ಬೆಂಗಳೂರು:
ರಾಜ್ಯದಲ್ಲಿ ನೈಋತ್ಯ ಮುಂಗಾರು ದುರ್ಬಲಗೊಂಡಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಿದೆ.ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆ ಸುರಿದ ವರದಿ ಬಂದಿದೆ.
ನಾರಾಯಣಪುರ 5, ಕುಂದಾಪುರ 3, ಮುದ್ಗಲ್, ಸಿರಗುಪ್ಪ 2, ಕೋಟಾ ಮತ್ತು ಬಾದಾಮಿಯಲ್ಲಿ ಒಂದು ಸೆಂಟಿಮೀಟರ್ ಮಳೆಯಾಗಿದೆ. ಮುನ್ಸೂಚನೆಯಂತೆ ಉತ್ತರ ಒಳನಾಡಿನ ಕೆಲವೆಡೆ, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆ ಅಥವಾ ತುಂತುರು ಮಳೆಯಾಗುವ ಸಂಭವವಿದೆ.ಬೆಂಗಳೂರು ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಕೂಡಿದ ಮಳೆಯಾಗುವ ನಿರೀಕ್ಷೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








