ಚಾಲಕರು-ಮಾಲೀಕರ ಕುಂದುಕೊರತೆ ಬಗೆಹರಿಸಿ: ಮುರಳಿಧರ ಹಾಲಪ್ಪ

ತುಮಕೂರು

      ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರು ಮತ್ತು ಮಾಲೀಕರ ಕುಂದುಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆ ಹರಿಸಬೇಕೆಂದು ಒತ್ತಾಯಿಸಿ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಹಾಗೂ ಕೆಪಿಸಿಸಿ ವಕ್ತಾರರಾದ ಮುರಳಿಧರ ಹಾಲಪ್ಪ ಅವರು ಬುಧವಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

      ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮತ್ತು ಮುಖಂಡರು, ಆಟೋ ಮತ್ತು ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರ ಜೊತೆ ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸಿ ಮಾತನಾಡಿದ ಮುರಳಿಧರ ಹಾಲಪ್ಪ ಅವರು, ಕೋವಿಡ್-19ನಿಂದ ಬಹುತೇಕ ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರ ಜೀವನ ಕಷ್ಟಕರವಾಗಿದೆ. ರಾಜ್ಯ ಸರ್ಕಾರ ಘೋಷಣೆ ಮಾಡಿರುವ 5000 ರೂ.ಗಳ ಪರಿಹಾರವು ಕೇವಲ 1.20 ಲಕ್ಷ ಚಾಲಕರಿಗೆ ಮಾತ್ರ ಸಿಕ್ಕಿದ್ದು, ಇನ್ನೂ 1.30 ಲಕ್ಷ ಮಂದಿಗೆ ಪರಿಹಾರ ಸಿಗಬೇಕಿದೆ. ಶೀಘ್ರ್ರವಾಗಿ ಎಲ್ಲಾ ಚಾಲಕರ ಖಾತೆಗೆ ಸಹಾಯಧನ ಬರುವಂತೆ ಕ್ರಮ ಕೈಗೊಳ್ಳಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

     ಮ್ಯಾಕ್ಸಿಕ್ಯಾಬ್‍ಗಳಲ್ಲಿನ ಹೆಚ್ಚುವರಿ ಆಸನಗಳನ್ನು ತಪಾಸಣೆ ನಡೆಸಿ ಜಪ್ತಿ ಮಾಡುತ್ತಿದ್ದು, ಮೋಟಾರು ಕಾಯ್ದೆ 1989ರ 151 (2) ನಲ್ಲಿ ವಿನಾಯ್ತಿ ಪಡೆದ 12+1 ಸಾಮಥ್ರ್ಯವುಳ್ಳ ವಾಹನಗಳಿಗೆ ಈಗ ವಿಧಿಸುತ್ತಿರುವ ತೆರಿಗೆಯನ್ನು 20+1 ರ ಆಸನದ ತೆರಿಗೆಗೆ ಮಂಜೂರಾತಿ ನೀಡಬೇಕು, ಕೋವಿಡ್-19 ಹಿನ್ನೆಲೆಯಲ್ಲಿ ಬಾಡಿಗೆ ಸಿಗದ ಕಾರಣ ಚಾಲಕರ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ತೆರಿಗೆ ಮತ್ತು ವಿಮೆ ದÀರಗಳನ್ನು ಕಡಿಮೆಗೊಳಿಸಬೇಕು, ಚಾಲಕರಿಗೆ ದುಡಿಮೆ ಇರದ ಕಾರಣ ವಾಹನಗಳ ಸಾಲದ ಕಂತುಗಳನ್ನು ಕಟ್ಟುವ ಶಕ್ತಿಯಿಲ್ಲದ ಕಾರಣ ಸಾಲದ ಕಂತು ಮರುಪಾವತಿ ಮುಂದೂಡಬೇಕು. ಈ ಅವಧಿಯ ಬಡ್ಡಿಗೆ ಸಂಪೂರ್ಣ ವಿನಾಯ್ತಿ ನೀಡಬೇಕೆಂದು ಮನವಿ ಮಾಡಿದರು.

    ಈಗಾಗಲೇ ನೀಡಿರುವ ಭರವಸೆಯಂತೆ ಕರ್ನಾಟಕ ಪರ್ಮಿಟ್ 1 ಸೀಟಿಗೆ 300 ರೂ. ಕಡಿತಗೊಳಿಸಬೇಕು. ಆರ್‍ಟಿಒ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಬೇಕು. ರಾಜ್ಯದಲ್ಲಿ ಸುಮಾರು 7.50 ಲಕ್ಷ ಚಾಲಕರಿದ್ದು, ಅದರಲ್ಲಿ 2.50 ಲಕ್ಷ ಚಾಲಕರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲೂ ಕೂಡ ರಾಜ್ಯ ಸರ್ಕಾರ ಕೇವಲ 1.20 ಲಕ್ಷ ಚಾಲಕರಿಗೆ ಸಹಾಯಧನ ನೀಡಿದ್ದು, ಇನ್ನೂ 1.30 ಲಕ್ಷ ಚಾಲಕರಿಗೆ ಸಹಾಯಧನ ಸಿಗಬೇಕಿದೆ. ಅವರಿಗೆ ಚಾಲನಾ ಪರವಾನಗಿಯಲ್ಲಿ ಸಮಸ್ಯೆಗಳಿದ್ದರೆ ಅಂತಹವರಿಗೆ ಶೀಘ್ರವಾಗಿ ಸಮಸ್ಯೆ ಬಗೆಹರಿಸಿ ಪರಿಹಾರ ಧನ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

     ಮನವಿ ಸ್ವೀಕರಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು ಮಾತನಾಡಿ, ನಿಮ್ಮ ಮನವಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಿಕೊಟ್ಟು ಶೀಘ್ರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

     ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಜಿಪಂ ಸದಸ್ಯ ಕೆಂಚಮಾರಯ್ಯ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮ್ಮದ್, ಮುಖಂಡರಾದ ರೇವಣಸಿದ್ಧಯ್ಯ, ಮರಿಚೆನ್ನಮ್ಮ, ನಟರಾಜು, ಎನ್‍ಎಸ್‍ಯುಐ ಜಿಲ್ಲಾಧ್ಯಕ್ಷ ಸುಮುಖ್ ಕೊಂಡವಾಡಿ ಮೊದಲಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap