕ್ಷೆಗೆ ಸಂಘದಿಂದ ಒಪ್ಪಿಗೆ ನೀಡಲಾಗಿದೆ. ಮುಖ್ಯ ವಾಸ್ತುಶಿಲ್ಪದ ಸದರಿ ನಕ್ಷೆಯಂತೆ ನಮ್ಮ ವಕೀಲರ ಸಂಘಕ್ಕೆ ವಕೀಲರ ಭವನವನ್ನು ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು.

     ಕೊರಟಗೆರೆ ಪಟ್ಟಣದ ಸಿವಿಲ್ ನ್ಯಾಯಾಲಯದಲ್ಲಿ ಪಿಡಬ್ಲ್ಯೂಡಿ ಇಲಾಖೆ ವತಿಯಿಂದ ನಡೆಯುತ್ತಿರುವ ಕಾಮಗಾರಿಯ ದಾಖಲೆ ಮತ್ತು ಕಟ್ಟಡದ ಗುಣಮಟ್ಟ ಪರಿಶೀಲನೆ ನಡೆಸಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಪಿಡಬ್ಲ್ಯೂಡಿ ಎಇಇಗೆ ಸೂಚನೆ ನೀಡಿದರು. ನಂತರ ಶೌಚಾಲಯ ಮತ್ತು ಕುಡಿಯುವ ನೀರಿನ ಘಟಕದ ಸ್ವಚ್ಛತೆ ಪರಿಶೀಲನೆ ನಡೆಸಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ಸೂಚಿಸಿದರು.

    ಕಾರ್ಯಕ್ರಮದಲ್ಲಿ ಕೊರಟಗೆರೆ ಸಿವಿಲ್ ನ್ಯಾಯಧೀಶೆ ವಿದ್ಯಾಲಕ್ಷ್ಮೀಭಟ್, ಸಿಪಿಐ ನದಾಫ್, ಸರಕಾರಿ ಅಭಿಯೋಜಕ ಷೇಕ್‍ಮಹಮ್ಮದ್ ಅಲಿ, ವಕೀಲರ ಸಂಘದ ಅಧ್ಯಕ್ಷ ದೇವರಾಜು, ಕಾರ್ಯದರ್ಶಿ ಬಿ.ಕೆ. ನಾರಾಯಣಪ್ಪ, ವಕೀಲರಾದ ಶಿವಣ್ಣ, ಕೃಷ್ಣಮೂರ್ತಿ, ಶಿವರಾಮಯ್ಯ, ನಾಗೇಂದ್ರಪ್ಪ, ನಾಗರಾಜು, ಸಂಜೀವರಾಜು, ನರಸಿಂಹರಾಜು, ಸಂತೋಷ್, ರಾಮಚಂದ್ರಪ್ಪ, ಶಿವಕುಮಾರ್, ಹುಷೇನ್‍ಪಾಷ, ನಾಗರಾಜು, ಮಂಜುನಾಥ, ತಿಮ್ಮರಾಜು, ಕೃಷ್ಣಪ್ಪ, ಮಧುಸೂದನ್, ಸಂತೋಷಲಕ್ಷ್ಮೀ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap