ಪೊದೆ ಗಿಡ-ಗಂಟೆ, ನೀಲಿಗಿರಿ ಮರಗಳನ್ನು ತೆರವುಗೊಳ್ಳಿ : ತಹಶೀಲ್ದಾರ್

ತಿಪಟೂರು :

    ಇತ್ತೀಚೀನ ದಿನಗಳಲ್ಲಿ ಜಿಲ್ಲೆಯಾದ್ಯಂತ ಚಿರತೆಯ ಹಾವಳಿಯ ಪ್ರಕರಣಗಳು ಹಾಗೂ ಚಿರತೆಗಳು ಮನುಷ್ಯ ಹಾಗೂ ಜಾನುವಾರುಗಳ ಮೇಲೆ ದಾಳಿ ಮಾಡುವ ಪ್ರಕರಣಗಳು ಹೆಚ್ಚಾಗಿರುವುದರಿಂದ ಸಾರ್ವಜನಿಕರು ಹಾಗೂ ರೈತರು ತಮ್ಮ ತಮ್ಮ ಹೊಲ-ಗದ್ದೆ, ತೋಟಗಳಲ್ಲಿ ಬೆಳೆದಿರುವ ಪೊದೆ, ಗಿಡ-ಗಂಟೆಗಳು ನೀಲಗಿರಿ ಮರಗಳನ್ನು ತೆರವುಗೊಳಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಆರತಿ ತಿಳಿಸಿದರು.

     ತಾಲ್ಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಕರೆದಿದ್ದ ಪ್ರತಿಕಾ ಗೋಷ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಿರತೆಯು ದಟ್ಟವಾಗಿ ಬೆಳೆದಿರುವ ಪೊದೆಗಳಲ್ಲಿ ವಾಸಮಾಡುತ್ತದೆ. ಆದ್ದರಿಂದ ಸತತ 3 ವರ್ಷ ಉಳುಮೆ ಮಾಡದ ಜಮೀನಿನಲ್ಲಿ ಹೆಚ್ಚಾಗಿ ಬೆಳೆದಿರುವ ಪೊದೆಗಳನ್ನು ತೆರವುಗೊಳಿಸಿ ಕೊಳ್ಳಬೇಕು, ತಪ್ಪಿದ್ದಲ್ಲಿ ಪಹಣಿ ಕಾಲಂ11 (ಋಣ)ರಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕೊಳ್ಳಲಾಗುವುದು ಎಂದು ತಿಳಿಸಿದರು.

    ವಲಯ ಅರಣ್ಯಾಧಿಕಾರಿ ರಾಕೇಶ್ ಮಾತನಾಡಿ ಚಿರತೆ ಹಾಗೂ ಕಾಡು ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುತ್ತಿದ್ದು, ಇಂತಹ ಸಮಯಗಳಲ್ಲಿ ಸಾರ್ವಜನಿಕರು ರಾತ್ರಿ ವೇಳೆ ತೋಟ ಗದ್ಡೆಗಳಿಗೆ ಒಂಟಿಯಾಗಿ ಸಂಚಾರ ಮಾಡುವುದು, ತೋಟದ ಮನೆಗಳಲ್ಲಿ ಹೊರಗಡೆ ಜಾನುವಾರುಗಳನ್ನು ಕಟ್ಟುವುದನ್ನು ನಿಲ್ಲಿಸಬೇಕು ಹಾಗೂ ಚಿತರೆ ಕಂಡು ಬಂದರೆ ಅದಕ್ಕೆ ತೊಂದರೆ ಕೊಡಬೇಡಿ ಅದು ತನಗೆ ಅಪಾಯವಿಲ್ಲವೆಂದಾಗ ತನ್ನಿಂದ ತಾನೇ ಜಾಗವನ್ನು ಖಾಲಿಮಾಡುತ್ತದೆ. ಹಾಗೇನಾದರು ಚಿರತೆ ಕಂಡು ಬಂದರೆ ಸ್ಥಳೀಯ ಅರಣ್ಯಧಿಕಾರಿ ಕಚೇರಿ 08134-250103, ಅರಣ್ಯ ರಕ್ಷಕರಾದ ಕಸಬಾ ಹೋ 9632167622, ಹೊನ್ನವಳ್ಳಿ ಹೋಬಳಿ 9108709256, 9916340611, ಕಿಬ್ಬನಹಳ್ಳಿ ಹೋಬಳಿ 8861990630, ವಲಯ ಅರಣ್ಯಾಧಿಕಾರಿ 8970050045 ದೂರವಾಣಿಯ ಮೂಲಕ ತಿಳಿಸಿ ಎಂದರು.

    ಚಿರತೆ ಹಾಗೂ ಕಾಡು ಪ್ರಾಣಿಗಳಿಂದ ಸಾರ್ವಜನಿರಿಗೆ ಹಾಗೂ ಬೆಳೆಗೆ ಹಾನಿಯಾದರೆ ಇಲಾಖೆಯಿಂದ ಪರಿಹಾರವನ್ನು ನೀಡಲು ಸರ್ಕಾರವು ಸಿದ್ದವಿದ್ದು ಈಗಾಗಲೇ ನಮ್ಮ ತಾಲ್ಲೂಕಿನಲ್ಲಿ ಎರಡು ವರ್ಷಗಳಿಂದ 33 ಪ್ರಾಣಿ ಪ್ರಕರಣಗಳಿಂದ 3,93,000ರೂ ಬೆಳೆ ಹಾನಿಗಾಗಿ 26,500 ರೂ ವ್ಯಕ್ತಿ ಹಾನಿಗಾಗಿ 6,44,500 ರೂಗಳನ್ನು ನೀಡಲಾಗಿದೆ ಎಂದರು.

    ಪ್ರತಿಕಾಗೊಷ್ಠಿಯಲ್ಲಿ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಗ್ರಾಮಾಂತರ ಎ.ಎಸ್.ಐ ಉಮೇಶ್, ಸಣ್ಣ ನೀರಾವರಿ ಅಧಿಕಾರಿ ನಾಗರಾಜು, ಜಿಲ್ಲಾ ಪಂಚಾಯಿತಿಯ ಎ.ಇ.ಇ ರುದ್ರಸ್ವಾಮಿ ಮತ್ತಿತರರಿದ್ದರು.ವಿದ್ಯುತ್ ಇಲಾಖೆಯಿಂದ ರಾತ್ರಿ ಪಾಳಿಯಲ್ಲಿ ತ್ರೀಪೇಸ್ ವಿದ್ಯುತ್ ನೀಡುತ್ತಿದ್ದು ರೈತರು ತೋಟ-ಹೊಲ-ಗದ್ದೆಗಳಿಗೆ ನೀರು ಹಾಯಿಸಲು ಹೊಗಬೇಕಾಗಿರುತ್ತದೆ ಇದನ್ನು ಬದಲಾಯಿಸಿ ಹಗಲಿನ ವೇಳೆಯಲ್ಲಿ ವಿದ್ಯುತ್ ನೀಡಿದರೆ ಸಾರ್ವಜನಿಕರ ರಾತ್ರಿ ಸಂಚಾರ ತಪ್ಪಿ ಅನಾಹುತಗಳು ಕಡಿಮೆ ಅಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link