ಕೀಟಗಳ ತೊಂದರೆ ನಿವಾರಿಸಲು ಅಧಿಕಾರಿಗಳಿಗೆ ಶಾಸಕರ ಸೂಚನೆ

ಹರಿಹರ

 
    ನಗರದ ಹೊರವಲಯದಲ್ಲಿರುವ ಗಂಗಾನಗರ ನಿವಾಸಿಗಳಿಗೆ ಕೀಟದ ತೊಂದರೆ ನಿವಾರಿಸಲು ಅಧಿಕಾರಿಗಳಿಗೆ ಶಾಸಕ ಎಸ್.ರಾಮಪ್ಪ ಸೂಚನೆ ನೀಡಿದ್ದಾರೆ.
     ಕೃಷಿ ಉತ್ಪನ್ನ ಮಾರುಕಟ್ಟೆ (ಎ.ಪಿ.ಎಂ.ಸಿ) ಆವರಣದಲ್ಲಿರುವ ಗೋದಾಮು (ಗೋಡೋನ್) ಗಳಲ್ಲಿ ದಾಸ್ತಾನು ಮಾಡಿರುವ ದವಸ ದಾನ್ಯ ಗಳಲ್ಲಿನ ಕೀಟಗಳು ಗಂಗಾನಗರ ನಿವಾಸಿಗಳಿಗೆ ಸಂಜೆ ವೇಳೆ ಮತ್ತು ರಾತ್ರಿ 10.30 ಗಂಟೆಯವರೆಗೆ ತೊಂದರೆ ಕೊಡುತ್ತಿವೆ. ಕೀಟಗಳ ನಿಯಂತ್ರಣಕ್ಕೆ ಶೀಘ್ರವಾಗಿ ಕ್ರಮ ಕೈಕೊಳ್ಳುವಂತೆ ಗೋದಾಮು ವ್ಯವಸ್ಥಾಪಕರಿಗೆ ಶಾಸಕರು ಸೂಚಿಸಿದ್ದಾರೆ.
      ಗಂಗಾನಗರ ಬಡಾವಣೆಯ ನಿವಾಸಿಗಳು ನಗರಸಭೆ ಸದಸ್ಯ ಎಂ.ಎಸ್.ವಸಂತ್ ಗೆ ಸಮಸ್ಯೆ ಯ ಬಗ್ಗೆ ದೂರಿದ ಹಿನ್ನೆಲೆಯಲ್ಲಿ ವಸಂತರವರು ಅಲ್ಲಿನ ನಿವಾಸಿಗಳೊಂದಿಗೆ ತೆರಳಿದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಶಾಸಕರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ.
       ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಸಂತ ಅವರು ಈ ಹಿಂದೆ ಗೋದಾಮುಗಳಲ್ಲಿರುವ ಧಾನ್ಯಗಳಿಗೆ ಔಷಧಿ ಸಿಂಪಡಿಸುವ ಸಂದರ್ಭದಲ್ಲಿ ಗೋದಾಮಿನ ಕಿಟಕಿಗಳನ್ನು ಮುಚ್ಚುತ್ತಿದ್ದರು.ಆದರೆ ಇತ್ತೀಚೆಗೆ ಕಿಟಕಿಗಳನ್ನು ಮುಚ್ಚದೆ ಔಷಧಿ ಸಿಂಪಡಣೆ ಮಾಡುತ್ತಾರೆ ಹೀಗಾಗಿ ಈ ಸಮಸ್ಯೆ ಉದ್ಭವವಾಗಿದೆ.
       ಕಪ್ಪು ಹಾಗೂ ಕೆಂಪು ಬಣ್ಣದ ನುಸಿ ಮಾದರಿ ಯ ಕೀಟಗಳು ಹೊರಗಡೆ ಬಂದು ಪಕ್ಕದಲ್ಲಿರುವ ಗಂಗಾನಗರದ ನಿವಾಸಿಗಳ ಕುಡಿಯುವ ನೀರು ಮತ್ತು ಊಟದಲ್ಲಿ ಸೇರಿಕೊಂಡು ಸಮಸ್ಯೆ ಯಾಗುತ್ತಿದೆ ಆದ್ದರಿಂದ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತ ರಾಗಬೇಕು.
       ಮುಂದಿನ ದಿನಗಳಲ್ಲಿ ಅಧಿಕಾರಿಗಳು ಈ ಸಮಸ್ಯೆಯನ್ನು ಸರಿಪಡಿಸದೆ ಹೋದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸುವುದರ ಜೊತೆಗೆ ಹೋರಾಟ ಮಾಡಲಾಗುವುದು ಎಂದು ಮಾಹಿತಿ ನೀಡಿದರು.ಈ ಸಮಯದಲ್ಲಿ ರಾಜು ಹಂಚಿನ, ಹುಸೇನ್ ಸಾಬ್, ಇಂತಿಯಾಜ್ ಅಲ್ಲದೆ ಅನೇಕ ಮುಖಂಡ ರುಗಳು ಹಾಗೂ ಗಂಗಾನಗರದ ನಿವಾಸಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link